ರಾಕೇಶ್ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ.. ಆತನ ಮೇಲೆ ಜನರಿಗೆ ಇರೋ ಪ್ರೀತಿ ಬಗ್ಗೆ ಗೊತ್ತು! – ಗುಲ್ಶನ್ ದೇವಯ್ಯ ಭಾವುಕ

ರಾಕೇಶ್ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ.. ಆತನ ಮೇಲೆ ಜನರಿಗೆ ಇರೋ ಪ್ರೀತಿ ಬಗ್ಗೆ ಗೊತ್ತು! – ಗುಲ್ಶನ್ ದೇವಯ್ಯ ಭಾವುಕ

ಕಾಂತಾರ ಚಾಪ್ಟರ್‌ 1 ರಿಲೀಸ್‌ ಆಗಿದ್ದು, ತೆರೆ ಮೇಲೆ ಅಬ್ಬರಿಸುತ್ತಿದೆ. ಬಾಕ್ಸ್‌ ಆಫೀಸ್‌ ನಲ್ಲಿ ರಿಷಭ್‌ ಶೆಟ್ಟಿ ಸಿನಿಮಾ ದಾಖಲೆ ಬರೆದಿದೆ. ಆದ್ರೆ ಈ ಸಿನಿಮಾದಲ್ಲಿ ನಟಿಸಿದ್ದ ನಗುವಿನ ಸರದಾರ ರಾಕೇಶ್‌ ಪೂಜಾರಿ ನಮ್ಮನ್ನ ಅಗಲಿದ್ದಾರೆ. ಸಿನಿಮಾ ನೋಡಿದವರೆಲ್ಲಾ ರಾಕೇಶ್‌ ಶೆಟ್ಟಿ ಇರ್ಬೇಕಿತ್ತು ಎಂದು ಹೇಳುತ್ತಿದ್ದಾರೆ, ಇದೀಗ ಕಾಂತಾರ ಚಾಪ್ಟರ್‌ 1 ಸಿನಿಮಾದಲ್ಲಿ ಕುಲಶೇಖರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗುಲ್ಶನ್ ದೇವಯ್ಯ  ತಮ್ಮ ಸಹ ನಟ ರಾಕೇಶ್ ಪೂಜಾರಿಯನ್ನು ನೆನೆದು ಭಾವುಕರಾಗಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ಅಸುರಾಧಿಪತಿ ಕಾಕ್ರೋಚ್.. ರಕ್ಷಿತಾ ಶೆಟ್ಟಿಗೆ ಪನಿಶ್ಮೆಂಟ್‌! – ಇಬ್ಬರು OUT..‌ ಹೊಸ ಎಂಟ್ರಿ ಇವ್ರೇ?  

ಎಕ್ಸ್‌  ರಾಕೇಶ್‌ ಪೂಜಾರಿ ಬಗ್ಗೆ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ನನಗೆ ರಾಕೇಶ್ ಪೂಜಾರಿಯ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಜನರು ಆತನ ಮೇಲಿಟ್ಟಿರುವ ಪ್ರೀತಿಯನ್ನು ಹಾಗೂ ಆತನನ್ನು ನೆನಪಿಸಿಕೊಳ್ಳುವ ಪರಿಯನ್ನು ನಾನು ಗಮನಿಸುತ್ತಿದ್ದೇನೆ. ಇದರಿಂದಲೇ ಆತ ಎಂತಹ ಕಲಾವಿದ ಎಂದು ಗೊತ್ತಾಗುತ್ತದೆ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.

ಇದೇ ವೇಳೆ ಪೋಸ್ಟ್‌ವೊಂದನ್ನು ರೀಪೋಸ್ಟ್ ಮಾಡಿದ್ದು, ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಪ್ರೇಕ್ಷಕರನ್ನು ಅತೀ ಹೆಚ್ಚು ನಗಿಸಿದ ಪಾತ್ರವೆಂದರೆ ಅದು ರಾಕೇಶ್ ಪೂಜಾರಿಯವರದ್ದು. ಆದರೆ ಇಂದು ಸಿನಿಮಾದ ಮೂಲಕ ಅವರಿಗೆ ಸಿಗುತ್ತಿರುವ ಪ್ರೀತಿಯನ್ನು ನೋಡಲು ಅವರು ನಮ್ಮೊಂದಿಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

Shwetha M