ಹಮಾಸ್ – ಇಸ್ರೇಲ್ ನಡುವೆ ರಣಭೀಕರ ಕದನ – 1.1 ಮಿಲಿಯನ್ ಜನರು ಉತ್ತರ ಗಾಜಾ ತೊರೆಯಲು ಗಡುವು!
ಇಸ್ರೇಲ್: ಇಸ್ರೇಲ್ – ಹಮಾಸ್ ನಡುವಿನ ಯುದ್ಧ ತೀವ್ರ ಸ್ವರೂಪಕ್ಕೆ ತಿರುಗಿದೆ. ಮನುಷ್ಯತ್ವವನ್ನೇ ಮರೆತಿರುವ ರಕ್ಕಸರು ಮಕ್ಕಳು, ಮಹಿಳೆಯರು ಅಂತಾ ನೋಡದೇ ಮನಬಂದಕ್ಕೆ ಗುಂಡಿಕ್ಕಿಕೊಲ್ಲುತ್ತಿದ್ದಾರೆ. ಇಡೀ ನಗರವೇ ಶ್ಮಶಾನದಂತೆ ಆಗಿದೆ. ಈ ಭೀಕರ ಯುದ್ಧದಲ್ಲಿ ಇದುವರೆಗೆ ಕನಿಷ್ಠ 1,537ಕ್ಕೂ ಹೆಚ್ಚು ಪ್ಯಾಲೆಸ್ತೈನಿಯರು ಸಾವನ್ನಪ್ಪಿದ್ದಾರೆ ಎಂದು ಗಾಜಾದಲ್ಲಿನ ಪ್ಯಾಲೆಸ್ತೈನ್ ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ.
ಈ ಭೀಕರ ಯುದ್ಧದಲ್ಲಿ 1,537ಕ್ಕೂ ಪ್ಯಾಲೆಸ್ತೈನಿಯರು ಸಾವನ್ನಪ್ಪಿದ್ದಾರೆ. ಇತರ 6,612 ಮಂದಿ ಗಾಯಗೊಂಡಿದ್ದಾರೆ. ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೆಮ್‌ನಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಮತ್ತು 650 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಯುದ್ಧದಿಂದಾಗಿ ಸುಮಾರ್ 338,000 ಕ್ಕೂ ಹೆಚ್ಚು ಪ್ಯಾಲೆಸ್ತೈನಿಯರನ್ನು ಸ್ಥಳಾಂತರಿಸಲಾಗಿದೆ. ಅವರಲ್ಲಿ ಸುಮಾರು 218,000 ಜನರು ಯುಎನ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿ ನಡೆಸುತ್ತಿರುವ 92 ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ದೇಶ ರಚನೆಯಾಗಿದ್ದರ ಹಿಂದಿದೆ ಅಚ್ಚರಿಯ ಕಥೆ – ಪ್ಯಾಲೆಸ್ತೀನ್ ಪರ ಭಾರತದ ನಿಲುವು ಬದಲಾಗಿದ್ದೂ ವಿಶೇಷ
ಈ ಮಧ್ಯೆ ವಾಡಿ ಗಾಜಾದ ಉತ್ತರದಲ್ಲಿರುವ ಸಂಪೂರ್ಣ ಪ್ಯಾಲೆಸ್ತೀನ್ ಜನರು 24 ಗಂಟೆಗಳ ಒಳಗೆ ದಕ್ಷಿಣ ಗಾಜಾಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲಿ ರಕ್ಷಣಾ ಪಡೆಗಳು ಶುಕ್ರವಾರ ಸೂಚಿಸಿವೆ ಎಂದು ವಿಶ್ವಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ ಎಂದು ಮಾಡಿದೆ. ಸರಿಸುಮಾರು 1.1 ಮಿಲಿಯನ್ ಪ್ಯಾಲೆಸ್ತೈನಿಯರು ವಾಡಿ ಗಾಜಾದ ಉತ್ತರದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಹಮಾಸ್ ಬಂಡುಕೋರರು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಪ್ರಾರಂಭಿಸಿತು. ಇದಾದ ನಂತರ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದ್ದು, ಹಮಾಸ್ ನಾಶಮಾಡಲು ಪ್ರತಿಜ್ಞೆ ಮಾಡಿದೆ.