ದುಬೈನಲ್ಲಿ ನಡೆಯುತ್ತಿದ್ದ ಏರ್ ಶೋ ವೇಳೆ HAL ನಿರ್ಮಿತ ತೇಜಸ್ ಯುದ್ಧ ವಿಮಾನ ಪತನ



ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊಗಳ ಪ್ರಕಾರ, ಭಾರತೀಯ ಎಚ್‌ಎಎಲ್ ತೇಜಸ್ ಸ್ಥ ಅಪಘಾತಕ್ಕೀಡಾಗುವುದನ್ನು ತೋರಿಸಿದೆ. ಬಳಿಕ ಅಪಘಾತಕ್ಕೆ ಒಳಗಾದ ಸ್ಥಳದಿಂದ ದಟ್ಟವಾದ ಹೊಗೆ ಸ್ಥಳವನ್ನು ಆವರಿಸಿದೆ. ಪೈಲಟ್ ಹೊರಗೆ ಹಾರಿದ್ದಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತೀಯ ವಾಯುಪಡೆಯಿಂದ ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ಆಗಿರುವ ಈ ಏಕ-ಸೀಟಿನ ತೇಜಸ್ ಫೈಟರ್ ಜೆಟ್ ಪತನಗೊಂಡಿದೆ. ಎರಡು ವರ್ಷಗಳ ಅವಧಿಯಲ್ಲಿ ತೇಜಸ್ ವಿಮಾನ ಪತನಗೊಳ್ಳುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮುನ್ನ ಮಾರ್ಚ್ 2024ರಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತೇಜಸ್ ಯುದ್ಧ ವಿಮಾನ ಪತನಗೊಂಡಿತ್ತು. 2001ರಲ್ಲಿ ಈ ವಿಮಾನದ ಮೊದಲ ಹಾರಾಟದ ನಂತರ ನಡೆದ ಮೊದಲ ಅಪಘಾತ ಅದಾಗಿತ್ತು. ಆ ಘಟನೆಯಲ್ಲಿ ಪೈಲಟ್ ಸುರಕ್ಷಿತವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.
ತೇಜಸ್ ವಿಮಾನದ ವಿಶೇಷತೆ ಏನು?
4.5 ತಲೆಮಾರಿನ ತಂತ್ರಜ್ಞಾನವನ್ನು ತೇಜಸ್ ಯುದ್ಧ ವಿಮಾನ ಹೊಂದಿದೆ. ಸ್ವದೇಶಿ ನಿರ್ಮಿತ ಉಪಕರಣಗಳು ಹಾಗೂ ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯ, ಹಾರಾಟದಲ್ಲಿ ಇಂಧನ ತುಂಬಿಸಿಕೊಳ್ಳುವ ಸಾಮರ್ಥ್ಯ ಇವೆ. ಇದು ಅತ್ಯಂತ ಹಗುರವಾದ ಮತ್ತು ಚಿಕ್ಕ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ಟೇಕಾಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಪೈಲಟ್ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡುತ್ತದೆ. ದುಬೈ ಏರ್ ಶೋನಲ್ಲಿ ಎಮಿರೇಟ್ಸ್ ಮತ್ತು ಫ್ಲೈದುಬೈ ನಂತಹ ಕಂಪನಿಗಳಿಂದ ಬಹುಕೋಟಿ ಡಾಲರ್ ಒಪ್ಪಂದಗಳು ನಡೆದ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ.

ನೋಡಿರಿ

