ಚೆನ್ನೈ ವಿರುದ್ಧ ಗೆದ್ದು ಬೀಗಿದ ಗುಜರಾತ್​ ಟೈಟನ್ಸ್! – ಪ್ಲೇ ಆಫ್​ ರೇಸ್​ಗೆ ಎಂಟ್ರಿಕೊಟ್ಟ ಶುಭ್ಮನ್​ ಗಿಲ್​ ಪಡೆ

ಚೆನ್ನೈ ವಿರುದ್ಧ ಗೆದ್ದು ಬೀಗಿದ ಗುಜರಾತ್​ ಟೈಟನ್ಸ್! – ಪ್ಲೇ ಆಫ್​ ರೇಸ್​ಗೆ ಎಂಟ್ರಿಕೊಟ್ಟ ಶುಭ್ಮನ್​ ಗಿಲ್​ ಪಡೆ

ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಗುಜರಾತ್​​​​ ಟೈಟನ್ಸ್ ವಿರುದ್ಧ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಜಿಟಿ ಗೆದ್ದು ಬೀಗಿದೆ. ಗುಜರಾತ್​​​​ ಟೈಟನ್ಸ್​ ಬರೋಬ್ಬರಿ 35 ರನ್​​ಗಳಿಂದ ಜಯಭೇರಿ ಸಾಧಿಸಿದೆ. ಈ ಮೂಲಕ ಗುಜರಾತ್​ ಕೂಡ ಪ್ಲೇ ಆಫ್​ ರೇಸ್​ನಲ್ಲಿದೆ.

ಇದನ್ನೂ ಓದಿ: ವಿರಾಟ್ ರೂಪ.. ಪ್ಲೇಆಫ್ ಗೆ RCB? – ALL OUT ಅಸ್ತ್ರ ವರ್ಕೌಟ್ ಆಗಿದ್ದೇಗೆ?

ಅಹ್ಮದಾಬಾದಿನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್​​ ಟೈಟನ್ಸ್​​ ನೀಡಿದ ಬೃಹತ್​ ರನ್​ಗಳ ಗುರಿ ಬೆನ್ನತ್ತಿದ ಚೆನ್ನೈ ಪರ ಮಿಚೆಲ್​ 63, ಮೊಯೀನ್​ ಅಲಿ 56, ದುಬೆ 21, ಜಡೇಜಾ 18, ಧೋನಿ 26 ರನ್​ ಗಳಿಸಿದ್ರು. ಚೆನ್ನೈ 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 196 ರನ್​​ ಕಲೆ ಹಾಕಿದೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಗುಜರಾತ್​ ಪರ ಓಪನರ್ಸ್​ ಆಗಿ ಬಂದ ಸಾಯ್​ ಸುದರ್ಶನ್​ ಮತ್ತು ಕ್ಯಾಪ್ಟನ್​ ಶುಭ್ಮನ್​ ಗಿಲ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಸಾಯ್​ ಸುದರ್ಶನ್​ ತಾನು ಎದುರಿಸಿದ 51 ಬಾಲ್​​ನಲ್ಲಿ 7 ಭರ್ಜರಿ ಸಿಕ್ಸರ್​​, 5 ಫೋರ್​ ಸಮೇತ 103 ರನ್​ ಸಿಡಿಸಿದ್ದಾರೆ. ಇವರಿಗೆ ಸಾಥ್​ ಕೊಟ್ಟ ಶುಭ್ಮನ್​ ಗಿಲ್​​ ಕೇವಲ 55 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​, 9 ಫೋರ್​ನೊಂದಿಗೆ 104 ರನ್​ ಚಚ್ಚಿದ್ರು.

ಗುಜರಾತ್​ ತಂಡ ನಿಗದಿತ 20 ಓವರ್​​ನಲ್ಲಿ 3 ವಿಕೆಟ್​ ನಷ್ಟಕ್ಕೆ 231 ರನ್​ ಕಲೆ ಹಾಕಿತ್ತು. ಈ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ 232 ರನ್​ಗಳ ಬಿಗ್​ ಟಾರ್ಗೆಟ್​​ ಕೊಟ್ಟಿತ್ತು.

Shwetha M