ಮಂಡ್ಯದಲ್ಲಿ ಹನುಮ ಧ್ವಜ ಸಂಘರ್ಷದ ಕಿಚ್ಚು! – ಕೈ ಶಾಸಕರ ಬ್ಯಾನರ್‌ಗೆ ಕಲ್ಲೆಸೆದು ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು
ರಾಜ್ಯದಲ್ಲಿ ಮತ್ತೊಂದು ಕಿಚ್ಚು ಹೊತ್ತಿಕೊಂಡಿದೆ. ವಿಪಕ್ಷಗಳು ಮತ್ತು ರಾಜ್ಯ ಸರ್ಕಾರದ ನಡುವೆ ಹನುಮ ಯುದ್ಧ ಶುರುವಾಗಿದೆ. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಸಂಘರ್ಷ ತಾರಕಕ್ಕೇರಿದೆ. ಇದೇ ವಿಚಾರದಲ್ಲಿ ಹೋರಾಟದ ಕಿಚ್ಚು ಹೆಚ್ಚಾಗಿದೆ. ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕಾಳಿಕಾಂಬ ದೇವಾಲಯದ ಬಳಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಕಾಂಗ್ರೆಸ್ ಬ್ಯಾನರ್ ಕಾಣುತ್ತಿದ್ದಂತೆ ಕೆಲ ಯುವಕರು ಹರಿದು ಹಾಕಿ ಕಲ್ಲು ತೂರಾಟ ನಡೆಸಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಮನೆಯ ಸಿಂಹಿಣಿಗೆ ಸೋಲು – ಕರ್ನಾಟಕದ ಕ್ರಷ್ ಸಂಗೀತಾ ಎಡವಿದ್ದು ಎಲ್ಲಿ?
ಸೋಮವಾರ ಕೆರಗೋಡುನಿಂದ ನಗರದವರೆಗೆ ಗ್ರಾಮಸ್ಥರು ಪಾದಯಾತ್ರೆ ಕೈಗೊಂಡಿದ್ದರು. ಈ ವೇಳೆ ಗ್ರಾಮಸ್ಥರಿಗೆ ಜೆಡಿಎಸ್-ಕಾಂಗ್ರೆಸ್ನವರು ಸಾಥ್ ನೀಡಿದ್ದಾರೆ. ನಗರಕ್ಕೆ ಪಾದಯಾತ್ರೆ ಎಂಟ್ರಿ ಕೊಡುತ್ತಿದ್ದಂತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ಕೈ ನಾಯಕರ ಬ್ಯಾನರ್ ಕಾಣುತ್ತಿದ್ದಂತೆ ಅವುಗಳನ್ನು ಹರಿದುಹಾಕಿದ್ದಾರೆ. ಕೆಲ ಪ್ಲೆಕ್ಸ್ಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೋರ್ವನ ಮೇಲೆ ಕಲ್ಲು ಬಿದ್ದಿದು ಗಾಯಗೊಂಡಿದ್ದಾರೆ. ಪರಿಸ್ಥಿತಿ ಬಿಗುಡಾಯಿಸುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು ಪೊಲೀಸರು ಮತ್ತು ಹಿಂದೂ ಯುವಕರ ನಡುವೆ ಬಿರುಸಿನ ವಾಗ್ವಾದವೇ ನಡೆಯಿತು.
ಹಳೆ ಮೈಸೂರು-ಬೆಂಗಳೂರು ಹೆದ್ದಾರಿಯ ನಂದ ವೃತ್ತದ ವರೆಗೆ ಗ್ರಾಮದಿಂದ ಒಟ್ಟು 13 ಕಿಲೋ ಮೀಟರ್ವರೆಗೆ ಪಾದಯಾತ್ರೆ ಸಾಗಿ ಬಂದಿದೆ. ನಂದ ವೃತ್ತದಿಂದ ಡಿಸಿ ಕಚೇರಿಯತ್ತ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದ್ದು ಡಿಸಿ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದು 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.