ಬಿಗ್‌ ಮನೆಗೆ ಹನುಮನೇ ಬಾಸ್‌.. ಮೋಸ ಮಾಡಿದವರಿಗೆ ಠಕ್ಕರ್‌! – ಹುಲಿಯನ್ನ ತಪ್ಪಾಗಿ ಅಂದಾಜಿಸಿದ್ರಾ?

ಬಿಗ್‌ ಮನೆಗೆ ಹನುಮನೇ ಬಾಸ್‌.. ಮೋಸ ಮಾಡಿದವರಿಗೆ ಠಕ್ಕರ್‌! – ಹುಲಿಯನ್ನ ತಪ್ಪಾಗಿ ಅಂದಾಜಿಸಿದ್ರಾ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ. ಸ್ಪರ್ಧಿಗಳಿಗೆ ಬಿಗ್​ಬಾಸ್​ ಕೊಡುವ ಟಾಸ್ಕ್​ಗಳು ಟಫ್ ಆಗುತ್ತಿವೆ. ಇನ್ನೇನು 3 ವಾರಗಳಲ್ಲಿ​ ಬಿಗ್​ಬಾಸ್​​ ಗ್ರ್ಯಾಂಡ್​ ಫಿನಾಲೆ ನಡೆಯಲಿದೆ. ನಿನ್ನೆಯ ಎಪಿಸೋಡ್‌ ನಲ್ಲಿ ಫಿನಾಲೆ ಟಿಕೆಟ್​ ಪಡೆಯಲು ಬಿಗ್ ಬಾಸ್​ ಟಾಸ್ಕ್‌ ನೀಡಿದ್ರು.. ಇದ್ರಲ್ಲಿ ಘಟಾನುಘಟಿಗಳು ಗಪ್‌ಚಿಪ್ ಆಗುವಂತೆ ಆಟ ಆಡಿ ಫಿನಾಲೆ ಟಿಕೆಟ್ ಅನ್ನು ಸಿಂಪಲ್ ಸ್ಟಾರ್ ಹನುಮಂತ ಪಡೆದುಕೊಂಡಿದ್ದಾರೆ. ಫಿನಾಲೆ ಟಿಕೆಟ್‌ ಗೆದ್ದ ಹನುಮಂತುಗೆ ದೊಡ್ಮನೆಯ ಮತ್ತೊಂದು ಅಧಿಕಾರ ಕೂಡ ಸಿಕ್ಕಿದೆ.

ಇದನ್ನೂ ಓದಿ: ಪಾಕ್ ಮಿ*ಲಿಟರಿ ವೇಸ್ಟ್- ಪಾಕಿಸ್ತಾನದೊಳಗೆ ತಾಲಿಬಾನ್ ವಿಧ್ವಂಸ

ಬಿಗ್​ಬಾಸ್​ ಮನೆಯಲ್ಲಿ ಟೈಟಲ್ ಗೆಲ್ಲಲು ಸ್ಪರ್ಧಿಗಳ ಸರ್ಕಸ್ ಜೋರಾಗಿದೆ. ಫಿನಾಲೆ ಹತ್ತಿರವಾಗ್ತಿದ್ದಂತೆ ದೊಡ್ಮನೆಯಲ್ಲಿ ಎಂಟರ್ಟೈನ್ಮೆಂಟ್​ಗಳ ಧಮಾಕಾ ಸೃಷ್ಟಿ ಆಗ್ತಿದೆ. ಇದರ ಮಧ್ಯೆ ಫಿನಾಲೆಗೆ ಯಾರ್ಯಾರು ಎಂಟ್ರಿ ನೀಡ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ಫಿನಾಲೆ ದಿನಣನೆ ಆರಂಭವಾಗ್ತಿದ್ದಂತೆ  ಸ್ಪರ್ಧಿಗಳಿಗೆ ಹೊಸ ಹೊಸ, ಟಫ್​ ಟಾಸ್ಕ್​ಗಳನ್ನು ಕೊಡುತ್ತಿದ್ದಾರೆ ಬಿಗ್​ಬಾಸ್​​. ಇದೀಗ ಹನುಮಂತ ಬಿಗ್​ಬಾಸ್ ನೀಡಿದ ಟಾಸ್ಕ್​​ಗಳನ್ನು ಅದ್ಭುತವಾಗಿ ಆಡಿ ಪ್ರಬಲ ಸ್ಫರ್ಧಿ ತಾನು ಅಂತಾ ಹೇಳ್ಕೊಂಡು ಬೀಗ್ತಿದ್ದವರಿಗೆಲ್ಲಾ ಠಕ್ಕರ್‌ ನೀಡಿದ್ದಾರೆ. ಫಿನಾಲೆ ಟಿಕೆಟ್‌ ಟಾಸ್ಕ್‌ ನಲ್ಲಿ ಗೆದ್ದು, ಅವರು ನೇರವಾಗಿ ಫಿನಾಲೆಗೆ ಎಂಟ್ರಿ ನೀಡಿದ್ದಾರೆ ಹನುಮಂತ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಗೆ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಿದ್ದ ಹನುಮಂತ ಆರಂಭದಲ್ಲೇ ಒಂದು ಹವಾ ಕ್ರಿಯೆಟ್‌ ಮಾಡಿದ್ರು.. ಸಿಕ್ಕಾಪಟ್ಟೆ ಸಿಂಪಲ್ ಆಗಿ ಕಾಣಿಸುವ ಹನುಮಂತ ಸಾಮಾನ್ಯ ವ್ಯಕ್ತಿ ಅಲ್ಲ ಸಹ ಸ್ಪರ್ಧಿಗಳು ಮಾತ್ರವಲ್ಲ ವೀಕ್ಷಕರು ಕೂಡ ಹೇಳಿದ್ರು.. ಸದಾ ದೋಸ್ತಾ ದೋಸ್ತಾ ಅಂತಾ ಧನರಾಜ್‌ ಜೊತೆನೇ ಇರ್ತಿದ್ದ ಹನುಮ.. ಆಟದ ವಿಚಾರಕ್ಕೆ ಬಂದ್ರೆ 100 ಪರ್ಸೆಂಟ್‌ ಕಮಿಟ್‌ ಆಗ್ತಿದ್ರು.. ಆಟದಲ್ಲಿ ಹನು ಚುರುಕುತನಕ್ಕೆ ಯಾರೂ ಸರಿಸಾಟಿ ಇಲ್ಲ. ಹೆಚ್ಚೇನೂ ಲೆಕ್ಕಾಚಾರ ಹಾಕದ ಹನುಮಂತ ಆಟದ ಮೇಲೆ ಸಂಪೂರ್ಣ ಗಮನ ನೀಡುತ್ತಾರೆ. ಯಾವುದೇ ಟೆನ್ಷನ್​ ಮಾಡಿಕೊಳ್ಳದೇ ಟಾಸ್ಕ್​ ಆಡುತ್ತಾರೆ. ಅದರ ಫಲವಾಗಿ ಅವರಿಗೆ ಈಗಾಗಲೇ ಅನೇಕರ ಮೆಚ್ಚುಗೆ ಸಿಕ್ಕಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ‘ಬಿಗ್ ಬಾಸ್​ ಕನ್ನಡ 11’ ಕಾರ್ಯಕ್ರಮದ ಮೊದಲ ಫಿನಾಲೆ ಸ್ಪರ್ಧಿಯಾಗಿ ಆಯ್ಕೆ ಆಗಿದ್ದಾರೆ. ಸದ್ಯ ಬಿಗ್ ಬಾಸ್​ ಮನೆಯಲ್ಲಿ ಇರುವ ಇನ್ನುಳಿದ 8 ಘಟಾನುಘಟಿ ಸ್ಪರ್ಧಿಗಳನ್ನೂ ಮೀರಿಸಿ ಹನುಮಂತ ಈ ಸಾಧನೆ ಮಾಡಿದ್ದಾರೆ.

ಹೌದು, ನಿನ್ನೆಯ ಎಪಿಸೋಡ್‌ ನಲ್ಲಿ ಫಿನಾಲೆ ಟಿಕೆಟ್​ ಪಡೆಯಲು ಬಿಗ್ ಬಾಸ್​ ಒಂದು ಟಾಸ್ಕ್ ನೀಡಿದ್ದರು. ಯಾರು ಅತಿ ಕಡಿಮೆ ಸಮಯ ತೆಗೆದುಕೊಂಡು ಈ ಟಾಸ್ಕ್ ನಿಭಾಯಿಸುತ್ತಾರೋ ಅವರಿಗೆ ಫಿನಾಲೆಗೆ ಎಂಟ್ರಿ ಸಿಗಲಿದೆ ಎಂದು ಘೋಷಿಸಲಾಗಿತ್ತು. ಈ ಟಾಸ್ಕ್‌ ನಲ್ಲಿ ಹತ್ತೋದು, ಇಳಿಯೋದು.. ಓಡೋದು ಹೀಗೆ ಫಿಸಿಕಲ್‌ ಟಾಸ್ಕ್‌ ಜೊತೆಗೆ ಬುದ್ದಿವಂತಿಕೆಯೂ ಯೂಸ್‌ ಮಾಡ್ಬೇಕಿತ್ತು.. ಇದು ಹನುಮನಿಗೆ ಪ್ಲಸ್‌ ಆಗಿತ್ತು.. ಯಾಕಂದ್ರೆ ಹನುಮಂತ ಹಳ್ಳಿಯಲ್ಲಿದ್ದವರು.. ಕುರಿ ಮೇಯಿಸ್ತಾ ಮರ ಹತ್ತಿ ಇಳಿಯೋದು ಎಲ್ಲವೂ ಗೊತ್ತಿತ್ತು.. ಹೀಗಾಗಿ ಈ ಟಾಸ್ಕ್‌ ನಲ್ಲಿ ಗೆಲ್ಲಲು ಈಸಿ ಆಯ್ತು..

ಇನ್ನು ಫಿನಾಲೆ ಟಿಕೆಟ್‌ ರೇಸ್‌ ನಲ್ಲಿ ಹನುಮಂತ ಜೊತೆಗೆ  ಭವ್ಯಾ ಗೌಡ, ರಜತ್ ತ್ರಿವಿಕ್ರಮ್ ಇದ್ರು.. ಭವ್ಯಾ ಗೌಡ 3 ನಿಮಿಷ 22 ಸೆಕೆಂಡ್​​ ನಲ್ಲಿ ಟಾಸ್ಕ್‌ ಮುಗಿಸಿದ್ರು.. ರಜತ್  3 ನಿಮಿಷ 49 ಸೆಕೆಂಡ್ ಟಾಸ್ಕ್‌ ಮುಗಿಸಲು ತೆಗೆದುಕೊಂಡ್ರೆ, ತ್ರಿವಿಕ್ರಮ್ 2 ನಿಮಿಷ 30 ಸೆಕೆಂಡ್​ ಪಡೆದುಕೊಂಡರು.  ಹನುಮಂತ ಕೇವಲ 2 ನಿಮಿಷ 27 ಸೆಕೆಂಡ್​ ತೆಗೆದುಕೊಂಡು ಈ ಟಾಸ್ಕ್‌ ನಲ್ಲಿ ಜಯ ಸಾಧಿಸಿದರು. ಆದ್ರೆ ಕೇವಲ 3 ಸೆಕೆಂಡ್​ ಅಂತರದಲ್ಲಿ ಸೋತಿದ್ದಕ್ಕೆ ತ್ರಿವಿಕ್ರಮ್ ತುಂಬಾ ಬೇಸರ ಮಾಡಿಕೊಂಡ್ರು. ಇಲ್ಲಿಯ ತನಕ ಬಂದು ಫಿನಾಲೆ ಟಿಕೆಟ್ ಮಿಸ್ ಮಾಡಿಕೊಂಡಿದ್ದಕ್ಕೆ ಭವ್ಯಾ ಗೌಡ ಕೂಡ ಸಖತ್ ಬೇಸರ ಮಾಡಿಕೊಂಡಿದ್ರು.. ಟಾಸ್ಕ್ ವೈಯಕ್ತಿಕ ಸಾಮಾರ್ಥ್ಯದ ಮೇಲೆ ನಿರ್ಧಾರವಾಗಿದ್ದರಿಂದ.. ಇಲ್ಲಿ ಯಾರೂ ಕೂಡ ಯಾರನ್ನೂ ಮೋಸ ಮಾಡಲು ಆಗಿಲ್ಲ. ಘಟಾನುಘಟಿ ಸ್ಪರ್ಧಿಗಳೆಲ್ಲರೂ ಹನುಮಂತನ ಆಟವನ್ನು ತಲೆ ಬಾಗಿ ಒಪ್ಪಿಕೊಂಡಿದ್ದಾರೆ.

ಇನ್ನು ದೊಡ್ಮನೆಗೆ ನಿನ್ನೆ ಗೆಸ್ಟ್‌ ಕೂಡ ಬಂದಿದ್ರು.. ‘ಛೂ ಮಂತರ್​’ ಸಿನಿಮಾದ ನಾಯಕ ನಟ ಶರಣ್ ಹಾಗೂ ನಾಯಕಿ ಅದಿತಿ ಪ್ರಭುದೇವ ಬಿಗ್ ಬಾಸ್ ಮನೆಗೆ ಬಂದಿದ್ರು.. ಈ ವೇಳೆ ಹನುಮಂತನಿಗೆ ಫಿನಾಲೆಯ ಟಿಕೆಟ್​ ನೀಡಿದ್ರು.. ಹನುಮಂತನ ಈ ಗೆಲುವಿಗೆ ಎಲ್ಲರೂ ಅಭಿನಂದನೆ ತಿಳಿಸಿದರು. ಈ ವಾರ ಕೆಟ್ಟ ನಿರ್ಧಾರದಿಂದ ತಾನೂ ಸೋತು ಗೌತಮಿ ಸೋಲಿಗೂ ಕಾರಣವಾಗಿದ್ದ ಉಗ್ರಂ ಮಂಜುಗೆ ಸ್ಪರ್ಧಿಗಳೆಲ್ಲಾ ಸೇರಿ ಕಳಪೆ ಪಟ್ಟ ಕೊಟ್ಟಿದ್ದಾರೆ. ಪ್ರತಿ ವಾರ ಕಳಪೆ ಪಡೆಯುತ್ತಿದ್ದ ಚೈತ್ರಾ ಕುಂದಾಪುರ ಈ ವಾರ ಉತ್ತಮ ಪಡೆದುಕೊಂಡಿದ್ದಾರೆ.

ಇನ್ನು ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಯಾರ ಬಳಿಯೂ ದ್ವೇಷ ಕಟ್ಟಿಕೊಂಡಿಲ್ಲ. ಹಾಗಂತ ಅವರು ತಮ್ಮ ಅಭಿಪ್ರಾಯವನ್ನು ಹೇಳದೇ ಉಳಿದಿಲ್ಲ. ಎಲ್ಲವನ್ನೂ ಶುದ್ಧ ಮನಸ್ಸಿನಿಂದ ಹೇಳಿದ್ದರಿಂದ ಅವರನ್ನು ಯಾರೂ ದ್ವೇಷಿಸುತ್ತಿಲ್ಲ. ಹೊರಗೆ ಕೂಡ ಹನುಮಂತ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ವೈಲ್ಡ್ ಕಾರ್ಡ್​ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ಹನುಮಂತ ಅಂತಮವಾಗಿ ಫಿನಾಲೆ ಘಟ್ಟಕ್ಕೆ ಬಂದಿದ್ದಾರೆ. ಅಲ್ಲದೇ ಈ ಸೀಸನ್​ನ ಕೊನೆಯ ಕ್ಯಾಪ್ಟನ್ ಆಗಿ ಕೂಡ ಅವರು ಆಯ್ಕೆ ಆಗಿದ್ದಾರೆ. ಆದ್ದರಿಂದ ಅವರನ್ನು ಅಲ್ಟಿಮೇಟ್​ ಕ್ಯಾಪ್ಟನ್​ ಎಂದು ಘೋಷಿಸಲಾಗಿದೆ. ಇದೀಗ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟ ಹನುಮಂತ ಸೀಸನ್‌ 11 ವಿನ್ನರ್‌ ಆಗ್ತಾರಾ ಅಂತಾ ಕಾದು ನೋಡ್ಬೇಕು.

Shwetha M