ಪಿಸ್ತೂಲ್ ಹಿಡಿದು ಮನಬಂದಂತೆ ಫೈರಿಂಗ್ – ಪಾಪಿ ಅಟ್ಟಹಾಸಕ್ಕೆ ಅಮಾಯಕ ಜೀವಗಳು ಬಲಿ!
ಜರ್ಮನಿಯ ಹ್ಯಾಂಬರ್ಗ್‌ನಲ್ಲಿರುವ ಚರ್ಚ್ವೊಂದರಲ್ಲಿ ದುಷ್ಕರ್ಮಿಯೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಗನ್ ಹಿಡಿದು ಮನಬಂದಂತೆ ಫೈರಿಂಗ್ ಮಾಡಿದ್ದು 8 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ಇನ್ನೂ ಎಂಟು ಜನರ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಬಂಧೂಕುದಾರಿ ಕೂಡ ಮೃತಪಟ್ಟಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಉತ್ತರದ ಗ್ರಾಸ್ ಬಾರ್‌ಸ್ಟೆಲ್ ಜಿಲ್ಲೆಯಲ್ಲಿನ ಚರ್ಚ್ನಲ್ಲಿ ಗುಂಡಿನ ದಾಳಿ ನಡೆದಿದೆ. ಫೈರಿಂಗ್ ಸದ್ದು ಕೇಳಿಸುತ್ತಿರೋದಾಗಿ ಎಮರ್ಜೆನ್ಸಿ ಕರೆಗಳು ಬಂದಿದ್ದವು. ಹೀಗಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಹಲವರು ಮೃತಪಟ್ಟಿದ್ದರು. ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಹೋಳಿಯಾಡಿ ಸ್ನಾನಕ್ಕೆ ಹೋದಾಗ ನಡೀತು ದುರಂತ – ಬಾತ್‌ರೂಮ್‌ನಲ್ಲಿ ನವದಂಪತಿ ದಾರುಣ ಅಂತ್ಯ
ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ನಿಖರ ಮಾಹಿತಿ ಇಲ್ಲದ ಕಾರಣ ಊಹಾಪೋಹಗಳನ್ನು ಹರಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಇಡೀ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ನಿವಾಸಿಗಳು ತಮ್ಮ ಮನೆಗಳ ಒಳಗೇ ಇರುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
ಮೂರು ಮಹಡಿಯ ಕಟ್ಟಡದಲ್ಲಿ ಗುರುವಾರ ಸಂಜೆ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಜೆಹೋವಾಹ್ಸ್ ವಿಟ್ನೆಸೆಸ್‌ನಲ್ಲಿ ವಾರದ ಬೈಬಲ್ ಅಧ್ಯಯನ ಸಭೆ ನಡೆಯುತ್ತಿತ್ತು ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 17 ಮಂದಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.