ಬಿಗ್ ಬಜೆಟ್ ತೆಲುಗು ಸಿನಿಮಾ “ಹನು-ಮಾನ್” ಟೀಸರ್ ರಿಲೀಸ್

ಬಿಗ್ ಬಜೆಟ್ ತೆಲುಗು ಸಿನಿಮಾ “ಹನು-ಮಾನ್” ಟೀಸರ್ ರಿಲೀಸ್

ಪ್ರೈಮ್ ಶೋ ಎಂಟರ್  ಟೈನ್ಮೆಂಟ್  ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ  ತೆಲುಗು ಸಿನಿಮಾ “ಹನು-ಮಾನ್”  ಟೀಸರ್ ಬಿಡುಗಡೆಯಾಗಿದೆ. ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಿರುವ ತೇಜ ಸಜ್ಜ ನಟನೆಯ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ. ಪ್ರೇಕ್ಷಕರೆದುರು ಬಂದಿರುವ ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ.

ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ಪ್ರತಿಭಾವಂತ ನಟ ತೇಜ ಸಜ್ಜ, ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ. ನಾಯಕ ನಟ ತೇಜ ಸಜ್ಜ ಲುಕ್, ಚಿತ್ರದ ಮೇಕಿಂಗ್, ಕ್ಯಾಮೆರಾ ವರ್ಕ್, ಮ್ಯೂಸಿಕ್ ಎಲ್ಲವೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಸಿನಿಮಾ ಆಫರ್ ನಿರಾಕರಿಸಿದ ಶಾರುಖ್ ಪುತ್ರ ಆರ್ಯನ್ ಖಾನ್

ವರಲಕ್ಷಿ ಶರತ್ ಕುಮಾರ್,  ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. ಯುವ ಹಾಗೂ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್, ಎಸ್. ಬಿ ರಾಜು ತಲರಿ ಸಂಕಲನ ಚಿತ್ರಕ್ಕಿದೆ.

ಕೆ. ನಿರಂಜನ್ ರೆಡ್ಡಿ ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಡಿ ಅದ್ದೂರಿಯಾಗಿ, ಬಿಗ್ ಬಜೆಟ್ ನಲ್ಲಿ ‘ಹನು-ಮಾನ್’ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಸಿನಿಮಾ ತಂಡ ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.

suddiyaana