ಬೇಡರ ನಾಯಕನಾಗಿ ನಟರಾಕ್ಷಸ!- ಹಲಗಲಿ ಸಿನಿಮಾದ ಗ್ಲಿಂಪ್ಸ್ ರಿಲೀಸ್!

ಐತಿಹಾಸಿಕ ಕಥೆಯ ʻಹಲಗಲಿʼ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಡಾಲಿ ಲುಕ್ ರಿವೀಲ್ ಆಗಿದ್ದು, ಬೇಡರ ನಾಯಕನಾಗಿ ನಟರಾಕ್ಷಸ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಿತ್ಯಾ ಹೃದಯ ಗೆದ್ದ ಕರ್ಣ! – ಬೇರೆ ಹುಡುಗನ ಜೊತೆ ನಿಧಿ ಮದ್ವೆ!
ಹಲಗಲಿ ಚಿತ್ರಕಥೆ ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ಬ್ರಿಟಿಷರಿಗೆ ಗೆರಿಲ್ಲಾ ವಾರ್‌ಫೇರ್ ಮೂಲಕ ಸಿಂಹಸ್ವಪ್ನವಾಗಿ ಕಾಡಿದ ಹಲಗಲಿ ಬೇಡರ ಕುರಿತಾದ ಕಥಾಹಂದರ ಹೊಂದಿದೆ. 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕಿಚ್ಚು ಹತ್ತಿಕೊಂಡಾಗ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ನಿಂತಿದ್ದರು. ಈ ವಿಷಯದ ಕುರಿತಾಗಿ ಈ ಸಿನಿಮಾ ಮೂಡಿ ಬರುತ್ತಿದೆ. ಇದೀಗ ‘ಹಲಗಲಿ’ ಚಿತ್ರದ ಫಸ್ಟ್ ಲುಕ್ ಗುರುವಾರ ಸಂಜೆ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಮಾಡಿದೆ ಚಿತ್ರತಂಡ. ಆ ಗ್ಲಿಂಪ್ಸ್ ನಾನಾ ಅರ್ಥಗಳನ್ನು ನೀಡುತ್ತಿದೆ. ಡಾಲಿ ಅಭಿಮಾನಿಗಳು ಅದನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ.
ಬ್ರಿಟಿಷರ ವಿರುದ್ಧ ಮೊಟ್ಟ ಮೊದಲ ಗೆರಿಲ್ಲಾ ವಾರ್ ಮಾಡಿದ ಹಲಗಲಿ ವೀರರ ಕುರಿತು ಈ ಚಿತ್ರದಲ್ಲಿ ಡಾಲಿ ಅವರು ಬೇಡರ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಗ್ಲಿಂಪ್ಸ್ ಬಿಡುಗಡೆಗೂ ಮುನ್ನವೇ ಚಿತ್ರತಂಡ ಹಂಚಿಕೊಂಡಿರುವ ಈ ಎರಡೂ ಫೋಟೋಗಳು ಸಾಕಷ್ಟು ಕುತೂಹಲ ಮೂಡಿಸಿದೆ.
ಸುಕೇಶ್ ನಾಯಕ್ ನಿರ್ದೇಶನದ ಈ ಚಿತ್ರವನ್ನು ಕಲ್ಯಾಣ್ ಚಕ್ರವರ್ತಿ ಡಿ ಅವರು 80 ಕೋಟಿ ವೆಚ್ಚಿದಲ್ಲಿ ನಿರ್ಮಿಸುತ್ತಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದೆ. ಮೊಟ್ಟ ಮೊದಲ ಬಾರಿಗೆ ಡಾಲಿ ಧನಂಜಯ್ ಅವರು ಐತಿಹಾಸಿಕ ಕತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನೋಡಿರಿ

