ಪಾತಾಳಕ್ಕೆ ಕುಸಿದ ಪಾಕ್‌ ಆರ್ಥಿಕತೆ – ಒಂದು ಸೈಡ್ ಮಾತ್ರ ನೋಟು ಪ್ರಿಂಟ್!

ಪಾತಾಳಕ್ಕೆ ಕುಸಿದ ಪಾಕ್‌ ಆರ್ಥಿಕತೆ – ಒಂದು ಸೈಡ್ ಮಾತ್ರ ನೋಟು ಪ್ರಿಂಟ್!

ಪಾಪಿ ಪಾಕಿಸ್ತಾನದ ಆರ್ಥಿಕತೆ ಪಾತಾಳಕ್ಕೆ ಇಳಿದಿದೆ. ದಿನದಿಂದ ದಿನಕ್ಕೆ ಅಲ್ಲಿನ ಪರಿಸ್ಥಿತಿ ಹದಗೆಡುತ್ತಿದೆ. ಹಣದುಬ್ಬರ ಹಾಗೂ ರಾಜಕೀಯ ಅಸ್ಥಿರತೆಯಿಂದಾಗಿ ಅಲ್ಲಿನ ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತುತ್ತು ಅನ್ನಕ್ಕೂ ಪರಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಆರ್ಥಿಕ ಬಿಕ್ಕಟ್ಟನ್ನು ಹತೋಟಿಗೆ ತರಬೇಕಿದ್ದ ಪಾಕ್‌ನ ರಾಷ್ಟ್ರೀಯ ಬ್ಯಾಂಕೊಂದು ದೊಡ್ಡ ಎಡವಟ್ಟನ್ನು ಮಾಡಿದೆ.

ಇದನ್ನೂ ಓದಿ: ನ್ಯಾಯ ಕೊಡಿಸಿ ಎಂದು ತಾಯಿ ಮಗಳು ಮನೆಗೆ ಬಂದಿದ್ದರು – ಲೈಂಗಿಕ ಕಿರುಕುಳ ಆರೋಪಕ್ಕೆ ಬಿಎಸ್‌ವೈ ಪ್ರತಿಕ್ರಿಯೆ

ಹೌದು, ಪಾಕಿಸ್ತಾನ ಆರ್ಥಿಕತೆ ತೀರಾ ಹದಗೆಟ್ಟಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗುಡಾಯಿಸಿದೆ. ಆರ್ಥಿಕತೆಯನ್ನು ಹತೋಟಿಯಲ್ಲಿಡಬೇಕಾದಂತಹ ಪಾಕಿಸ್ತಾನದ ರಾಷ್ಟ್ರೀಯ ಬ್ಯಾಂಕೇ ದೊಡ್ಡ ಎಡವಟ್ಟು ಮಾಡಿದೆ.  ಕರಾಚಿಯ ನ್ಯಾಷನಲ್‌ ಬ್ಯಾಂಕ್ ಬ್ರಾಂಚ್‌ಗೆ 1000 ರೂಪಾಯಿ ನೋಟಿನ ಬಂಡಲ್ ಒಂದು ಬಂದಿದೆ. ಅದರ ಒಂದು ಕಡೆ ನೋಟಿನ ಪ್ರಿಂಟೇ ಇಲ್ಲದಾಗಿದೆ. ಪಾಕಿಸ್ತಾನ ಸ್ಟೇಟ್ ಬ್ಯಾಂಕ್ ಪ್ರಿಂಟ್ ಮಾಡಿದ ನೋಟುಗಳು ಇದಾಗಿದೆ. ಕರಾಚಿಯ ನ್ಯಾಷನಲ್ ಬ್ಯಾಂಕ್ ಬ್ರಾಂಚ್‌ನಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಈ  ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪಾಕಿಸ್ತಾನದ ಆರ್ಥಿಕ ಸ್ಥಿರತೆಯ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ. ಅಲ್ಲದೇ ದೇಶದ ಆರ್ಥಿಕತೆಯನ್ನು ನಿರ್ಧರಿಸುವ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿಯೇ ಈ ನಿರ್ಲಕ್ಷ್ಯ ಕಂಡು ಬಂದಿದ್ದು, ಕಳವಳಕಾರಿಯಾಗಿದೆ.  ಪಾಕಿಸ್ತಾನದ ಎಆರ್‌ವೈ ನ್ಯೂಸ್ ವರದಿಯ ಪ್ರಕಾರ, ವಿಡಿಯೋದಲ್ಲಿ ಬ್ಯಾಂಕ್ ಮ್ಯಾನೇಜರ್‌  ಒಂದು ಕಡೆ ಪ್ರಿಂಟೇ ಆಗದ ನೋಟುಗಳನ್ನು ತೋರಿಸುತ್ತಿದ್ದಾರೆ. ತಪ್ಪಾಗಿ ಪ್ರಿಂಟ್ ಆದ ಈ ನೋಟಿನ ಬಂಡಲ್ ಇಂದು ಬೆಳಗ್ಗೆ ಬಂದಿದೆ ನೋಟಿನ ಒಂದು ಭಾಗ ಸಂಪೂರ್ಣ ಪ್ರಿಂಟ್ ಆಗಿದ್ದರೆ, ಮತ್ತೊಂದು ಸೈಡ್ ಸಂಪೂರ್ಣ ಖಾಲಿಯಾಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ಹೇಳುವುದನ್ನು ವೀಡಿಯೋದಲ್ಲಿ ಕೇಳಬಹುದಾಗಿದೆ.

ಬ್ಯಾಂಕ್‌ನ ಗ್ರಾಹಕರೊಬ್ಬರು ಹೀಗೆ ತಪ್ಪು ತಪ್ಪಾಗಿ ಪ್ರಿಂಟ್ ಆದ ನೋಟುಗಳನ್ನು ಬ್ಯಾಂಕ್‌ನ ಸಿಬ್ಬಂದಿಗೆ ಇಂದು ಮುಂಜಾನೆ ಹಿಂದಿರುಗಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಹೊಸದಾಗಿ ಪ್ರಿಂಟ್ ಆಗಿರುವ 1000 ರೂಪಾಯಿ ಮುಖ ಬಲೆಯ ಎಲ್ಲಾ ನೋಟುಗಳು ಕೇವಲ ಒಂದು ಬದಿ ಮಾತ್ರ ಪ್ರಿಂಟ್ ಆಗಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ,  ಈ  ಬಗ್ಗೆ ವಿಭಾಗೀಯ ವಿಚಾರಣೆ ಮಾಡಲಾಗುವುದು  ಎಂದು ಕೇಂದ್ರ ಬ್ಯಾಂಕ್‌ನ ವಕ್ತಾರರು ಹೇಳಿದ್ದಾರೆ.

ಈ ಘಟನೆಯು ಪಾಕಿಸ್ತಾನದ ಕರೆನ್ಸಿಗೆ ಸಂಬಂಧಿಸಿದಂತೆ ಆತಂಕಕಾರಿ ವಿಚಾರವಾಗಿದೆ. ಕಳೆದ ವರ್ಷವಷ್ಟೇ, ಸೆನೆಟ್‌ನ ಹಣಕಾಸು ಸ್ಥಾಯಿ ಸಮಿತಿಯು 5000 ರೂಪಾಯಿಗಳ ನಕಲಿ ನೋಟುಗಳ ಚಲಾವಣೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು, ಎಸ್‌ಬಿಪಿಯ ಅಧಿಕಾರಿಗಳು ಸಹ ನಕಲಿ ಯಾವುದು ಅಸಲಿ ಯಾವುದು ಎಂದು ಅವುಗಳನ್ನು ಗುರುತಿಸಲು ವಿಫಲರಾಗಿದ್ದರು.

Shwetha M