ಗಾಜಾ ಸಂಘರ್ಷದ ನಡುವೆ ಇರಾಕ್ ನಲ್ಲಿರುವ ಅಮೇರಿಕಾ ರಾಯಭಾರಿ ಕಚೇರಿ ಮೇಲೆ ರಾಕೆಟ್ ದಾಳಿ!
ಹಮಾಸ್ ಇಸ್ರೇಲ್ ನಡುವಿನ ಕದನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಈಗಾಗಲೇ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಸ್ರೇಲ್-ಹಮಾಸ್ ಸಂಘರ್ಷದ ನಡುವೆಯೇ ಈಗ ಇರಾಕ್ ನ ಬಾಗ್ದಾದ್ ನಲ್ಲಿನ ಅಮೇರಿಕ ರಾಯಭಾರಿ ಕಚೇರಿ ಮೇಲೆ ರಾಕೆಟ್ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನೀವೇನಾದ್ರೂ ಅತಿಯಾಗಿ ಯೋಚಿಸ್ತೀರಾ? – ಅತಿಯಾಗಿ ಯೋಚಿಸುವುದು ಅನಾರೋಗ್ಯಕ್ಕೆ ಆಹ್ವಾನ!
ಇರಾಕ್ ನ ಬಾಗ್ದಾದ್ ನಲ್ಲಿನ ಅಮೇರಿಕ ರಾಯಭಾರಿ ಕಚೇರಿ ಮೇಲೆ ರಾಕೆಟ್ ದಾಳಿ ನಡೆದಿದೆ ಎಂದು ವರದಿಯಾಗಿದೆ. ಹಲವು ರಾಕೆಟ್ ಗಳಿಂದ ದಾಳಿ ನಡೆಸಲಾಗಿದೆ. ಈ ದಾಳಿಯಿಂದ ಯಾವುದೇ ಪ್ರಾಣಾಪಾಯ ಅಥವಾ ಹಾನಿ ಸಂಭವಿಸಿಲ್ಲ ಎಂದು ಅಮೇರಿಕ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ತಕ್ಷಣಕ್ಕೆ ಯಾರೂ ಸಹ ಹೊಣೆಗಾರಿಕೆ ಹೊತ್ತುಕೊಂಡಿಲ್ಲ. ಇರಾಕ್ ಮತ್ತು ನೆರೆಯ ಸಿರಿಯಾದಲ್ಲಿ ಜಿಹಾದಿಗಳ ವಿರುದ್ಧ ಹೋರಾಡುವ ಅಂತರರಾಷ್ಟ್ರೀಯ ಒಕ್ಕೂಟವನ್ನು ಯುನೈಟೆಡ್ ಸ್ಟೇಟ್ಸ್ ಮುನ್ನಡೆಸುತ್ತಿದೆ ಮತ್ತು ಅದರ ಪಡೆಗಳು ಇತ್ತೀಚಿನ ವಾರಗಳಲ್ಲಿ ದಾಳಿಗೆ ಒಳಗಾಗಿವೆ.
ಗಾಜಾ ಪಟ್ಟಿಯಲ್ಲಿ ಅಮೆರಿಕದ ಮಿತ್ರರಾಷ್ಟ್ರ ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಪ್ಯಾಲೇಸ್ಟಿನಿಯನ್ ಇಸ್ಲಾಮಿಸ್ಟ್ ಉಗ್ರಗಾಮಿ ಗುಂಪು ಹಮಾಸ್ ನಡುವೆ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಯುದ್ಧದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.