ನಾನು ಊರಿಗೆ ಹೋಗ್ತೀನಿ.. ಬಸ್‌ ಬುಕ್‌ ಮಾಡಿ..! – ಬಿಗ್‌ ಬಾಸ್‌ನಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ಯಾಕೆ ಹನುಮಂತ?

ನಾನು ಊರಿಗೆ ಹೋಗ್ತೀನಿ.. ಬಸ್‌ ಬುಕ್‌ ಮಾಡಿ..! – ಬಿಗ್‌ ಬಾಸ್‌ನಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ಯಾಕೆ ಹನುಮಂತ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಗೆ ಹಳ್ಳಿ ಹೈದ ಹನುಮಂತ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಿದ್ರು. ದೊಡ್ಮನೆಗೆ ಬಂದ ಹನುಮಂತ ಚೆನ್ನಾಗಿ ಆಟ ಆಡ್ತಿದ್ದಾರೆ. ಧನರಾಜ್‌ ಹಾಗೂ ಹನುಮಂತ ಫ್ರೆಂಡ್‌ಶಿಪ್‌ ಕೂಡ ವೀಕ್ಷಕರಿಗೆ ಇಷ್ಟ ಆಗಿದೆ. ಆದ್ರೀಗ ಹಳ್ಳಿಹೈದನಿಗೆ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಅಶ್ವಿನ್ ರದ್ದು ಆರಂಭ ಮಾತ್ರ – ಟೀಂ ಇಂಡಿಯಾದಲ್ಲಿ ವಿದಾಯದ ಪರ್ವ

ದೊಡ್ಮನೆಯಲ್ಲಿ ಹನುಮಂತ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರ ಆಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಪ್ರತಿ ವಾರ ನಾಮಿನೇಟ್ ಆದರೂ ಅವರು ಮೊದಲು ಸೇವ್ ಆಗುತ್ತಿದ್ದಾರೆ. ಅವರು ಆಟವನ್ನು ಯಾವ ರೀತಿಯಲ್ಲಿ ಆಡುತ್ತಿದ್ದಾರೆ ಎಂಬುದಕ್ಕೆ ಹಿಡಿದ ಕೈಗನ್ನಡಿ ಆಗಿದೆ. ಈ ಮಧ್ಯೆ ಹನುಮಂತ ಅವರು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಅದಕ್ಕೆ ಕಾರಣ 12ನೇ ವಾರದಲ್ಲಿ ಕ್ಯಾಪ್ಟನ್ಸಿ ರೇಸ್​ ಟಾಸ್ಕ್‌.

ಕ್ಯಾಪ್ಟನ್ಸಿ ರೇಸ್‌ ಟಾಸ್ಕ್‌ನಲ್ಲಿ ಆರು ಮಂದಿ ಇದ್ದರು. ಇದನ್ನು ಐದಕ್ಕೆ ಇಳಿಕೆ ಮಾಡಲು ಒಂದು ಟಾಸ್ಕ್ ನೀಡಲಾಗಿತ್ತು. ಪಕ್ಷಪಾತಿ, ಜನ ನಿರ್ವಹಣೆಯಲ್ಲಿ ಅಶಕ್ತ ಈ ರೀತಿಯ ನಾಲ್ಕು ಆಯ್ಕೆ ನೀಡಲಾಗಿತ್ತು. ಕ್ಯಾಪ್ಟನ್ಸಿ ರೇಸ್​ನಲ್ಲಿ ಇರುವ ಆರು ಮಂದಿಯ ಪೈಕಿ ಒಬ್ಬರ ಗುಣ ಯಾವುದಕ್ಕೆ ಹೊಂದಿಕೆ ಆಗುತ್ತದೆ ಎಂಬುದನ್ನು ಹೇಳಿ ಆ ಬಳಿಕ ಅವರನ್ನು ಸ್ವಿಮ್ಮಿಂಗ್​ಪೂಲ್​ಗೆ ತಳ್ಳಬೇಕು.

‘ಜನ ನಿರ್ವಹಣೆಯಲ್ಲಿ ಅಶಕ್ತ’ ಮತ್ತಿತ್ಯಾದಿ ಆಯ್ಕೆಯಲ್ಲಿ ಹನುಮಂತ ಅವರು ಭವ್ಯಾ ಹೆಸರನ್ನು ತೆಗೆದುಕೊಂಡರು. ಆದರೆ, ಇದನ್ನು ಭವ್ಯಾ ಅವರು ಒಪ್ಪಿಕೊಳ್ಳಲೇ ಇಲ್ಲ. ಬದಲಿಗೆ ಹನುಮಂತ ಬಳಿ ವಾದಕ್ಕೆ ಇಳಿದರು. ಈ ವಾದವನ್ನು ಮುಂದುವರಿಸಲು ಹನುಮಂತಗೆ ಯಾವುದೇ ಆಸಕ್ತಿ ಇರಲಿಲ್ಲ. ಹೀಗಾಗಿ, ಅವರು ಸುಮ್ಮನಾದರು. ಆದರೆ, ಭವ್ಯಾ ಮಾತ್ರ ಏನೇನೋ ಮಾತನಾಡುತ್ತಲೇ ಇದ್ದರು. ಈ ವಿಚಾರ ಭವ್ಯಾಗೆ ಬೇಸರ ಮೂಡಿಸಿದೆ.

‘ದೋಸ್ತಾ ಬಸ್ ಬುಕ್ ಮಾಡು, ಊರಿಗೆ ಹೋಗ್ತೀನಿ’ ಎಂದು ಹನುಮಂತ ಹೇಳಿದರು. ಇದನ್ನು ಕೇಳಿ ಧನರಾಜ್​ಗೆ ಶಾಕ್ ಆಯಿತು. ಅವರು ಹನುಮಂತನ ಸಮಾಧಾನ ಮಾಡಲು ಪ್ರಯತ್ನಿಸಿದರು. ಆದರೆ, ಹನುಮಂತ ಅವರು ಇದಕ್ಕೆ ಒಪ್ಪಿಲ್ಲ. ‘ಇಲ್ಲಿ ನೆನಪು ಇಟ್ಟುಕೊಂಡು ಮಾತನಾಡುವವರು ಬೇಕು. ಆದರೆ, ನನಗೆ ಯಾವುದೂ ನೆನಪಿನಲ್ಲಿ ಇರಲ್ಲ. ಅಷ್ಟುದ್ದ ಮಾತನಾಡೋಕೆ ಬರಲ್ಲ. ನನಗೆ ನೆನಪಿನ ಶಕ್ತಿ ಕಡಿಮೆ ಇದೆ’ ಎಂದಿದ್ದಾರೆ ಹನುಮಂತ.

Shwetha M