ಕುಮಾರಸ್ವಾಮಿಗೆ ನಿಜಕ್ಕೂ ಆಗಿದ್ದೇನು? – ಫುಲ್ ವೀಕ್.. ಏನಿದರ ಒಳಗುಟ್ಟು?
ರಾಜ್ಯಕ್ಕೆ ಬರದೇ.. ಡೆಲ್ಲಿಯಲ್ಲಿ ಇರೋದ್ಯಾಕೆ?

ಕುಮಾರಸ್ವಾಮಿಗೆ ನಿಜಕ್ಕೂ ಆಗಿದ್ದೇನು? –  ಫುಲ್ ವೀಕ್.. ಏನಿದರ ಒಳಗುಟ್ಟು?ರಾಜ್ಯಕ್ಕೆ ಬರದೇ.. ಡೆಲ್ಲಿಯಲ್ಲಿ ಇರೋದ್ಯಾಕೆ?

ಮಾಜಿ ಪ್ರಧಾನಿ ಮಗ.. ಮಾಜಿ ಮುಖ್ಯಮಂತ್ರಿ.. ಹಾಲಿ ಕೇಂದ್ರ ಸಚಿವ.. ಬಡವರ ಬಂಧು.. ರೈತರ ಆಸ್ತಿ ಅಂತಾನೇ ಕರೆಸಿಕೊಳ್ಳುವ ನಾಯಕ ಅಂದ್ರೆ ಅದು ಕುಮಾರಸ್ವಾಮಿ.. ತನ್ನ ಬಳಿ ಕಷ್ಟ ಅಂತ ಬಂದ್ರೆ ಆ ಕಷ್ಟಕ್ಕೆ ಸ್ಪಂಧಿಸಿ, ಸಮಸ್ಯೆಗೆ ಪರಿಹಾರ ಹುಡುಕ ನಾಯಕ ಅಂದ್ರೆ ಅದು ಕುಮಾರಣ್ಣ.. ಲವಲವಿಕೆಯಿಂದ ಓಡಾಡುತ್ತಾ? ಎದುರಾಳಿಗಳಿಗೆ ಡಿಚ್ಚಿ ಕೊಡುತ್ತಿದ್ದ ಮಾಸ್ ಲೀಡರ್ ಕುಮಾರ್ ಸ್ವಾಮಿ ಯಾಕೋ ಸೈಲೆಂಟ್ ಆಗಿದ್ದಾರೆ. ಅಲ್ಲದೇ ವಾರದಲ್ಲಿ 3-4 ದಿನ ಕರ್ನಾಟದಲ್ಲಿ ಓಡಾಡುತ್ತಾ ಸಮಸ್ಯೆಗಳನ್ನ ಬಗೆಹರಿಸುತ್ತಿದ್ದ ಹೆಚ್‌ಡಿಕೆ ಕಣ್ಣಿಕೆ ಕಾಣುವುದೇ ಕಮ್ಮಿಯಾಗಿದೆ.. ಕುಮಾರಸ್ವಾಮಿಯವರ ಆರೋಗ್ಯ ಸಮಸ್ಯೆ ಅವರನನ್ನ ಮಾನಸಿಕವಾಗಿ ಕುಗ್ಗಿಸೋದ್ರ ಜೊತೆ ದೇಹದಲ್ಲೂ ಸಾಕಷ್ಟು ಬದಲವಾಣೆ ಮಾಡಿದೆ..

ವಾರಕ್ಕೊಮ್ಮೆ ರಾಜ್ಯಕ್ಕೆ ಬರ್ತಿದ್ದ ಕುಮಾರಸ್ವಾಮಿ ಈಗ್ ಈಗ ಯಾರ ಕಣ್ಣಿಗೂ ಬೀಳುತ್ತಿಲ್ಲ.. ಎದುರಾಳಿಗಳಿಗೆ ತಮ್ಮ ಮಾತಿನ ಮೂಲಕ ಗುನ್ನ ಕೊಡುತ್ತಿದ್ದ ಮಾಸ್ ಲೀಡರ್ ಹೆಚ್‌ಡಿಕೆ ಈಗ ಯಾರ ಬಗ್ಗೆ ಕೂಡ ಮಾತನಾಡುತ್ತಿಲ್ಲ.. ಯಾರ ವಿರುದ್ಧವೂ ಧ್ವನಿ ಎತ್ತುತ್ತಿಲ್ಲ.. ಕುಮಾರಸ್ವಾಮಿಯವರ ದೇಹವನ್ನು ನೋಡಿದಾಗ, ತಂಬಾ ತೆಳ್ಳಗಾಗಿದ್ದಾರೆ. ಇದು ಎಲ್ಲೋ ಒಂದ್ಕಡೆ ಅಭಿಮಾನಿಗಳ ಆತಂಕಕ್ಕೆ ಕೂಡ ಕಾರಣವಾಗಿದೆ. ಈ ಹಿಂದೆ ಶನಿವಾರ ಮತ್ತು ಭಾನುವಾರ, ಬೆಂಗಳೂರು ಅಥವಾ ತಮ್ಮ ಲೋಕಸಭಾ ಕ್ಷೇತ್ರ ಮಂಡ್ಯದಲ್ಲಿ ಪ್ರವಾಸ ಮಾಡುತ್ತಿದ್ದ ಕುಮಾರಸ್ವಾಮಿ, ಇತ್ತೀಚಿನ ದಿನಗಳಲ್ಲಿ ರಾಜ್ಯಕ್ಕೆ ಬರುವುದನ್ನು ಕಮ್ಮಿ ಮಾಡಿದ್ದಾರೆ.  ದೆಹಲಿಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ.

ಇನ್ನೂ ಕರ್ನಾಟಕಕ್ಕೆ ಬಂದಾಗಲೆಲ್ಲಾ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಗುಡುಗುತ್ತಿದ್ದ ಕುಮಾರಸ್ವಾಮಿ, ಈಗ ಮೌನಕ್ಕೆ ಶರಣಾಗಿದ್ದಾರೆ.. ನೀವು ಕಾಂಗ್ರೆಸ್ ಬಗ್ಗೆ ಹೆಚ್ಚು ಮಾತನಾಡಬೇಡಿ ಅಂತ ಹೆಚ್‌ಡಿಕೆ ಆಪ್ತರು ಸಲಹೆ ನೀಡಿದ್ದಾರಂತೆ.  ಜೊತೆಗೆ ಆರೋಗ್ಯದ ದೃಷ್ಟಿಯಿಂದ ಕೂಡ ಅವರ ಯಾರ ಬಗ್ಗೆ ಕೂಡ ಹೆಚ್ಚು ಮಾತನಾಡುತ್ತಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಆದ್ರೆ ದೇವೇಗೌಡ್ರು  92 ವರ್ಷವಾದ್ರೂ ಇನ್ನೂ ಫಿಟ್ ಅಂಡ್ ಫೈನ್ ಆಗಿರುವಾಗ ಕುಮಾರಸ್ವಾಮಿ ಈಕೆ ಇಷ್ಟು ಬೇಗ ಸೈಲೆಂಟ್ ಆದ್ರೂ ಅನ್ನೋದ್ದಕ್ಕೆ ಸಾಕಷ್ಟು ಗೊಂದಲಗಳಿವೆ.

 ಕುಮಾರಸ್ವಾಮಿಗೆ ನಿಜಕ್ಕೂ ಆಗಿದ್ದೇನು?

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಸ್ನೇಹ ಬೆಳೆಸಿ, ಎಚ್‌ಡಿಕೆ ಕೇಂದ್ರ ಸಚಿವರಾಗಿ ದೆಹಲಿ ಸೇರಿದ್ರು. ನಂತರ ಪ್ರಜ್ವಲ್‌ ಪ್ರಕರಣದಿಂದ ಇಡೀ ಕುಟುಂಬ ತಲೆ ತಗ್ಗಿಸಬೇಕಾದ ಸಂದರ್ಭ ಕೂಡ ಬಂತು. ಆಮೇಲೆ  ರಾಜ್ಯದಲ್ಲೂ ಕೇಂದ್ರದಲ್ಲೂ ಸರಿಯಾಗಿ ಕಾಣಿಸಿಕೊಳ್ಳದ ಕುಮಾರಣ್ಣನ ಆರೋಗ್ಯದಲ್ಲಿ ಏರುಪೇರಾಗಿದೆ.. ಹೌದು 65 ವರ್ಷದ ಕುಮಾರಸ್ವಾಮಿಯವರಿಗೆ ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯ ಇನ್ನಿಲ್ಲದಂತೆ ಕಾಡುತ್ತಿದೆ. ಓಪನ್‌ ಹಾರ್ಟ್‌ ಸರ್ಜರಿಯೂ ಆಗಿದ್ದು, ಖುದ್ದು ಸಂಸದರರಾಗಿರುವ ಡಾಕ್ಟರ್‌ ಸಿ.ಎನ್.‌ಮಂಜುನಾಥ್‌ ಅವರೇ ಮುಂದೆ ನಿಂತು ಸರ್ಜರಿ ಮಾಡಿಸಿದ್ರು.  ಬೆಂಗಳೂರಿನ ಮನೆಯಲ್ಲಿದ್ದಾಗ ಮೈಲ್ಡ್‌ ಸ್ಟ್ರೋಕ್‌ ಆಗಿತ್ತು ಎನ್ನಲಾಗಿತ್ತು. ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ರು..

ತಮ್ಮ ಆರೋಗ್ಯದ ಸಮಸ್ಯೆಗೆ ಟ್ರೀಟ್ಮೆಂಟ್ ಪಡೆದ್ರು ಆಗಾಗ  ಅವರು ತುಂಬಾ ಅನಾರೋಗ್ಯಕ್ಕೆ ಒಳಗಾತ್ತಿದ್ದಾರೆ.   ಅದ್ರಲ್ಲೂ ಹೋದ್ ವರ್ಷ  ಮೀಡಿಯಾ  ಮುಂದೆ ಮಾತಾಡುವಾಗಲೇ ಮೂಗಿನಿಂದ ರಕ್ತ ಬಂದಿತ್ತು.. ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಾಯಕರು ನಡೆಸಿದ್ದ ಸುದ್ದಿಗೋಷ್ಠಿ ವೇಳೆ ಮಾತನಾಡುತ್ತಿದ್ದ ಕುಮಾರಸ್ವಾಮಿ ಅವರಿಗೆ ದಿಢೀರ್​​ ಮೂಗಿನಲ್ಲಿ ರಕ್ತಸ್ರಾವವಾಗಿತ್ತು. ಮೂಗಿನಿಂದ ರಕ್ತ ಬಂದು ಬಿಳಿ ಶರ್ಟ್ ಕೆಂಪಾಗಿ ಹೋಗಿತ್ತು. ಆಮೇಲೆ  ನಿಖಿಲ್ ಹೆಚ್‌ಡಿಕೆಯನ್ನೇ ಜಯನಗರ ಅಪೋಲೋ ಆಸ್ಪತ್ರಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ರು. ಆ ನಂತ್ರ ಕುಮಾರಸ್ವಾಮಿ ಹೆಚ್ಚಾಗಿ ಎಲ್ಲೂ ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ.. ರಾಜ್ಯದಲ್ಲಿ ಕಾಣಿಸಿಕೊಂಡ್ರೂ ಹಳೇ ಖದರ್‌ನಲ್ಲಿ ಮಾತನಾಡುತ್ತಿಲ್ಲ.. ರಾಜ್ಯ ರಾಜಕೀಯದ ಬೆಳವಣಿಗೆ ಬಗ್ಗೆ ಮಾತನಾಡುತ್ತಿಲ್ಲ. ಕುಮಾರಸ್ವಾಮಿ ಬದಲು ಅವರ ಮಗ ರಾಜ್ಯದಲ್ಲಿ ಸುತ್ತುತ್ತಾ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಪ್ರೇಸ್‌ಮೀಟ್‌ಗಳನ್ನ ಹೆಚ್ಚಾಗಿ ಮಾಡುತ್ತಿದ್ದಾರೆ. ತನ್ನ ತಂದೆಗೆ ಏನೂ ಆಗಿಲ್ಲ ಆದಷ್ಟು ಬೇಗ ಹುಷಾರ್ ಆಗ್ತಾರೆ ಅನ್ನೋ ಸಂದೇಶವನ್ನ ನಿಖಿಲ್ ಕುಮಾರಸ್ವಾಮಿ ಕೊಡುತ್ತಿದ್ದಾರೆ. ಆದ್ರೆ ಕುಮಾರಸ್ವಾಮಿ ಈ ಮಟ್ಟಿಗೆ ಡಲ್ ಆಗಿರುವುದು ಪಕ್ಷ ಕಳೆ ಕುಂದುವಂತೆ ಮಾಡಿದೆ. ಹಾಗೇ ರಾಜ್ಯದ ಜನರ ಬೇಸರಕ್ಕೂ ಕಾರಣವಾಗಿದೆ.  ಒ

Kishor KV