ಇಸ್ರೇಲ್-ಹಮಾಸ್ ನಡುವಿನ ಯುದ್ಧದಲ್ಲಿ ಕಣಕ್ಕಿಳಿದ ಅಮೆರಿಕ – ಉಗ್ರರ ಕ್ಷಿಪಣಿಗಳನ್ನ ಹೊಡೆದುರುಳಿಸಿದ ಯುಎಸ್ ಕ್ಷಿಪಣಿಗಳು

ಇಸ್ರೇಲ್-ಹಮಾಸ್ ನಡುವಿನ ಯುದ್ಧದಲ್ಲಿ ಕಣಕ್ಕಿಳಿದ ಅಮೆರಿಕ – ಉಗ್ರರ ಕ್ಷಿಪಣಿಗಳನ್ನ ಹೊಡೆದುರುಳಿಸಿದ ಯುಎಸ್ ಕ್ಷಿಪಣಿಗಳು

ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ಮುಂದುವರಿದಿದ್ದು 4 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದೀಗ ಹಮಾಸ್‌ ಉಗ್ರರ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ಗೆ ಬೆಂಬಲ ಘೋಷಿಸಿ ತನ್ನ ಯುದ್ಧನೌಕೆಗಳನ್ನು ತಂದು ನಿಲ್ಲಿಸಿದ್ದ ಅಮೆರಿಕ, ಇದೇ ಮೊದಲ ಬಾರಿಗೆ ಯುದ್ಧ ಕಣಕ್ಕೆ ಇಳಿದಿದೆ. ಇಸ್ರೇಲ್‌ ಮೇಲೆ ಇರಾನ್‌ ಬೆಂಬಲಿತ ಹೌತಿ ಉಗ್ರರು ಹಾರಿಸಿದ ಕ್ಷಿಪಣಿಗಳನ್ನು ಅಮೆರಿಕದ ಯುದ್ಧನೌಕೆಗಳು ಹೊಡೆದುರುಳಿಸಿದೆ.

ಇದನ್ನೂ ಓದಿ : 20 ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಐವರು ಸಾವು! – ತನಿಖೆ ವೇಳೆ ಬಯಲಾಯ್ತು ಭಯಾನಕ ರಹಸ್ಯ!

ಹಮಾಸ್ ಬಂಡುಕೋರರು ನೆಲೆಸಿರುವ ಗಾಜಾಪಟ್ಟಿ ಮೇಲೆ ವಾಯುದಾಳಿ ಮುಂದುವರಿಸಿದೆ. ಇಸ್ರೇಲ್‌, ಪ್ಯಾಲೆಸ್ತೀನಿಯರು ಸುರಕ್ಷಿತ ಸ್ಥಳ ಅರಸಿ ತೆರಳಿದ್ದ ದಕ್ಷಿಣ ಗಾಜಾ ಮೇಲೂ ದಾಳಿ ಮಾಡಿದೆ. ಇದೇ ವೇಳೆ ಲೆಬನಾನ್‌ ಗಡಿ ಸನಿಹದ ಗಾಜಾದ ಪಟ್ಟಣವೊಂದನ್ನು ತೆರವು ಮಾಡುವಂತೆ ಅಲ್ಲಿನ ಜನರಿಗೆ ಸೂಚಿಸಿದೆ. ಇದರಿಂದಾಗಿ ಭೂದಾಳಿ ಮತ್ತಷ್ಟು ಸನ್ನಿಹಿತ ಎಂಬ ಸೂಚನೆ ನೀಡಿದೆ. ಖಾನ್‌ ಯೂನಿಸ್‌ ದಕ್ಷಿಣ ಗಾಜಾ ನಗರವಾಗಿದ್ದು, ಇಲ್ಲಿ ಪ್ಯಾಲೆಸ್ತೀನಿಯರು ಸುರಕ್ಷಿತ ಸ್ಥಳ ಅರಸಿ ಹಮಾಸ್‌ ಉಗ್ರರ ತಾಣವಾದ ಉತ್ತರ ಗಾಜಾದಿಂದ ವಲಸೆ ಬಂದು ನೆಲೆಸಿದ್ದಾರೆ. ಆದರೆ ಇದರ ಮೇಲೂ ಇಸ್ರೇಲ್‌ ರಾಕೆಟ್‌ ದಾಳಿ ನಡೆಸಿದೆ. ಹೀಗಾಗಿ ಗಾಜಾದ 2ನೇ ಅತಿ ದೊಡ್ಡ ನಗರವಾದ ಇಲ್ಲಿನ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ತುಳುಕುತ್ತಿವೆ. ಇದರ ಬೆನ್ನಲ್ಲೇ ಇಸ್ರೇಲಿ ಸೇನಾ ವಕ್ತಾರ ನಿರ್‌ ದಿನಾರ್‌ ಹೇಳಿಕೆ ನೀಡಿ, ಇಲ್ಲಿ ಯಾವುದೂ ಸುರಕ್ಷಿತ ಸ್ಥಳಗಳಲ್ಲ ಎಂದಿದ್ದಾರೆ. ಇದರೊಂದಿಗೆ ದಕ್ಷಿಣ ಗಾಜಾದಲ್ಲೂ ಭಾರಿ ದಾಳಿಯ ಸುಳಿವು ನೀಡಿದ್ದಾರೆ.

ಈ ನಡುವೆ ಹೇಳಿಕೆ ನೀಡಿರುವ ಇಸ್ರೇಲಿ ಸೇನೆ, ‘ಶುಕ್ರವಾರ ಹಮಾಸ್‌ ನಿಯಂತ್ರಣದ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ ವಾಯುದಾಳಿ ನಡೆಸಲಾಗಿದೆ. ಇವುಗಳಲ್ಲಿ ಹಮಾಸ್‌ ಗುಹೆಗಳು ಹಾಗೂ ಶಸ್ತ್ರಾಗಾರಗಳೂ ಸೇರಿವೆ’ ಎಂದಿದೆ. ಗುರುವಾರ ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲೆಂಟ್‌ ಅವರು ತಮ್ಮ ಭೂಸೇನಾ ದಳಕ್ಕೆ ಸಿದ್ಧಸ್ಥಿತಿಯಲ್ಲಿ ಇರಿ ಎಂದು ಸೂಚಿಸಿದ್ದರು. ಆಗಲೇ ಭೂದಾಳಿ ಸನ್ನಿಹಿತ ಎಂದು ಭಾವಿಸಲಾಗಿತ್ತು. ಇದಕ್ಕೆ ಪೂರಕವಾಗಿ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ಪ್ರಭಾವ ಇರುವ ಗಾಜಾದ ಪಟ್ಟಣವೊಂದರ ತೆರವಿಗೆ ಸೂಚಿಸಲಾಗಿದೆ. ಈ ನಡುವೆ ಗಾಜಾದಲ್ಲಿನ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಆಹಾರಕ್ಕೂ ಆರ್ತನಾದ ಕೇಳಿ ಬರುತ್ತಿದೆ. ಹೀಗಾಗಿ ವಿಶ್ವಸಂಸ್ಥೆಯ ಆಗ್ರಹದ ಮೇರೆಗೆ ವಾಯುದಾಳಿಗೆ ಒಳಗಾಗಿ ಹಾಳಾದ ಕೆಲವು ಗಡಿ ರಸ್ತೆ ದುರಸ್ತಿಯನ್ನು ಪ್ಯಾಲೆಸ್ತೀನಿ ಸರ್ಕಾರ ಕೈಗೊಂಡಿದೆ. ಈ ಮೂಲಕ ಗಡಿಯಲ್ಲಿ ಕಾಯುತ್ತಿರುವ ನೂರಾರು ವಿಶ್ವಸಂಸ್ಥೆ ಪರಿಹಾರ ಟ್ರಕ್‌ಗಳಿಗೆ ಗಾಜಾ ಪ್ರವೇಶಿಸಲು ಅನುವು ಮಾಡಿಕೊಡಲಾಗುತ್ತಿದೆ.

ಹಮಾಸ್‌ ಉಗ್ರರ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ಗೆ ಬೆಂಬಲ ಘೋಷಿಸಿ ತನ್ನ ಯುದ್ಧನೌಕೆಗಳನ್ನು ತಂದು ನಿಲ್ಲಿಸಿದ್ದ ಅಮೆರಿಕ, ಇದೇ ಮೊದಲ ಬಾರಿಗೆ ಯುದ್ಧ ಕಣಕ್ಕೆ ಇಳಿದಿದೆ. ಇಸ್ರೇಲ್‌ ಮೇಲೆ ಇರಾನ್‌ ಬೆಂಬಲಿತ ಹೌತಿ ಉಗ್ರರು ಹಾರಿಸಿದ ಕ್ಷಿಪಣಿಗಳನ್ನು ಅಮೆರಿಕದ ಯುದ್ಧನೌಕೆಗಳು ಹೊಡೆದುರುಳಿಸಿದೆ. ಗುರುವಾರ ಮಧ್ಯಪ್ರಾಚ್ಯದ ಯೆಮೆನ್‌ ಸಮುದ್ರದ ಬಳಿ ‘ಹೌತಿ’ ಉಗ್ರಗಾಮಿಗಳು ಉಡಾಯಿಸಿದ ಮೂರು ಭೂ ದಾಳಿ ಕ್ಷಿಪಣಿಗಳು ಮತ್ತು ಹಲವಾರು ಡ್ರೋನ್‌ಗಳನ್ನು ಅಮೆರಿಕದ ಯುದ್ಧನೌಕೆ ಯಶಸ್ವಿಯಾಗಿ ವಿಫಲಗೊಳಿಸಿದೆ. ಉತ್ತರ ಯೆಮೆನ್‌ ಮೇಲೆ ತಮ್ಮ ನಿಯಂತ್ರಣ ಹೊಂದಿರುವ ಹೌತಿ ಉಗ್ರಗಾಮಿಗಳು ಇಸ್ರೇಲ್‌ ವಿರೋಧಿ ರಾಷ್ಟ್ರವಾಗಿರುವ ಇರಾನಿನ ಬೆಂಬಲದಿಂದ ದಾಳಿ ನಡೆಸಿದ್ದಾರೆ.

 

Shantha Kumari