ಜ್ಞಾನವಾಪಿ ಮಸೀದಿ ಸರ್ವೆಗೆ ಸುಪ್ರೀಂ ಕೋರ್ಟ್ ತಡೆ – ಜುಲೈ 26ರ ಸಂಜೆ 5ಗಂಟೆವರೆಗೂ ಸರ್ವೆ ನಡೆಸದಂತೆ ಆದೇಶ

ಜ್ಞಾನವಾಪಿ ಮಸೀದಿ ಸರ್ವೆಗೆ ಸುಪ್ರೀಂ ಕೋರ್ಟ್ ತಡೆ – ಜುಲೈ 26ರ ಸಂಜೆ 5ಗಂಟೆವರೆಗೂ ಸರ್ವೆ ನಡೆಸದಂತೆ ಆದೇಶ

ಉತ್ತರ ಪ್ರದೇಶದ ವಾರಾಣಸಿಯ ವಿವಾದಿತ ಜ್ಞಾನವಾಪಿ ಮಸೀದಿ ಸರ್ವೆಗೆ ಆರಂಭದಲ್ಲೇ ಸುಪ್ರೀಂ ಕೋರ್ಟ್ ಶಾಕ್ ಕೊಟ್ಟಿದೆ. ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆ ಆದೇಶಕ್ಕೆ ತಡೆ ಕೋರಿ ಮುಸ್ಲಿಂ ಕಮಿಟಿ ಸಿಜೆಐ ಪೀಠದ ಮುಂದೆ ಅರ್ಜಿ ಸಲ್ಲಿಕೆ ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜುಲೈ 26ರವರೆಗೆ ಮಸೀದಿ ಸರ್ವೆಗೆ ತಡೆ ನೀಡಿ ಆದೇಶ ಹೊರಡಿಸಿದೆ. ಸರ್ವೆಗೆ 2 ದಿನಗಳ ಕಾಲ ತಡೆ ನೀಡಿರುವ ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಮಸೀದಿ ಕಮಿಟಿಗೆ ಸೂಚನೆ ನೀಡಿದೆ. ಸರ್ವೆ ನಡೆಸದಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿದ್ದು, ಜುಲೈ 26ರ ಸಂಜೆ 5 ಗಂಟೆವರೆಗೂ ಸರ್ವೆಗೆ ಸ್ಟೇ ನೀಡಲಾಗಿದೆ.

ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ಬಿ.ಕೆ ಹರಿಪ್ರಸಾದ್ ಹೇಳಿಕೆ ವಿರುದ್ಧ ಭುಗಿಲೆದ್ದ ಕಿಚ್ಚು – ವಿಧಾನಪರಿಷತ್ ಸದಸ್ಯ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹ

ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷಾ ತಂಡವು (Archaeological Survey of India) 30 ಸದಸ್ಯರ ನೇತೃತ್ವದಲ್ಲಿ ಮಸೀದಿಯ ಸರ್ವೇ ಕಾರ್ಯಕ್ಕೆ ಮುಂದಾಗಿತ್ತು. ಪ್ರಾಚೀನ ಕಾಲದಲ್ಲಿ ಮಸೀದಿ ನಿರ್ಮಿಸಿದ್ದ ಸ್ಥಳದಲ್ಲಿ ಹಿಂದೂ ದೇಗುಲವಿತ್ತು. ಅದನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಆರೋಪ ಸತ್ಯವೇ? ಇಲ್ಲ, ಅದು ಸತ್ಯಕ್ಕೆ ದೂರವಾದ ಆರೋಪವೇ ಅನ್ನೋದು ಈ ಸರ್ವೇ ಉದ್ದೇಶವಾಗಿತ್ತು.  ಇದನ್ನು ವಿರೋಧಿಸಿ ಮಸೀದಿ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹೀಗಾಗಿ ತುರ್ತು ವಿಚಾರಣೆ ನಡೆಸಿ ಆದೇಶ ನೀಡಿರುವ ಸುಪ್ರೀಂ ಸಮೀಕ್ಷೆ ಬೇಡ ಎಂದು ಮಧ್ಯಂತ ಆದೇಶ ನೀಡಿದೆ.

ಮತ್ತೊಂದು ಕಡೆ ಮಸೀದಿಯ ಆಡಳಿತ ಮಂಡಳಿ ಸರ್ವೆಗೆ ವಿರೋಧಿಸಿ ಬಾಯ್​​​ಕಾಟ್ ಮಾಡಿದೆ. ಅಂಜುಮನ್ ಇಂಟೆಜಾಮಿಯಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮೌಲನಾ ಅಬ್ದುಲ್ ಬಟಿನ್ ನೋಮನಿ ಸರ್ವೇ ಬಗ್ಗೆ ಪ್ರತಿಕ್ರಿಯಿಸಿ, ನಾವು ಯಾರೂ ಕೂಡ ಭಾಗಿಯಾಗುತ್ತಿಲ್ಲ. ನಮಗೆ ಮಸೀದಿ ಸರ್ವೇಗೆ ಒಳಪಡಿಸುತ್ತಿರೋದು ಸರಿ ಕಾಣುತ್ತಿಲ್ಲ. ಅಲ್ಲಿ ಯಾವುದೇ ಹಿಂದೂ ವಿಗ್ರಹಗಳು ಇಲ್ಲ. ಹೀಗಾಗಿ ನಾವು ವಿರೋಧಿಸುತ್ತಿದ್ದೇವೆ ಎಂದಿದ್ದರು. ಮಾತ್ರವಲ್ಲ, ಮಸೀದಿಯನ್ನು ಸರ್ವೇ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಾರಣಾಸಿ ಹೈಕೋರ್ಟ್​, ಸರ್ವೇಗೆ ಅವಕಾಶ ಮಾಡಿಕೊಟ್ಟಿದ್ದನ್ನು ವಿರೋಧಿಸಿ, ಮುಸ್ಲಿಂ ಸಮುದಾಯ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮಸೀದಿ ಸರ್ವೇ ಆರಂಭಕ್ಕೂ ಮೊದಲು ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂದು ಮಸೀದಿ ಆಡಳಿತ ಮಂಡಳಿ ಮನವಿ ಮಾಡಿಕೊಂಡಿತ್ತು.

ಕಳೆದ ಶುಕ್ರವಾರ ತೀರ್ಪು ನೀಡಿದ್ದ ವಾರಣಸಿ ಹೈಕೋರ್ಟ್​ನ ನ್ಯಾಯಮೂರ್ತಿ ಎ.ಕೆ ವಿಶ್ವೇಶ್​, ಮಸೀದಿಯನ್ನು ಸಂಪೂರ್ಣವಾಗಿ ಸರ್ವೇ ಮಾಡಬೇಕು. 15 ದಿನಗಳ ಒಳಗೆ ಫೋಟೋ ಮತ್ತು ವಿಡಿಯೋ ಮೂಲಕ ಸರ್ವೇ ನಡೆಸಿ ಕೋರ್ಟ್​ಗೆ ಹಾಜರುಪಡಿಸಬೇಕು. ಅಂದರೆ ಆಗಸ್ಟ್ 4ಕ್ಕೆ ನಿಮ್ಮ ಸರ್ವೇ ರಿಪೋರ್ಟ್​ ನಮಗೆ ತಲುಪಬೇಕು ಎಂದು ಎಎಸ್​ಐ ತಂಡಕ್ಕೆ ನಿರ್ದೇಶನ ನೀಡಿದ್ದರು. ಮಾತ್ರವಲ್ಲ ಸರ್ವೇಯಲ್ಲಿ GPR ತಂತ್ರಜ್ಞಾನವನ್ನು (Ground Penetrating Radar technology)ಬಳಸಿಕೊಳ್ಳುವಂತೆಯೂ ಸೂಚನೆ ನೀಡಲಾಗಿತ್ತು.

suddiyaana