ಚಿಪ್ಸ್‌ ಪ್ಯಾಕೆಟ್‌ ಕದ್ದು ಜೈಲು ಪಾಲಾದ ಖ್ಯಾತ ನಟ – ಸೆಲೆಬ್ರಿಟಿಯಾದವನಿಗೆ ಇದೆಲ್ಲಾ ಬೇಕಿತ್ತಾ?

ಚಿಪ್ಸ್‌ ಪ್ಯಾಕೆಟ್‌ ಕದ್ದು ಜೈಲು ಪಾಲಾದ ಖ್ಯಾತ ನಟ – ಸೆಲೆಬ್ರಿಟಿಯಾದವನಿಗೆ ಇದೆಲ್ಲಾ ಬೇಕಿತ್ತಾ?

ಕೆಲವರು ಎಷ್ಟೇ ದೊಡ್ಡ ಸೆಲೆಬ್ರಿಟಿಗಳಾದ್ರೂ ಅವರಿಗೆ ಒಂದಲ್ಲ ಒಂದು ಕೆಟ್ಟ ಚಟ ಇದ್ದೇ ಇರುತ್ತದೆ. ಕೆಲವರಿಗೆ ಕುಡಿತದ ಚಟ ಇದ್ರೆ, ಇನ್ನೂ ಕೆಲವರಿಗೆ ಸಿಗರೇಟು ಸೋದೋ ಚಟ ಇರುತ್ತದೆ. ಇನ್ನು ಸೆಲೆಬ್ರಿಟಿಗಳು ಕದ್ದು ಸಿಕ್ಕಿ ಹಾಕಿಕೊಳ್ಳುವುದು ಇದೇ ಮೊದಲೇನಲ್ಲ. ಫ್ರಾನ್ಸ್‌ನಲ್ಲಿ ಆಭರಣ ಕದಿಯುವ ಮೂಲಕ ಬಾಲಿವುಡ್ ನಟಿ ರೇಖಾ ಸುದ್ದಿಯಾಗಿದ್ದರು. ಹಾಲಿವುಡ್ ಬೆಡಗಿ ಲಿಂಡ್ಸೆ ಲೋಹನ್ ಕೂಡ ಕೋಟ್ಯಂತರ ಮೊತ್ತದ ವಜ್ರದ ನೆಕ್ಲೇಸ್‌ನ್ನು ವಜ್ರಾಭರಣ ಮಳಿಗೆಯಿಂದ ಕದ್ದು ಸುದ್ದಿಯಾದರು. ಇದೀಗ ಮತ್ತೊಬ್ಬ ಸೆಲೆಬ್ರಿಟಿ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಆತ ಕದ್ದಿದ್ದೇನು ಎಂದು ತಿಳಿದರೆ ನೀವು ಅಚ್ಚರಿಯಾಗುವುದಂತು ಪಕ್ಕಾ!

ಮಾಜಿ ಡಿಸ್ನಿ ಸ್ಟಾರ್‌,  ಅಮೆರಿಕಾದ ಖ್ಯಾತ  ಸಿರೀಸ್ ಹನ್ನಾ ಮೊಂಟಾನಾ ಖ್ಯಾತಿಯ ನಟ ಮಿಚೆಲ್ ಮುಸ್ಸು  ಅವರನ್ನು ಪೊಲೀಸರು ಕಳ್ಳತನ ಪ್ರಕರಣವೊಂದರಲ್ಲಿ ಬಂಧಿಸಿದ್ದಾರೆ. ಆತ ಕದ್ದಿರುವುದು ದುಬಾರಿ ಬೆಲೆಯ ವಸ್ತುವನ್ನಲ್ಲ. ಆತ ಕದ್ದಿರುವುದು ಕೇವಲ ಚಿಪ್ಸ್ ಪ್ಯಾಕೇಟ್ ಕದ್ದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆತ ಕುಡಿದು ತೂರಾಡಿ  ಸಾರ್ವಜನಿಕರಲ್ಲಿ ಗಾಬರಿ ಮೂಡಿಸಿದ್ದಾನೆ. ಕುಡಿದು ತೂರಾಡಿ ರಂಪರಾಮಾಯಣ ಮಾಡಿದ್ದರಿಂದ ಆತ ಈಗ ಕಂಬಿ ಎಣಿಸುವಂತೆ ಆಗಿದೆ.

ಇದನ್ನೂ ಓದಿ: ಚಂದ್ರಯಾನ – 3 ಸಕ್ಸಸ್‌ ಬೆನ್ನಲ್ಲೇ ಹೊಸ ಕ್ರಾಂತಿಗೆ ಮುಂದಾದ ಇಸ್ರೋ – ಆದಿತ್ಯ-ಎಲ್ 1 ಉಡಾವಣೆಗೆ ಮುಹೂರ್ತ ಫಿಕ್ಸ್!

ಸಾರ್ವಜನಿಕ ಸ್ಥಳದಲ್ಲಿ ಕುಡಿದು ತೂರಾಡಿದ್ದಲ್ಲದೆ ಕಳ್ಳತನವೆಸಗಿದ್ದ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂದು  ಯುಎಸ್ಎ ಟುಡೆ ವರದಿ ಮಾಡಿದೆ. ಟೆಕ್ಸಾಸ್‌ನ ಡಲ್ಲಾಸ್‌ನ ಉಪನಗರವಾದ ರಾಕ್‌ವಾಲ್‌ನಲ್ಲಿ ರಾತ್ರಿ ಮಿಚೆಲ್  ಅವರನ್ನು ಬಂಧಿಸಲಾಗಿದೆ. ಸ್ಥಳೀಯ ಹೊಟೇಲೊಂದರಲ್ಲಿ ಗಲಾಟೆಯಾಗುತ್ತಿರುವ ಬಗ್ಗೆ ಯಾರೋ ಪೊಲೀಸರಿಗೆ ಕರೆ ಮಾಡಿ ತಿಳಿಸಿದ ಹಿನ್ನೆಲೆ ಸ್ಥಳಕ್ಕೆ ಬಂದ ಪೊಲೀಸರು ಮಿಚೆಲ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.

ರಾಕ್‌ವಾಲ್ ಪೊಲೀಸ್ ಇಲಾಖೆ ಹೊರಡಿಸಿರುವ ಪ್ರಕಟಣೆಯ ಪ್ರಕಾರ, 32 ವರ್ಷದ ನಟ ಮಿಚೆಲ್ ಹೋಟೆಲ್‌ಗೆ ಹೋಗಿ ಹಣ ಪಾವತಿಸದೇ ಅಲ್ಲಿ ಚಿಪ್ಸ್ ಪ್ಯಾಕೇಟ್ ತೆಗೆದುಕೊಂಡಿದ್ದಾರೆ. ಶಾಪ್ ಮಾಲೀಕರು ಹಣ ಕೇಳಿದಾಗ  ಮೊದಲೇ ಪಾನಮತ್ತನಾಗಿದ್ದ ಮಿಚೆಲ್ ಅವಾಚ್ಯ ಪದಗಳಿಂದ ಅವರನ್ನು ನಿಂದಿಸಿದ್ದಾನೆ ಅಲ್ಲದೇ ಹಣ ನೀಡದೇ ಹೊರಟು ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಬಂದು ಆತನನ್ನು ಕರೆದೊಯ್ದಿದ್ದಾರೆ.

ಪಾನಮತ್ತನಾಗಿದ್ದ ಮಿಚೆಲ್ ಮುಸ್ಸೊ ಹೊಟೇಲ್ ಹೊರಗೆ ತೂರಾಡಿ ಗಲಾಟೆ ಮಾಡಿದ್ದು ಸೆಕ್ಷನ್‌ 100 ರ ಅಡಿ ಎರಡು ಪ್ರಕರಣಗಳನ್ನು ಈತನ ವಿರುದ್ಧ ದಾಖಲಿಸಲಾಗಿದೆ. ಬಂಧನದ ಬಳಿಕ ಅವರನ್ನು ರಾಕ್‌ವಾಲ್ ಕೌಂಟಿ  ಡಿಟೆನ್ಶನ್ ಸೆಂಟರ್‌ ಸೇರಿಸಲಾಗಿತ್ತು. ಒಂದು ರಾತ್ರಿ ಜೈಲಿನಲ್ಲಿ ಕಳೆದ ನಂತರ ಅವರನ್ನು ಬಿಡುಗಡೆಗೊಳಿಸಲಾಗಿದೆ.

ಈ ಡಿಸ್ನಿ ಸ್ಟಾರ್ ಬಂಧನಕ್ಕೊಳಗಾಗಿ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ, 2011ರಲ್ಲಿ ಕುಡಿದು ವಾಹನ ಚಾಲನೆ ಮಾಡಿದ ಆರೋಪದಡಿ ಈತನ ಬಂಧನವಾಗಿತ್ತು. ಆಗ 20ರ ಹರೆಯದವರಾಗಿದ್ದ ಮಿಚೆಲ್‌ನನ್ನು ಕ್ಯಾಲಿಫೋರ್ನಿಯಾದ ಬುರ್ಬಾಂಕ್‌ನಲ್ಲಿ ಬಂಧಿಸಲಾಗಿತ್ತು. ಈ ಮಿಚೆಲ್ ಮುಸ್ಸು ಡಿಸ್ನಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಶೋ ‘ಹನ್ನಾ ಮೊಂಟಾನಾ’ ಸೀರಿಸ್‌ನಲ್ಲಿ ಖ್ಯಾತ ಗಾಯಕಿ ಹಾಗೂ ನಟಿ ಮಿಲ್ಲೆ ಸೈರಸ್‌  ಅವರ ಬೆಸ್ಟ್‌ ಫ್ರೆಂಡ್ ಒಲಿವರ್ ಒಕೆನ್ ಪಾತ್ರದಲ್ಲಿ ನಟಿಸಿದ್ದರು.

suddiyaana