ಶನಿವಾರದಂದು ಹನುಮಂತನ ಪೂಜೆಯಲ್ಲಿ ಇರಲಿ ಈ ಐದು ವಸ್ತುಗಳು

ಶನಿವಾರದಂದು ಹನುಮಂತನ ಪೂಜೆಯಲ್ಲಿ ಇರಲಿ ಈ ಐದು ವಸ್ತುಗಳು

ಹನುಮಂತನನ್ನು ಕಲಿಯುಗದ ಚಿರಂಜೀವಿ ದೇವರೆಂದು ಭಕ್ತರು ನಂಬುತ್ತಾರೆ ಭಕ್ತಿ ಮತ್ತು ಶ್ರದ್ಧೆಯಿಂದ ಹನುಮಂತನ ಆರಾಧನೆ ಮಾಡಿದರೆ ಜೀವನದಲ್ಲಿನ ವಿಘ್ನಗಳು ದೂರವಾಗಿ, ಧೈರ್ಯ, ಆರೋಗ್ಯ ಹಾಗೂ ಮನಶಾಂತಿ ಲಭಿಸುತ್ತದೆ ಎಂಬುದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶನಿವಾರದಂದು ಹನುಮಂತನ ಪೂಜೆಯ ವೇಳೆ ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸಿದರೆ ಶುಭಫಲಗಳು ಸಿಗಲಿವೆ.   ಆ ವಸ್ತುಗಳು ಯಾವೆಲ್ಲಾ ಅನ್ನೋದ್ದನ್ನ ನೋಡೋಣ.

ತೆಂಗಿನಕಾಯಿ

ಶನಿವಾರ ಅಥವಾ ಮಂಗಳವಾರದಂದು ಹನುಮಂತನಿಗೆ ಸಿಂಧೂರ ಲೇಪಿಸಿ, ಕಲವಾವನ್ನು ಕಟ್ಟಿ ತೆಂಗಿನಕಾಯಿಯನ್ನು ಅರ್ಪಿಸುವುದು ಶುಭಕರವೆಂದು ಪರಿಗಣಿಸಲಾಗಿದೆ. ನಿರಂತರ 11 ಮಂಗಳವಾರ ಈ ರೀತಿ ಪೂಜೆ ಮಾಡಿದರೆ ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ ಇದೆ. ಬಳಿಕ ಆ ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸಾಸಿವೆಯೊಂದಿಗೆ ಮನೆಯ ಬಾಗಿಲಿಗೆ ಕಟ್ಟಿದರೆ ದುಷ್ಟಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಲವಂಗ, ಏಲಕ್ಕಿ ಮತ್ತು ಅಡಿಕೆ

ಶನಿವಾರದಂದು ಲವಂಗ, ಏಲಕ್ಕಿ ಹಾಗೂ ಅಡಿಕೆಯನ್ನು ಹನುಮಂತನಿಗೆ ನೈವೇದ್ಯವಾಗಿ ಅರ್ಪಿಸಿದರೆ ಶನಿದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಎಣ್ಣೆಯ ದೀಪದಲ್ಲಿ ಲವಂಗ ಹಾಕಿ ಆ ದೀಪದಿಂದ ಆರತಿ ಮಾಡಿದರೆ ಧನಲಾಭ, ಸುಖ-ಸಮೃದ್ಧಿ ಹಾಗೂ ಕಷ್ಟ ನಿವಾರಣೆ ಆಗುತ್ತದೆ ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ: ದೇವಾಲಯದಲ್ಲಿ ಎಷ್ಟು ಪ್ರದಕ್ಷಿಣೆ ಹಾಕಬೇಕು? – ಲಾಭವೇನು ಗೊತ್ತಾ?

ಬೆಲ್ಲ ಮತ್ತು ಹುರಿಗಡಲೆ

ಅನೇಕ ಹನುಮಂತ ದೇವಾಲಯಗಳಲ್ಲಿ ಬೆಲ್ಲ ಹಾಗೂ ಹುರಿಗಡಲೆಯನ್ನು ಪ್ರಸಾದವಾಗಿ ನೀಡುವ ಸಂಪ್ರದಾಯವಿದೆ. ಈ ನೈವೇದ್ಯವನ್ನು ಅರ್ಪಿಸುವುದರಿಂದ ಮಂಗಳದೋಷದ ಪರಿಣಾಮ ಕಡಿಮೆಯಾಗುತ್ತದೆ ಹಾಗೂ ಹನುಮಂತನ ಕೃಪೆ ಶೀಘ್ರವಾಗಿ ಲಭಿಸುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಮಂಗಳವಾರ ಮತ್ತು ಶನಿವಾರ ಈ ಪ್ರಸಾದವನ್ನು ಅರ್ಪಿಸುವುದು ವಿಶೇಷ ಫಲಕಾರಿಯೆಂದು ಹೇಳಲಾಗುತ್ತದೆ.

ವೀಳ್ಯದೆಲೆ

ಯಾವುದೇ ಒಂದು ಆಸೆ ಬಹಳ ದಿನಗಳಿಂದ ಈಡೇರದೆ ಇದ್ದರೆ, ಹನುಮಂತನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಸಭರಿತವಾದ ವೀಳ್ಯದೆಲೆಯನ್ನು ಅರ್ಪಿಸುವುದು ಶುಭಕರವೆಂದು ನಂಬಲಾಗಿದೆ. ಇದರಿಂದ ಮನಸ್ಸಿನ ಇಷ್ಟಾರ್ಥಗಳು ನೆರವೇರುವಂತೆ ಹನುಮಂತನ ಅನುಗ್ರಹ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

 ಸಿಹಿತಿಂಡಿ 

ಹನುಮಂತನಿಗೆ ಇಮರ್ತಿ ಅಥವಾ ಸಿಹಿತಿಂಡಿಯನ್ನು ನೈವೇದ್ಯವಾಗಿ ಅರ್ಪಿಸಿದರೆ ಅವರು ಪ್ರಸನ್ನರಾಗುತ್ತಾರೆ ಎಂಬ ನಂಬಿಕೆಯಿದೆ. ಇದರಿಂದ ಜೀವನದಲ್ಲಿನ ಸಂಕಷ್ಟಗಳು ಕಡಿಮೆಯಾಗುವುದರ ಜೊತೆಗೆ ಮನಸ್ಸಿನ ಬಯಕೆಗಳು ಈಡೇರುತ್ತವೆ ಎಂದು ಭಕ್ತರು ನಂಬುತ್ತಾರೆ.

Kishor KV

Leave a Reply

Your email address will not be published. Required fields are marked *