ಹಸೆಮಣೆಯೇರಿದ ಖ್ಯಾತ ನಟಿ ಹನ್ಸಿಕಾ – ಗೆಳೆಯ ಸೊಹೈಲ್ ಕತುರಿಯಾ ‘ಕೈ’ ಹಿಡಿದ ‘ಬಿಂದಾಸ್’ ಬೆಡಗಿ

ಹಸೆಮಣೆಯೇರಿದ ಖ್ಯಾತ ನಟಿ ಹನ್ಸಿಕಾ – ಗೆಳೆಯ ಸೊಹೈಲ್ ಕತುರಿಯಾ ‘ಕೈ’ ಹಿಡಿದ ‘ಬಿಂದಾಸ್’ ಬೆಡಗಿ

ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಅಂತಾ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಹಾಡಿ ಕುಣಿದ ಬಿಂದಾಸ್ ಹುಡುಗಿ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಹಸೆಮಣೆಯೇರಿದ್ದಾರೆ. ಉದ್ಯಮಿ ಸೊಹೈಲ್​ ಕತುರಿಯಾ ಜೊತೆ ಸಪ್ತಪದಿ ತುಳಿದಿದ್ದಾರೆ. ಡಿಸೆಂಬರ್ 4, ಭಾನುವಾರ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಹನ್ಸಿಕಾ ಸೊಹೈಲ್ ಕತುರಿಯಾ ಕೈ ಹಿಡಿದಿದ್ದಾರೆ. 450 ವರ್ಷ ಹಳೆಯದಾದ ಜೈಪುರದ ಕೋಟೆಯೊಂದಲ್ಲಿ ಹನ್ಸಿಕಾ ಮೋಟ್ವಾನಿ ಮದುವೆ ನೆರವೇರಿದೆ. ಇವರ ಮದುವೆ ಸಮಾರಂಭದಲ್ಲಿ ಕುಟುಂಬದವರು ಹಾಗೂ ಆಪ್ತರು ಮಾತ್ರ ಭಾಗಿ ಆಗಿದ್ದರು.

ಇದನ್ನೂ ಓದಿ :  ಹರಿಪ್ರಿಯ ಜೊತೆ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡ ವಸಿಷ್ಠ ಸಿಂಹ

ಹನ್ಸಿಕಾ ಹಾಗೂ ಸೊಹೈಲ್​ ಉತ್ತಮ ಸ್ನೇಹಿತರಾಗಿದ್ದು, ನಂತರ ಪ್ರೇಮಿಗಳಾಗಿ, ಈಗ ಜೊತೆಯಲ್ಲೇ ಸಪ್ತಪದಿ ತುಳಿದಿದ್ದಾರೆ.  ಡಿಸೆಂಬರ್​ 2ರಿಂದಲೇ ಹನ್ಸಿಕಾ ಮೋಟ್ವಾನಿ ಹಾಗೂ ಸೊಹೈಲ್​ ಮದುವೆಯ ಶಾಸ್ತ್ರಗಳು ಆರಂಭ ಆಗಿದ್ದವು. ಕೆಂಪು ಲೆಹೆಂಗಾ ಧರಿಸಿ ಹನ್ಸಿಕಾ ಮಿಂಚಿದ್ದರೆ, ಸೊಹೈಲ್​ ಅವರು ಶೇರ್ವಾನಿ ಧರಿಸಿ ಸೂಪರ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ನವ ದಂಪತಿಗೆ ಶುಭಾಶಯ ತಿಳಿಸುತ್ತಿದ್ದಾರೆ.

31ನೇ ವಯಸ್ಸಿಗೆ ಕಾಲಿಟ್ಟಿರುವ ಹನ್ಸಿಕಾ ಮೋಟ್ವಾನಿ, ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಹೃತಿಕ್​ ರೋಷನ್​ ನಟನೆಯ ‘ಕೋಯಿ ಮಿಲ್​ ಗಯಾ’ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿ ಗಮನ ಸೆಳೆದಿದ್ದರು. ಬಳಿಕ ಹೀರೋಯಿನ್​ ಆಗಿ ಬಡ್ತಿ ಪಡೆದುಕೊಂಡರು. ತಮಿಳು, ತೆಲುಗು, ಮಲಯಾಳಂ, ಕನ್ನಡದಲ್ಲಿ ಅಭಿನಯಿಸಿದ್ದರು.

suddiyaana