ಕ್ಯಾಬ್‌ ಡ್ರೈಬರ್‌ ಟಿಪ್ಸ್‌ ಕೊಟ್ಟ ಮಹಿಳೆ! – ಅಯ್ಯೋ.. ಸಹಾಯ ಮಾಡಿದ್ದೇ ತಪ್ಪಾಯ್ತಾ?

ಕ್ಯಾಬ್‌ ಡ್ರೈಬರ್‌ ಟಿಪ್ಸ್‌ ಕೊಟ್ಟ ಮಹಿಳೆ! – ಅಯ್ಯೋ.. ಸಹಾಯ ಮಾಡಿದ್ದೇ ತಪ್ಪಾಯ್ತಾ?

ಕಾಲಕ್ಕೆ ತಕ್ಕಂತೆ ಜನರ ಜೀವನ, ಮನಸ್ಥಿತಿ ಬದಲಾಗಿದೆ. ಮೊದ್ಲೆಲ್ಲಾ ಅಪರಿಚಿತ ವ್ಯಕ್ತಿಗಳಿಗೆ ಸಹಾಯ ಮಾಡಿದ್ರೆ ಅದನ್ನ ಜೀವನ ಪರ್ಯಂತ ನೆನಪಿಲ್ಲಿಟ್ಟುಕೊಳ್ತಿದ್ರು.. ಆದ್ರೆ ಈಗ ಹಾಗಲ್ಲ.. ಸಹಾಯ ಮಾಡೋಕೆ ಬಂದವ್ರಿಗೆ ತೊಂದರೆ ಕೊಡೋ ಮನಸ್ಥಿತಿ ನಮ್ಮ ಜನರದ್ದು. ಇದೀಗ ಇಲ್ಲೊಬ್ಬಳು ಮಹಿಳೆ ಕ್ಯಾಬ್‌ ಡ್ರೈವರ್‌ಗೆ ಟಿಪ್ಸ್‌ ಕೊಡಲು ಹೋಗಿ ತೊಂದರೆಗೆ ಸಿಲುಕಿದ್ದಾಳೆ. ಆತ ಕೊಡೋ ಕಾಟಕ್ಕೆ ಬೇಸತ್ತು ಹೋಗಿದ್ದಾಳೆ.

ಇದನ್ನೂ ಓದಿ: ಇಬ್ಬರು ಮಕ್ಕಳನ್ನ ಕೊಂದು ಮಹಿಳೆ ಆತ್ಮಹತ್ಯೆ! – ಹೆಂಡತಿ, ಮಕ್ಕಳ ಸಾವಿಗೆ ಪತಿಯೇ ಕಾರಣ ಆದ್ನಾ?

ಇತ್ತೀಚೆಗೆ ಅನೇಕರು ಬಸ್‌, ಮೆಟ್ರೋಗಳಲ್ಲಿ ಓಡಾಡುವುದಕ್ಕಿಂತ ಜಾಸ್ತಿ ಕ್ಯಾಬ್‌ಗಳಲ್ಲಿ ಸಂಚರಿಸ್ತಾರೆ. ಈ ವೇಳೆ ಅನೇಕರು 5 ರೂಪಾಯಿ 10 ರೂಪಾಯಿ ಟಿಪ್ಸ್‌ ಕೊಡೋದು ಕಾಮನ್‌. ಆದ್ರೆ ಗುರುಗ್ರಾಮದಲ್ಲಿ ಮಹಿಳೆಯೊಬ್ಬಳು ಕ್ಯಾಬ್‌ ಡ್ರೈವರ್‌ಗೆ ಟಿಪ್ಸ್‌ ಕೊಟ್ಟಿದ್ದು, ಇದ್ರಿಂದಾಗಿ ತೊಂದರೆಗೆ ಸಿಲುಕಿದ್ದಾಳೆ. ಈ ಕುರಿತು ರೆಡ್ಡಿಟ್‌ನಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡು ಕಳವಳ ವ್ಯಕ್ತಪಡಿಸಿದ್ದಾರೆ.

r/Gurgaon ಹೆಸರಿನ ಸಬ್ ರೆಡಿಟ್ ನಲ್ಲಿ ಮಹಿಳೆಯೂ ಕ್ಯಾಬ್ ಚಾಲಕನು ತನ್ನ ಜತೆಗೆ ವರ್ತಿಸಿದ ರೀತಿಯನ್ನು ಪೋಸ್ಟ್‌ ಮಾಡಿದ್ದಾಳೆ. ಹುಡುಗಿಯರೇ ದಯವಿಟ್ಟು ಕ್ಯಾಬ್ ಚಾಲಕರಿಗೆ ಒಳ್ಳೆಯರಾಗುವ ಮೊದಲು ಎರಡು ಬಾರಿ ಯೋಚಿಸಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾಳೆ. ಕ್ಯಾಬ್‌ ನಲ್ಲಿ ಹೋಗುತ್ತಿದ್ದಾಗ ರಸ್ತೆ ಬ್ಲಾಕ್ ಆಗಿತ್ತು. ಈ ವೇಳೆ ಬೇರೆ ದಾರಿಯಲ್ಲಿ ಹೋಗಿ ನಮ್ಮನ್ನು ಸುರಕ್ಷಿತವಾಗಿ ಮನೆಗೆ  ತಲುಪಿಸಿದ್ದಾನೆ. ಮನೆಗೆ ತಲುಪುತ್ತಿದ್ದಂತೆ ನಾನು ಆತನಿಗೆ UPIನಲ್ಲಿ ಹಣ ಪಾವತಿಸಿದೆ. ಜೊತೆಗೆ 100 ರೂಪಾಯಿ ಟಿಪ್ಸ್‌ ಕೂಡ ಕೊಟ್ಟೆ.. ಆದ್ರೆ ಆತ ನನ್ನ ಪೇಟಿಎಂ ಯುಪಿಐ ಐಡಿಯಿಂದ ನನ್ನ ನಂಬರ್ ತೆಗೆದುಕೊಂಡು ಕೆಲವೇ ಕ್ಷಣಗಳಲ್ಲಿ ಹಣವನ್ನು ನನಗೆ ಹಿಂದಿರುಗಿಸಿದ. ಬಳಿಕ ನನಗೆ ವಾಟ್ಸಾಪ್‌ನಲ್ಲಿ ಮೆಸೆಜ್‌ ಕಳುಹಿಸಲು ಶುರುಮಾಡಿದ. ನಾನು ತಕ್ಷಣ ಅವನ ನಂಬರ್ ಬ್ಲಾಕ್ ಮಾಡಿದೆ. ನಂಬರ್‌ ಬ್ಲಾಕ್ ಮಾಡಿದ ನಂತರವೂ, ಅವನು ಪೇಟಿಎಂನಲ್ಲಿ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾನೆ.  ನಾನು ಅವನನ್ನು ಅಲ್ಲಿಯೂ ಬ್ಲಾಕ್ ಮಾಡಿದೆ ಮತ್ತು ಆಪ್‌ನಲ್ಲಿ ದೂರು ನೀಡಿದೆ ಎಂದು ತಮಗಾದ ಕಹಿ ಅನುಭವವನ್ನು ವಿವರಿಸಿದ್ದಾರೆ.

ಪ್ರಯಾಣದ ಸಮಯದಲ್ಲಿ ನಾನು ನನ್ನ ಸ್ನೇಹಿತ ಚಾಲಕನೊಂದಿಗೆ ಮಾತನಾಡಲಿಲ್ಲ. ಆದ್ರೆ ಆತನಿಗೆ ನಾನು ಎಲ್ಲಿ ವಾಸಿಸುತ್ತಿದ್ದೇನೆಂದು ಗೊತ್ತಿದೆ. ಹೀಗಾಗಿ ನನಗೆ ಭಯವಾಗ್ತಿದೆ. ನಾನು ಪೊಲೀಸರಿಗೆ ದೂರು ನೀಡಬೇಕಾ ಅಥವಾ ಮಧ್ಯವರ್ತಿಯ ಮೂಲಕ ಅವನಿಗೆ ವಾರ್ನ್‌ ಮಾಡಬೇಕಾ ಎಂದು ಮಹಿಳೆ ಸಲಹೆ ಕೇಳಿದ್ದಾಳೆ. ಸದ್ಯ ಈ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಕ್ಯಾಬ್‌ ಡ್ರೈಬರ್‌ಗಳ ಜೊತೆ ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ ಎಂದು ಸೋಶಿಯಲ್‌ ಮೀಡಿಯಾ ಬಳಕೆದಾರರು ಕಮೆಂಟ್‌ ಮಾಡಿದ್ದಾರೆ.

Shwetha M