ಹಿಮಾಚಲಪ್ರದೇಶದಲ್ಲಿ ನಿರ್ಮಾಣವಾಗಲಿದೆ ಹ್ಯಾಂಗಿಂಗ್ ರೆಸ್ಟೋರೆಂಟ್ – ಏನೇನು ವಿಶೇಷತೆಯಿದೆ?
ಶಿಮ್ಲಾ: ಹಿಮಾಚಲಪ್ರದೇಶದ ಬಿಲಾಸ್ ಪುರದ ಮಂಡಿ ಬರಾರಿ ಜಂಕ್ಷನ್ ನಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಹ್ಯಾಂಗಿಂಗ್ ರೆಸ್ಟೋರೆಂಟ್ ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಬಿಬಿಎಂಬಿ ಸಹಯೋಗದೊಂದಿಗೆ ಹ್ಯಾಂಗಿಂಗ್ ರೆಸ್ಟೋರೆಂಟ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಡಿಸಿ ಪಂಕಜ್ ರಾಯ್ ತಿಳಿಸಿದ್ದಾರೆ.
ಇದನ್ನೂ ಓದಿ: ಆಕಾಶದಲ್ಲಿ ನಿಗೂಢ ಸುರುಳಿಯಾಕೃತಿ – ಏನಿದು ವಿಜ್ಞಾನ ವಿಸ್ಮಯ?
ಈ ಹ್ಯಾಂಗಿಂಗ್ ರೆಸ್ಟೋರೆಂಟ್ ನಲ್ಲಿ ಫುಡ್ ಪ್ಲಾಜಾ, ಅಗತ್ಯ ವಸ್ತುಗಳ ಅಂಗಡಿಗಳು, ಎಟಿಎಂ, ಶೌಚಾಲಯ, ಸ್ನಾನಗೃಹ, ವೈದ್ಯಕೀಯ ವ್ಯವಸ್ಥೆ, ಮಕ್ಕಳಿಗೆ ಪಾರ್ಕ್ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಅಲ್ಲದೇ ಸ್ಥಳೀಯ ಕೃಷಿ ಉತ್ಪನ್ನ, ಕರಕುಶಲ ವಸ್ತುಗಳ ಮಾರಾಟಕ್ಕೆ ಗ್ರಾಮೀಣ ಮಾರುಕಟ್ಟೆಯನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ.
ಶಿಮ್ಲಾ-ಚಂಬಾ ಮತ್ತು ಚಂಡೀಗಢ-ಮನಾಲಿ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಈ ಪ್ರದೇಶದಲ್ಲಿ ರಸ್ತೆ ಬದಿಯ ಸೌಕರ್ಯ, ವಾಹನ ಪಾರ್ಕಿಂಗ್ ಗೆ ಹೆಚ್ಚು ಬೇಡಿಕೆ ಇರುವ ಪ್ರದೇಶವಾಗಿದೆ. ದೂರ ಪ್ರಯಾಣದ ಸಂದರ್ಭದಲ್ಲಿ ಪ್ರವಾಸಿಗರು ಡಾಬಾ ಮತ್ತು ಹೋಟೆಲ್‌ಗಳಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಹಾಗಾಗಿ ಪ್ರವಾಸಿಗರಿಗೆ ಉತ್ತಮ ಸೌಲಭ್ಯ, ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.