ಗಾಜಾ ನೆರವು ಕೇಂದ್ರದಲ್ಲಿ ಪ್ಯಾಲೆಸ್ತೀನಿಯನ್ನರ ಮೇಲೆ ಗುಂಡಿನ ದಾಳಿ – 104 ಮಂದಿಯಲ್ಲಿ ಕೊಂದ ಇಸ್ರೇಲ್‌ ಸೈನಿಕರು

ಗಾಜಾ ನೆರವು ಕೇಂದ್ರದಲ್ಲಿ ಪ್ಯಾಲೆಸ್ತೀನಿಯನ್ನರ ಮೇಲೆ ಗುಂಡಿನ ದಾಳಿ – 104 ಮಂದಿಯಲ್ಲಿ ಕೊಂದ ಇಸ್ರೇಲ್‌ ಸೈನಿಕರು

ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಸಮರ ನಿಲ್ಲುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಯುದ್ಧದ ತೀವ್ರತೆ ಹೆಚ್ಚಾಗುತ್ತಲೇ ಇದೆ. ಇದೀಗ ಗಾಜಾದ ನೆರವು ಕೇಂದ್ರದಲ್ಲಿ ಪ್ಯಾಲೆಸ್ತೀನಿಯನ್ನರ ಗುಂಪಿನ ಮೇಲೆ ಇಸ್ರೇಲ್‌ ಪಡೆಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ 104 ಮಂದಿ ಸಾವನ್ನಪ್ಪಿದ್ದು, 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್​ ಪರ ಘೋಷಣೆ – ಸರ್ಕಾರಕ್ಕೆ ಎಫ್‌ಎಸ್‌ಎಲ್‌ ವರದಿ ಸಲ್ಲಿಕೆ

ನಗರದ ಪಶ್ಚಿಮ ನಬುಲ್ಸಿ ವೃತ್ತದಲ್ಲಿ ನೆರವಿನ ಟ್ಯಾಂಕ್‌ಗಳು ಸೇನಾಪಡೆ ಇದ್ದ ಜಾಗಕ್ಕೆ ಹತ್ತಿರದಲ್ಲಿದ್ದವು. ಈ ವೇಳೆ ಸಾವಿರಾರು ಜನರು ಆಹಾರಕ್ಕಾಗಿ ಸಹಾಯ ಟ್ರಕ್‌ಗಳ ಕಡೆಗೆ ಧಾವಿಸಿದ್ದರು. ಜನರು ಟ್ಯಾಂಕ್‌ಗಳ ಹತ್ತಿರ ನೆರವಿಗಾಗಿ ನುಗ್ಗುತ್ತಿದ್ದಂತೆ, ಗುಂಪಿನ ಮೇಲೆ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಉತ್ತರ ಗಾಜಾ ಪಟ್ಟಿಗೆ ಮಾನವೀಯ ನೆರವು ಟ್ರಕ್‌ಗಳು ಬಂದಿದ್ದವು. ಗಜಾನ್ ನಿವಾಸಿಗಳು ಟ್ರಕ್‌ಗಳನ್ನು ಸುತ್ತುವರಿದು, ಸರಬರಾಜನ್ನು ಲೂಟಿ ಮಾಡಲು ಪ್ರಯತ್ನಿಸಿದರು. ಹೀಗಾಗಿ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ತಳ್ಳಾಟ-ನೂಕಾಟದಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಗಾಜಾದ ಜನಸಮೂಹವು ಸೈನ್ಯಕ್ಕೆ ಬೆದರಿಕೆಯನ್ನುಂಟು ಮಾಡುವ ರೀತಿಯಲ್ಲಿ ಪಡೆಗಳನ್ನು ಸಮೀಪಿಸಿತ್ತು. ಹೀಗಾಗಿ ಸೇನೆ ದಾಳಿ ನಡೆಸಿದೆ ಎಂದು ಇಸ್ರೇಲ್‌ ಮೂಲಗಳು ತಿಳಿಸಿವೆ.

Shwetha M