ಕುಂತಲ್ಲಿ ನಿಂತಲ್ಲಿ ಅತ್ತೆ, ಗಂಡನಿಂದ ಅವಮಾನ – ಸೀನನಿಗೆ ಡೈವೋರ್ಸ್ ಕೊಡಲು ಗುಂಡಮ್ಮನ ತೀರ್ಮಾನ

ಕುಂತಲ್ಲಿ ನಿಂತಲ್ಲಿ ಅತ್ತೆ, ಗಂಡನಿಂದ ಅವಮಾನ – ಸೀನನಿಗೆ ಡೈವೋರ್ಸ್ ಕೊಡಲು ಗುಂಡಮ್ಮನ ತೀರ್ಮಾನ

ಅಣ್ಣಯ್ಯ ಸೀರಿಯಲ್‌ನಲ್ಲಿ ಗುಂಡಮ್ಮ ಮತ್ತು ಸೀನನ ಜೋಡಿ ನೋಡುವುದೇ ವೀಕ್ಷಕರಿಗೆ ಇಷ್ಟ. ಸೀನ ಮತ್ತು ಗುಂಡಮ್ಮ ಜಗಳ ಆಡುವುದೇ ಸಿಕ್ಕಾಪಟ್ಟೆ ಮಜಾ ಕೊಡುತ್ತಿತ್ತು. ಆದರೀಗ ಸ್ಟೋರಿ ಬದಲಾಗುತ್ತಿದೆ. ಗುಂಡಮ್ಮನಿಗೆ ಸೀನ ಇನ್ನಿಲ್ಲದ ಅವಮಾನ ಮಾಡುತ್ತಿದ್ದಾನೆ. ಜೊತೆಗೆ ಸೀನನ ಅಮ್ಮ ಕೂಡಾ ತನ್ನ ಸೊಸೆ ತನ್ನಂತೆ ಹೆಣ್ಣು ಅನ್ನೋದನ್ನು ನೋಡದೇ ಅವಮಾನ ಮಾಡುತ್ತಿದ್ದಾಳೆ.

ಇದನ್ನೂ ಓದಿ:ಭಾವುಕ ಕ್ಷಣಕ್ಕೆ ಸಾಕ್ಷಿಯಾದ ದೊಡ್ಮನೆ! – ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ರಾಶಿಕಾ, ಸೂರಜ್‌ ಫ್ಯಾಮಿಲಿ!

ಜಿಮ್‌ ಸೀನ ಹಾಗೂ ರಶ್ಮಿ ಬೇರೆ ಬೇರೆ ಆಗಬೇಕು ಎಂದು ಅತ್ತೆ ಲೀಲಾ ಪಟ್ಟು ಹಿಡಿದು ಕೂತಿದ್ದಾಳೆ. ಸೀನ ಕೂಡಾ ನೀನು ಆನೆ,ಹಾಗೆ ಹೀಗೆ ಎಂದು ಅವಮಾನ ಮಾಡುತ್ತಾನೆ. ಆಗ ಗುಂಡಮ್ಮ ಹೌದು, ನಾನು ದಪ್ಪಗಿದ್ದೀನಿ. ನಾನು ನೋಡಲು ಚೆನ್ನಾಗಿಲ್ಲ, ಅದೆಲ್ಲಾ ನನ್ನದೇ ತಪ್ಪು ಅಂತಾ ಹೇಳುತ್ತಾಳೆ. ನಂತರ ನಿಮಗೆ ಡೈವೋರ್ಸ್ ಬೇಕು ತಾನೇ. ನಾನು ಕೊಡುತ್ತೇನೆ ಎಂದು ಗುಂಡಮ್ಮ ಹೇಳುತ್ತಾಳೆ. ಅಲ್ಲಿಗೆ ಲೀಲಾಳ ಪ್ಲ್ಯಾನ್ ಸಕ್ಸಸ್ ಆಗುತ್ತದೆ. ಯಾಕೆಂದರೆ, ಲೀಲಾಗೆ ಪಿಂಕಿಯನ್ನು ಸೊಸೆ ಮಾಡಿಕೊಳ್ಳುವ ಆಸೆ. ಸೀನನಿಗೂ ಪಿಂಕಿ ಮೇಲೆಯೇ ಪ್ರೀತಿ. ಹೀಗಾಗಿ ಒಪ್ಪಿಕೊಳ್ಳದ ಗಂಡನನ್ನು ದೂರ ಮಾಡಲು ರಶ್ಮಿಯೇ ಮನಸು ಮಾಡಿದ್ದಾಳೆ. ಡೈವೋರ್ಸ್ ಕೊಡಲು ಒಪ್ಪುತ್ತಾಳೆ.

ಮತ್ತೊಂದೆಡೆ ಲೀಲಾಗೆ ರಶ್ಮಿ ತಾಯಿ ಶಾರದಾ ಸರಿಯಾಗಿಯೇ ಪಾಠ ಕಲಿಸುತ್ತಿದ್ದಾಳೆ. ಅವಳಿಗೆ ಗೊತ್ತಾಗದಂತೆ ಹೊಡೆದಿದ್ದಾಳೆ. ಆದರೂ ಕೂಡ ಲೀಲಾ ಮಾತ್ರ ರಶ್ಮಿ-ಸೀನಗೆ ಡಿವೋರ್ಸ್‌ ಆಗಲೇಬೇಕು ಎಂದು ಹೇಳಿದ್ದಾಳೆ. ಈಗ ರಶ್ಮಿ ಕೂಡ ಡಿವೋರ್ಸ್‌ ಕೊಡಲು ರೆಡಿಯಾಗಿದ್ದಾಳೆ. ಸೀನನನ್ನು ಕಂಡರೆ ರಶ್ಮಿಗೆ ಇಷ್ಟವೇ ಇರಲಿಲ್ಲ, ಆದರೆ ಮದುವೆ ಆದ್ಮೇಲೆ ಸೀನನನ್ನು ಕಂಡ್ರೆ ಅವಳಿಗೆ ಇಷ್ಟ ಆಗಲು ಶುರುವಾಗಿದೆ. ರಶ್ಮಿ ಸೀನ ತನ್ನನ್ನು ಒಂದು ದಿನ ಹೆಂಡ್ತಿ ಎನ್ನೋ ಥರ ನಡೆಸಿಕೊಳ್ಳಲಿ ಎಂದು ಅವಳು ಆಸೆಪಟ್ಟಿದ್ದಳು. ಆದರೆ, ಸೀನ ಪಿಂಕಿಯನ್ನೇ ಮದುವೆಯಾಗೋದಾಗಿ ಹೇಳಿದ್ದಾನೆ. ಹೀಗಾಗಿ ಡಿವೋರ್ಸ್‌ ಕೊಡ್ತೀನಿ ಎಂದು ರಶ್ಮಿಯೇ ಹೇಳಿದ್ದಾಳೆ.

ಮತ್ತೊಂದೆಡೆ ರಶ್ಮಿ ಮತ್ತು ಸೀನನ ಸಂಸಾರ ಹಳಿ ತಪ್ಪಿದ್ದು ಶಿವುಗೆ ಗೊತ್ತಿಲ್ಲ. ಪಾರುಗೂ ಕೂಡಾ ರಶ್ಮಿ ಡಿವೋರ್ಸ್ ಕೊಡಲು ಒಪ್ಪಿದ್ದು ಗೊತ್ತಿಲ್ಲ. ಸತ್ಯ ಗೊತ್ತಾದ ಮೇಲೆ ರಶ್ಮಿ ಜೀವನ ಸರಿ ಹೋಗುತ್ತಾ, ತನ್ನ ಮಗಳ ಜೀವನ ಸರಿ ಮಾಡಿಸ್ತಾಳಾ ಶಾರದಮ್ಮ ಅನ್ನೋದನ್ನು ಕಾದುನೋಡಬೇಕು.

Sulekha