ಜಿಮ್ ಟ್ರೈನರ್‌ಗೆ ಭೀ*ಕರ ಹ*ಲ್ಲೆ! ಚಿಕಿತ್ಸೆ ಫಲಿಸದೆ ನಂದನ್ ಸಾ*ವು!

ಜಿಮ್ ಟ್ರೈನರ್‌ಗೆ ಭೀ*ಕರ ಹ*ಲ್ಲೆ! ಚಿಕಿತ್ಸೆ ಫಲಿಸದೆ ನಂದನ್ ಸಾ*ವು!

ಬೆಂಗಳೂರಿನಲ್ಲಿ ಜಿಮ್‌ ಟ್ರೈನರ್‌ ಒಬ್ಬರ ಮೇಲೆ ನಡೆದಿದ್ದ ಹಲ್ಲೆ ಇದೀಗ ದುರಂತ ಅಂತ್ಯ ಕಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ 25 ವರ್ಷದ ನಂದನ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಶನಿವಾರ ಜಿಮ್‌ನ ಮೊದಲ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ತೆರಳಿದ್ದ ನಂದನ್, ರಾತ್ರಿ ಮನೆಗೆ ಬರುವುದು ತಡವಾದರೆ ಬೆಳಗ್ಗೆ ಬರುವುದಾಗಿ ಮನೆಯವರಿಗೆ ತಿಳಿಸಿದ್ದರು ಎನ್ನಲಾಗಿದೆ. ಕಾರ್ಯಕ್ರಮ ಮುಗಿದ ಬಳಿಕ ಜಿಮ್ ಸಿಬ್ಬಂದಿ ಹಾಗೂ ಪರಿಚಿತರೊಂದಿಗೆ ನಂದನ್ ತಮ್ಮ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು.

ಈ ವೇಳೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದ್ದು, ನಂದನ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಹಲ್ಲೆಯಲ್ಲಿ ನಂದನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ವೈದ್ಯರ ಪ್ರಯತ್ನದ ನಡುವೆಯೂ ನಂದನ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ತೆರಳಿದ ಸಾಫ್ಟ್‌ವೇರ್ ಉದ್ಯೋಗಿಯ ದುರಂತ ಅಂತ್ಯ!

. ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ ಮಿಥುನ್ ಕುಮಾರ್, ಕೊಲೆಯಾದ 25 ವರ್ಷದ ನಂದನ್​​ ಜಿಮ್​​ ಟ್ರೈನರ್​​ ಆಗಿದ್ದರು. ವಿಶ್ವನಾಥ, ವಿಜಯ್, ಶರತ್ ಮತ್ತು ನಿಶಾಂತ್ ಎಲ್ಲರೂ ಟ್ರೈನರ್​​ಗಳೇ. ಅನುಷ್ ಎಂಬಾತನಿಗೆ ನಂದನ್ ಪರ್ಸನಲ್ ಟ್ರೈನರ್ ಆಗಿದ್ದರು. ಅನುಷ್ ಮನೆಗೆ ಪಾರ್ಟಿಗೆ ಅಂತಾ ಹೋದಾಗ ಘಟನೆ ನಡೆದಿದೆ. ವೈಯಕ್ತಿಕ ಕಾರಣಗಳಿಗೆ ಈ ರೀತಿ ನಡೆದಿರುವ ಸಾಧ್ಯತೆ ಇದೆ ಎಂದಿದ್ದಾರೆ.

ನಂದನ್ ಸಾವಿನಿಂದ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸಂತೋಷದಿಂದ ಆರಂಭವಾಗಬೇಕಿದ್ದ ಜಿಮ್‌ನ ಮೊದಲ ವರ್ಷದ ಕಾರ್ಯಕ್ರಮ ಇದೀಗ ಕುಟುಂಬಕ್ಕೆ ಮರೆಯಲಾಗದ ದುಃಖದ ಘಟನೆಯಾಗಿ ಪರಿಣಮಿಸಿದೆ.

ಘಟನೆಗೆ ನಿಖರ ಕಾರಣವೇನು? ನಂದನ್ ಮೇಲೆ ಹಲ್ಲೆ ನಡೆಸಿದ್ದು ಯಾರು? ಗಲಾಟೆ ಹೇಗೆ ಆರಂಭವಾಯಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಲ್ಲೆ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

Kishor KV

Leave a Reply

Your email address will not be published. Required fields are marked *