ಭಾರತದಲ್ಲಿ ನೂರಾರು ಬಲಿ ತೆಗೆದ ತೂಗುಸೇತುವೆ ದುರಂತಗಳ ಹಿನ್ನೋಟ ಇಲ್ಲಿದೆ…

ಭಾರತದಲ್ಲಿ ನೂರಾರು ಬಲಿ ತೆಗೆದ ತೂಗುಸೇತುವೆ ದುರಂತಗಳ ಹಿನ್ನೋಟ ಇಲ್ಲಿದೆ…

ಭಾರತದಲ್ಲಿ ನೂರಾರು ಬಲಿ ತೆಗೆದ ತೂಗುಸೇತುವೆ ದುರಂತಗಳ ಹಿನ್ನೋಟ ಇಲ್ಲಿದೆ…

ಗುಜರಾತ್​ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನಗಳಷ್ಟು ಹಳೆಯ ತೂಗು ಸೇತವೆ ಭಾನುವಾರ ಕುಸಿದು ಬಿದ್ದಿದೆ. ಈಗಾಗಲೇ ಸಾವಿನ ಸಂಖ್ಯೆ 141ಕ್ಕೇರಿಕೆಯಾಗಿದ್ದು, ಇನ್ನೂ ಸಾಕಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಘಟನೆಯಂದಾಗಿ ಇಡೀ ದೇಶವೇ ಬೆಚ್ಚಿಬಿದ್ದಿದ್ದು, ಅದೇ ರೀತಿ ಹಿಂದೆಯೂ ಇಂತಹ ದುರ್ಘಟನೆಗಳು ನಡೆದಿದ್ದು, ಈ ವೇಳೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ.

2021ರಲ್ಲಿ ಮೆಕ್ಸಿಕೋ ಸೇತುವೆ ದುರಂತ

ಮೆಕ್ಸಿಕೋ ಸಿಟಿ ಮೆಟ್ರೋ ವ್ಯವಸ್ಥೆಯಲ್ಲಿನ ಎತ್ತರದ ಭಾಗವು ಮೇ ತಿಂಗಳಲ್ಲಿ ಕುಸಿದು ಪ್ರಯಾಣಿಕರ ರೈಲು ಅಪಘಾತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ 26 ಜನರು ಸಾವನ್ನಪ್ಪಿದ್ದರು ಮತ್ತು ಅನೇಕರು ಗಾಯಗೊಂಡಿದ್ದರು.

2016ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಸೇತುವೆ ದುರಂತ

ಭಾರತದ ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದ ಜನನಿಬಿಡ ರಸ್ತೆಯ ಮೇಲೆ 2016ರ ಮಾರ್ಚ್‌ನಲ್ಲಿ ಫ್ಲೈಓವರ್ ಕುಸಿದು ಕನಿಷ್ಠ 26 ಜನರು ಮೃತಪಟ್ಟಿದ್ದರು. ಬೃಹತ್ ಕಾಂಕ್ರೀಟ್ ಚಪ್ಪಡಿಗಳು ಮತ್ತು ಲೋಹದ ಅಡಿಯಲ್ಲಿ ಸಿಲುಕಿದ್ದ ಸುಮಾರು 100 ಜನರನ್ನು ರಕ್ಷಣಾ ಪಡೆಗಳು ರಕ್ಷಿಸಿದ್ದರು.

2011ರಲ್ಲಿ ಪಶ್ಚಿಮ ಬಂಗಾಳದ ಸೇತುವೆ ದುರಂತ

2011ರ ಅಕ್ಟೋಬರ್‌ನಲ್ಲಿ ಭಾರತದ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಈಶಾನ್ಯ ಭಾರತದಲ್ಲಿ ಹಬ್ಬದ ಜನಸಂದಣಿಯಿಂದ ತುಂಬಿದ ಸೇತುವೆ ಕುಸಿದು ಕನಿಷ್ಠ 32 ಜನರು ಸಾವನ್ನಪ್ಪಿದ್ದರು. ಈ ಘಟನೆ ನಡೆದ ಒಂದು ವಾರದ ನಂತರ ಅರುಣಾಚಲ ಪ್ರದೇಶದಲ್ಲಿ ನದಿಯ ಮೇಲಿನ ಕಾಲುಸಂಕ ಕುಸಿದು ಸುಮಾರು 30 ಜನರು ಸಾವನ್ನಪ್ಪಿದ್ದರು.

2007ರಲ್ಲಿ ನಡೆದ ಚೀನಾದ ಮಧ್ಯ ಹುನಾನ್​ನಲ್ಲಿ ಸೇತುವೆ ದುರಂತ

ಆಗಸ್ಟ್‌ನಲ್ಲಿ ಚೀನಾದ ಮಧ್ಯ ಹುನಾನ್ ಪ್ರಾಂತ್ಯದಲ್ಲಿ ನಿರ್ಮಾಣ ಹಂತದ ನದಿ ಸೇತುವೆಯೊಂದು ಕುಸಿದು ಬಿದ್ದು ಕನಿಷ್ಠ 64 ಕಾರ್ಮಿಕರು ಸಾವನ್ನಪ್ಪಿದ್ದರು. ಇನ್ನು ಡಿಸೆಂಬರ್‌ನಲ್ಲಿ ನೇಪಾಳ ದೇಶದ ಪಶ್ಚಿಮದಲ್ಲಿ ಯಾತ್ರಾರ್ಥಿಗಳಿಂದ ತುಂಬಿದ್ದ ಸೇತುವೆ ಕುಸಿದು ಕನಿಷ್ಠ 16 ಜನರು ಸಾವನ್ನಪ್ಪಿದ್ದರು ಮತ್ತು 25 ಮಂದಿ ಕಾಣೆಯಾಗಿದ್ದರು. ಅಪಘಾತದ ಸಮಯದಲ್ಲಿ ಸುಮಾರು 400 ಜನರು ರಾಜಧಾನಿ ಕಠ್ಮಂಡುವಿನಿಂದ ಪಶ್ಚಿಮಕ್ಕೆ 380 ಕಿಲೋಮೀಟರ್ ದೂರದಲ್ಲಿರುವ ಭೇರಿ ನದಿಯ ಕಮರಿಯ ಸೇತುವೆಯ ಮೇಲೆ ಇದ್ದರು ಎಂದು ಹೇಳಲಾಗಿದೆ. ಸುಮಾರು 100 ಜನರು ನದಿ ನೀರಿನಲ್ಲಿ ಈಜಾಡಿ ಜೀವ ಉಳಿಸಿಕೊಂಡಿದ್ದರು.

2006ರಲ್ಲಿ ಪಾಕಿಸ್ಥಾನದಲ್ಲಿ ನಡೆದ ಸೇತುವೆ ದುರಂತ

2006 ರ ಆಗಸ್ಟ್‌ನಲ್ಲಿ ಮಾನ್ಸೂನ್ ಮಳೆಯಿಂದಾಗಿ ಪಾಕಿಸ್ತಾನದ ವಾಯುವ್ಯದಲ್ಲಿರುವ ಪೇಶಾವರದಿಂದ 50 ಕಿಲೋಮೀಟರ್ ದೂರದಲ್ಲಿರುವ ಮರ್ದಾನ್‌ನಲ್ಲಿ ಸೇತುವೆ ಕೊಚ್ಚಿಹೋಗಿತ್ತು. ಈ ಘಟನೆಯಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದರು. ಡಿಸೆಂಬರ್​ ತಿಂಗಳಲ್ಲಿ ಭಾರತದ ಬಿಹಾರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ರೈಲಿನ ಮೇಲೆ 150 ವರ್ಷಗಳಷ್ಟು ಹಳೆಯದಾದ ಸೇತುವೆ ಕುಸಿದು ಕನಿಷ್ಠ 34 ಜನರು ಸಾವನ್ನಪ್ಪಿದ್ದರು.

2003ರಲ್ಲಿ ಮುಂಬೈನಲ್ಲಿ ನಡೆದ ಸೇತುವೆ ದುರಂತ

2003 ರ ಆಗಸ್ಟ್‌ನಲ್ಲಿ ಮುಂಬೈ ಬಳಿ ಸೇತುವೆ ಕುಸಿದು ಶಾಲಾ ಬಸ್ ಮತ್ತು ಇತರ ನಾಲ್ಕು ವಾಹನಗಳು ನದಿಗೆ ಬಿದ್ದಿತ್ತು. ಈ ದುರ್ಘಟನೆಯಲ್ಲಿ 19 ಮಕ್ಕಳು ಸೇರಿದಂತೆ 20 ಜನರು ಸಾವನ್ನಪ್ಪಿದ್ದರು. ಅದೇ ವರ್ಷದ ಡಿಸೆಂಬರ್‌ನಲ್ಲಿ ಬೊಲಿವಿಯಾದಲ್ಲಿ ಬಸ್‌ವೊಂದು ರಸ್ತೆ ಸೇತುವೆಯನ್ನು ದಾಟುತ್ತಿರುವಾಗ ಪ್ರವಾಹಕ್ಕೆ ಸಿಲುಕಿ ಕನಿಷ್ಠ 29 ಜನರು ಸಾವನ್ನಪ್ಪಿದ್ದರು.

suddiyaana