ಗುಜರಾತ್ ದಾಳಿಗೆ ಹೈದ್ರಾಬಾದ್ ತಂಡ ಗಿರಗಿರ – 86 ರನ್‌ಗೆ ಸನ್‌ರೈಸರ್ಸ್ ಸರ್ವಪತನ

ಗುಜರಾತ್ ದಾಳಿಗೆ ಹೈದ್ರಾಬಾದ್ ತಂಡ ಗಿರಗಿರ – 86 ರನ್‌ಗೆ ಸನ್‌ರೈಸರ್ಸ್ ಸರ್ವಪತನ

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ನಡುವಿನ ಕದನದಲ್ಲಿ ಗುಜರಾತ್ ಗೆದ್ದು ಬೀಗಿದೆ. ಜೊತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇದನ್ನೂ ಓದಿ:KKRಗೆ ನೀರು ಕುಡಿಸ್ತಾರಾ ಸಾಲ್ಟ್ – ಮಸ್ಟ್ ವಿನ್ ಬ್ಯಾಟಲ್ ಗೆಲ್ಲುತ್ತಾ RCB?

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಆಗ ಹೈದ್ರಾಬಾದ್ ತಂಡದ ನಿರ್ಣಯ ಸರಿಯಾಗಿಯೇ ಇತ್ತು ಎಂದೇ ಹೇಳಲಾಗುತ್ತಿತ್ತು. ಗುಜರಾತ್ ಬೌಲರ್ಸ್ ಹೈದ್ರಾಬಾದ್ ತಂಡವನ್ನು 168 ರನ್‌ಗಳಿಗೆ ಕಟ್ಟಿ ಹಾಕಿದ್ದರು. ಗುಜರಾತ್ ಕ್ಯಾಪ್ಟನ್ ಗಿಲ್ ಈ ಪಂದ್ಯದಲ್ಲೂ ಕೂಡಾ ಅಬ್ಬರಿಸಿಲ್ಲ. ಆರಂಭಿಕ ದಾಂಡಿಗ ಸಾಯಿ ಸುದರ್ಶನ್ ಜವಾಬ್ದಾರಿಯುತ ಇನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ 42 ಎಸೆತಗಳಲ್ಲಿ 61 ರನ್​ಗಳ ಕೊಡುಗೆ ನೀಡಿದರು. ಇನ್ನು ಅಂತಿಮ ಓವರ್​ಗಳ ವೇಳೆ ಅಬ್ಬರಿಸಿದ ವಾಷಿಂಗ್ಟನ್ ಸುಂದರ್ 33 ಎಸೆತಗಳಲ್ಲಿ 50 ರನ್ ಬಾರಿಸಿದರು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 168 ರನ್ ಕಲೆಹಾಕಿತು.

169 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು. ಮೊದಲ ಓವರ್​ನಲ್ಲೇ ಟ್ರಾವಿಡ್ ಹೆಡ್ ಸೊನ್ನೆ ರನ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕಗಿಸೊ ರಬಾಡ ಎಸೆತಗಳಲ್ಲಿ ಅಭಿಷೇಕ್ ಶರ್ಮಾ 6 ರನ್, ಇಶಾನ್ ಕಿಶನ್ 11 ರನ್‌ಗೆ ಔಟಾದರು. ಈ ಆಘಾತದಿಂದ ಪಾರಾಗುವ ಮುನ್ನ ಸ್ಮರಣ್ ರವಿಚಂದ್ರನ್ 9, ಹಾಗೂ ಸಲೀಲ್ ಅರೋರಾ 16 ರನ್‌ಗೆ ಔಟಾದರು. ಇದರ ಬೆನ್ನಲ್ಲೇ ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ  ಕೂಡಾ ಪೆವಿಲಿಯನ್ ಪರೇಡ್ ಮಾಡಿದರು., ಪ್ಯಾಟ್ ಕಮಿನ್ಸ್ 19 ರನ್​ಗಳಿಸಿ ಇನಿಂಗ್ಸ್ ಕೊನೆಗೊಳಿಸಿದರು. ಪರಿಣಾಮ ಸನ್​ರೈಸರ್ಸ್ ಹೈದರಾಬಾದ್ ತಂಡವು 14.5 ಓವರ್​ಗಳಲ್ಲಿ ಕೇವಲ 86 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 82 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಅಂಕಗಳೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ.

Sulekha

Leave a Reply

Your email address will not be published. Required fields are marked *