ಆಲಿಕಲ್ಲು ಮಳೆಯಿಂದಾಗಿ ರೈತರ ಬದುಕಿಗೆ ಬಿತ್ತು ಕಲ್ಲು – ರಾಯಚೂರು, ಯಾದಗಿರಿಯಲ್ಲಿ ಅನ್ನದಾತರ ಸ್ಥಿತಿ ಅಯೋಮಯ

ಆಲಿಕಲ್ಲು ಮಳೆಯಿಂದಾಗಿ ರೈತರ ಬದುಕಿಗೆ ಬಿತ್ತು ಕಲ್ಲು – ರಾಯಚೂರು, ಯಾದಗಿರಿಯಲ್ಲಿ ಅನ್ನದಾತರ ಸ್ಥಿತಿ ಅಯೋಮಯ

ರಾಯಚೂರಿನಲ್ಲಿ ಸುರಿದ ಆಲಿಕಲ್ಲು ಮಳೆಗೆ ಸಾವಿರಾರು ಕ್ವಿಂಟಲ್ ಭತ್ತ ನಾಶವಾಗಿದೆ. ದೇವದುರ್ಗ ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ರಾಜಾಸಾಬ್,ಅಜಿಸಾಬ್,ಹನುಮಂತ ರಾಯ,ಹುಸೇನಸಾಬ್ ಅನ್ನೋರಿಗೆ ಸೇರಿದ ಸುಮಾರು 3 ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಭತ್ತ ಹಳ್ಳದಲ್ಲಿ ಕೊಚ್ಚಿ ಹೋಗಿದೆ. ಭತ್ತ ಕಟಾವು ಮಾಡಿ ರೈತರೆಲ್ಲಾ ಸೇರಿ ಒಂದೇ ಕಡೆ ರಾಶಿ ಹಾಕಿದ್ದರು. ಈ ಮಧ್ಯೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದ್ದು, ಅಷ್ಟೂ ಭತ್ತ ನಾಶವಾಗಿದೆ.

ಇದನ್ನೂ ಓದಿ: ಈ ಸ್ಥಳದಲ್ಲಿ ಸೆಲ್ಫಿ ತೆಗೆದ್ರೆ 24 ಸಾವಿರ ರೂ. ದಂಡ! – ಯಾಕಪ್ಪಾ ಇಂತಹ ಟಫ್ ರೂಲ್ಸ್?

ಇನ್ನು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲೂ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಬುಧವಾರ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಆಲಿಕಲ್ಲು ಸಹಿತ ಬಾರಿ ಮಳೆಯಾಗಿದೆ. ಕೇವಲ 15 ನಿಮಿಷಗಳ ಕಾಲ ಸುರಿದ ಆಲಿಕಲ್ಲು ಮಳೆಯಿಂದಾಗಿ ಸಾಕಷ್ಟು ಹಾನಿಯುಂಟಾಗಿದೆ. ಅದರಲ್ಲೂ ಮಳೆಗಿಂತ ಬಿರುಗಾಳಿ ಜೋರಾಗಿ ಬೀಸಿದ್ದು, ಚಿಂತನಹಳ್ಳಿ ಗ್ರಾಮದಲ್ಲಿ ಸುಮಾರು 20 ಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿದೆ. ಮನೆಯಲ್ಲಿರುವ ದವಸ ಧಾನ್ಯಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಮನೆ ಮೇಲಿನ ಮೇಲ್ಚಾವಣಿಗಳು ಹಾರಿ ಹೋಗಿದ್ದರಿಂದ ಮನೆಯ ಹೊರಗೆ ವಾಸ ಮಾಡುವಂತ ಸ್ಥಿತಿ ಸದ್ಯ ಚಿಂತನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿದೆ.

suddiyaana