ಕೆಲಸಕ್ಕೆ ಹೋಗುವ ಆತುರದಲ್ಲಿ ಹೇರ್ ಡ್ರೈಯರ್‌ನಲ್ಲಿ ಕೂದಲು ಒಣಗಿಸಿದ್ಲು.. – ಅಯ್ಯಯ್ಯೋ.. ಕೂದಲೇ ಸುಟ್ಟು ಹೋಯ್ತು!
ಯುವತಿಯರೇ ಹೇರ್ ಡ್ರೈಯರ್ ಬಳಸುವಾಗ ಎಚ್ಚರ.. ಸಣ್ಣ ಅಜಾಗರೂಕತೆಯಿಂದ ನಿಮ್ಮ ಕೂದಲೇ ಸುಟ್ಟು ಹೋಗಬಹುದು. ಹೌದು, ಹೇರ್ ಡ್ರೈಯರ್‌ನಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಯುವತಿಯ ಕೂದಲು ಸುಟ್ಟು ಹೋಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಇದನ್ನೂ ಓದಿ: ವಿಶ್ವವಿದ್ಯಾಲಯದಲ್ಲಿ ಭೀಕರ ಗುಂಡಿನ ದಾಳಿ – 15 ಮಂದಿ ಸಾವು
ಶಾಂಭವಿ ಎಂಬ ಯುವತಿ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದಾರೆ. ಎಂದಿನಂತೆ ಸ್ನಾನ ಮುಗಿಸಿ, ಕೆಲಸಕ್ಕೆ ಹೋಗುವ ಆಯತುರದಲ್ಲಿ ಹೇರ್ ಡ್ರೈಯರ್ ಬಳಸಿ ಕೂದಲು ಒಣಗಿಸುತ್ತಿದ್ದರು. ಈ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಹೇರ್ ಡ್ರೈಯರ್‌ನಲ್ಲಿ ಬೆಂಕಿ ಕಾಣಿಸಿದೆ. ಇದರಿಂದಾಗಿ ಆಕೆಯ ಕೂದಲು ಸುಟ್ಟು ಹೋಗಿದೆ.
ಕೂದಲಿಗೆ ಬೆಂಕಿ ತಗಲುತ್ತಿದ್ದಂತೆ ಹೇರ್ ಡ್ರೈಯರ್ ಅನ್ನು ಶಾಂಭವಿ ಅವರು ಬೆಡ್ ಮೇಲೆ ಎಸೆದಿದ್ದಾರೆ. ಇದರಿಂದಾಗಿ ಬೆಡ್ ಕೂಡ ಸಂಪೂರ್ಣವಾಗಿ ಸುಟ್ಟುಹೋಗಿದೆ. ಈಗ ಟೆಕ್ಕಿಯ ನಿರ್ಲಕ್ಷ್ಯದಿಂದ ಪಿಜಿಯ ಪೀಠೋಪಕರಣಕ್ಕೆ ಹಾನಿಯಾಗಿದೆ ಎಂದು ಮಾಲೀಕ ದೂರು ನೀಡಿದ್ದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.