23 ವರ್ಷದ MBBS ವಿದ್ಯಾರ್ಥಿ H3N2 ವೈರಸ್ ಗೆ ಬಲಿ..?- ಪಿಕ್ನಿಕ್ ವೇಳೆಯೇ ಅಂಟಿತ್ತಾ ಹೆಮ್ಮಾರಿ?

23 ವರ್ಷದ MBBS ವಿದ್ಯಾರ್ಥಿ H3N2 ವೈರಸ್ ಗೆ ಬಲಿ..?- ಪಿಕ್ನಿಕ್ ವೇಳೆಯೇ ಅಂಟಿತ್ತಾ ಹೆಮ್ಮಾರಿ?

ಕೊರೊನಾ ಬಳಿಕ ಈಗ ಹೆಚ್3ಎನ್2 ಸೋಂಕು ವೇಗವಾಗಿ ಹರಡುತ್ತಿದ್ದು ದಿನದಿನಕ್ಕೂ ಭಯ ಹುಟ್ಟಿಸುತ್ತಿದೆ. ಈಗಾಗಲೇ ಕರ್ನಾಟಕ ಹಾಗೂ ಹರಿಯಾಣದಲ್ಲಿ ವೈರಸ್​ನಿಂದ ಇಬ್ಬರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಇಗ ಮಹಾರಾಷ್ಟ್ರದಲ್ಲಿ 23 ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಅಹ್ಮದ್‌ನಗರದ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ವಿದ್ಯಾರ್ಥಿ ಕಳೆದ ವಾರ ಸ್ನೇಹಿತರೊಂದಿಗೆ ಕೊಂಕಣದ ಅಲಿಬಾಗ್‌ಗೆ ಪಿಕ್ನಿಕ್‌ಗೆ ತೆರಳಿದ್ದ. ಅಲ್ಲಿಂದ ಬಂದ ನಂತರ ವಿದ್ಯಾರ್ಥಿ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆ ವೇಳೆ ಪರೀಕ್ಷಿಸಿದಾಗ ಕೋವಿಡ್-19 ಪಾಸಿಟಿವ್ ಎಂದು ತಿಳಿದುಬಂದಿದೆ. ಬಳಿಕ ಯುವಕನನ್ನ ಅಹಮದ್‌ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೋಮವಾರ (ಮಾರ್ಚ್ 13) ರಾತ್ರಿ 10 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ : ಹೆಚ್ಚಾಯ್ತು H3N2 ವೈರಸ್ ಹಾವಳಿ – ಲಕ್ಷಣಗಳೇನು ಮತ್ತು ಮುನ್ನೆಚ್ಚರಿಕಾ ಕ್ರಮಗಳೇನು?

ಯುವಕನ ಮರಣೋತ್ತರ ಪರೀಕ್ಷೆ ವೇಳೆ ಯುವಕನ ರಕ್ತದಲ್ಲಿ H3N2 ವೈರಸ್ ಕಂಡುಬಂದಿದೆ ಎಂದು ವರದಿಯಾಗಿದೆ. ಆದರೆ ಇದಕ್ಕೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಮತ್ತೊಂದು ಪ್ರಕರಣದಲ್ಲಿ ಗುಜರಾತ್‌ನ ವಡೋದರಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 58 ವರ್ಷದ ಮಹಿಳೆ ಜ್ವರ ತರಹದ ರೋಗಲಕ್ಷಣಗಳಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಿಳೆ ಸಾವಿಗೆ  H3N2 ಇನ್‌ಫ್ಲುಯೆಂಜಾ ವೈರಸ್ ಕಾರಣವೇ ಎಂದು ತಿಳಿಯಲು ವಿವಿಧ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

suddiyaana