RR ಜಟಾಪಟಿ ಗೆದ್ದ GT – ರಶೀದ್ ತಡೆಯೋದೇ ಕಷ್ಟ? – ತಪ್ಪು ಮಾಡಿದ್ದೆಲ್ಲಿ ಸ್ಯಾಮ್ಸನ್?

RR ಜಟಾಪಟಿ ಗೆದ್ದ GT – ರಶೀದ್ ತಡೆಯೋದೇ ಕಷ್ಟ? – ತಪ್ಪು ಮಾಡಿದ್ದೆಲ್ಲಿ ಸ್ಯಾಮ್ಸನ್?

ಐಪಿಎಲ್‌ನಲ್ಲಿ ಆರ್‌ ಆರ್‌ ಕಡೆಗೂ ಸೋತಿದೆ.. ಪಾಯಿಂಟ್‌ ಟೇಬಲ್‌ನಲ್ಲಿ ನಂ.1 ಪೊಸಿಷನ್‌ ನಲ್ಲಿರುವ ಆರ್‌ಆರ್‌ ವಿರುದ್ಧ ಗುಜರಾತ್‌ ಟೈಟನ್ಸ್‌ ರೋಚಕ ಗೆಲುವು ಸಾಧಿಸಿದೆ.. ಕಡೆಯ ಬಾಲ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ರಶೀದ್‌ ಖಾನ್‌ ತಾನು ಈ ಬಾರಿಯೂ ಬ್ಯಾಟಿಂಗ್‌ನಲ್ಲಿ ಗೆಲ್ಲಿಸಬಲ್ಲೆ ಎಂದು ಮತ್ತೊಮ್ಮೆ ತೋರಿಸಿದ್ದಾರೆ.. ಇದು ಎದುರಾಳಿಗಳಿಗೆ ರವಾನೆಯಾಗಿರುವ ಅತಿದೊಡ್ಡ ಎಚ್ಚರಿಕೆ ಸಂದೇಶ.. ಇಷ್ಟಕ್ಕೂ ಎಲ್ಲವೂ ಸರಿಯಾಗಿದ್ದಾಗ ಸಂಜು ಸ್ಯಾಮ್ಸನ್‌ ಎಡವಿದ್ದೆಲ್ಲಿ ಅನ್ನೋದ್ರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಆರ್‌ಸಿಬಿ & ಪಂಜಾಬ್ ಟೀಮ್ ಪಾಲಿಗೆ ಕ್ಯಾಪ್ಟನ್ ಗಳೇ ದುಷ್ಮನ್ ಗಳಾದ್ರಾ?

ಜೈಪುರದಲ್ಲಿ ಪಿಂಕ್‌ ಟೀಂ ಗೆಲ್ಲುವ ಎಲ್ಲಾ ಅವಕಾಶವೂ ಇತ್ತು.. 15.2 ಓವರ್‌ ಗೆ ಕ್ಯಾಫ್ಟನ್‌ ಶುಭ್ಮನ್‌ ಗಿಲ್‌ ಔಟಾದಾಗ ಗುಜರಾತ್‌ನ ಸ್ಕೋರ್‌ 133 ರನ್‌ ಅಷ್ಟೇ ಆಗಿತ್ತು.. ಮುಂದಿನ 28 ಎಸೆತಗಳಲ್ಲಿ 64 ರನ್‌ಗಳು ಬೇಕಿದ್ದವು.. ಜಿಟಿಯಲ್ಲಿ ಗ್ಯಾರಂಟಿ ಬ್ಯಾಟ್ಸ್‌ಮನ್‌ಗಳು ಇರಲಿಲ್ಲ.. ಹೊಡೆದ್ರೆ ಸಿಕ್ಸರ್‌.. ಔಟಾದ್ರೆ ಡಕ್‌ ಅನ್ನೋ ರೀತಿಯಲ್ಲಿರುವ ರಾಹುಲ್‌ ತೆವಾಟಿಯಾ.. ಶಾರುಖ್‌ ಖಾನ್‌.. ರಶೀದ್‌ ಖಾನ್‌.. ಇದ್ರು.. ಆದ್ರೆ ಈ ಮೂವರು ಆಟಗಾರರು ಕೂಡ ತಮ್ಮ ರೋಲ್‌ ಚೆನ್ನಾಗಿಯೇ ಅರ್ಥ ಮಾಡಿಕೊಂಡವಂತೆ ಆಡಿದ್ದರು.. ಇತ್ತೀಚೆಗೆ ಟಿ20ಯಲ್ಲಿ 28 ಎಸೆತಕ್ಕೆ 64 ರನ್‌ ತೀರಾ ಗೆಟ್ಟೇಬಲ್‌ ಸ್ಕೋರ್‌ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.. ಗ್ರೇಟ್‌ ಫಿನಿಷರ್ಸ್‌ ಇರುವ ಟೀಂಗಳಂತೂ ನೀರು ಕುಡಿದಷ್ಟೇ ಸಲೀಸಾಗಿ ಚೇಸ್‌ ಮಾಡಿಬಿಡುತ್ತವೆ.. ಅಥವಾ ನಾಲ್ಕೋ ಐದೋ ರನ್‌ಗಳ ಒಳಗೆ ಸೋತು ಬಿಡುತ್ತವೆ.. ಇಲ್ಲಿ ಓವರ್‌ಗೆ 16.. ಅಥವಾ 17 ರನ್‌ ಬೇಕಿದೆ ಎಂಬುದು ಕೌಂಟ್‌ಗೇ ಬರೋದಿಲ್ಲ.. ಯಾಕಂದ್ರೆ ಬ್ಯಾಟ್ಸ್‌ಮನ್‌ಗಳು ಪ್ರತಿ ಬಾಲನ್ನು ಬೌಂಡರಿ ಗೆರೆ ದಾಟಿಸುವ ಹಂತಕ್ಕೆ ಹೋಗ್ತಾರೆ.. ಯಾವುದೇ ಸ್ಟಾರ್‌ ಬೌಲರ್‌ ಇದ್ದರೂ ಹೊಡೆಯುವ ತಾಕತ್ತು ಬ್ಯಾಟ್ಸ್‌ಮನ್‌ಗಳಿಗೆ ಇರುತ್ತದೆ.. ಯಾಕಂದ್ರೆ ಟಿ20 ಮ್ಯಾಚ್‌ ಎನ್ನುವುದು ಈಗ ಸಂಪೂರ್ಣ ಬ್ಯಾಟ್ಸ್‌ಮನ್‌ ಗೇಮ್‌ ಆಗೋಗಿದೆ.. ಅದೇ ರೀತಿಯಲ್ಲೇ ನಿನ್ನೆ ತೆವಾಟಿಯಾ, ಶಾರುಖ್‌ ಖಾನ್‌.. ಹಾಗೂ ರಶೀದ್‌ ಖಾನ್‌ ಬ್ಯಾಟ್‌ ಬೀಸಿದ್ದರು.. ಪ್ರತಿ ಎಸೆತವನ್ನೂ ಬೌಂಡರಿ ಗೆರೆ ದಾಟಿಸುವ ಉತ್ಸಾಹದಲ್ಲಿಯೇ ಬ್ಯಾಟ್‌ ಬೀಸಿದ್ದರು.. ಇಂತ ಸಂದರ್ಭದಲ್ಲೇ ಎಡವಿದ್ದು ಆರ್‌ ಆರ್‌ ಕ್ಯಾಪ್ಟನ್‌ ಸಂಜು ಸ್ಯಾಮ್ಸನ್‌.. ನೋ ಡೌಟ್‌.. ಆವೇಶ್‌ ಖಾನ್‌ ಟಿ20ಯಲ್ಲಿ ಡೆತ್‌ ಓವರ್‌ ಸ್ಪೆಷಲಿಸ್ಟ್‌.. ಆವೇಶ್‌ ಎಸೆದ 18ನೇ ಓವರ್‌ನಲ್ಲಿ ಕೇವಲ 7 ರನ್‌ ನೀಡಿದ್ದರು.. ಈ ಮೂಲಕ ತಂಡ ಮತ್ತೊಮ್ಮೆ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.. ಆದ್ರೆ ಸಮಸ್ಯೆ ಇದ್ದದ್ದು ಸಂಜು ಸ್ಯಾಮ್ಸನ್‌ ಆಯ್ಕೆಯಲ್ಲಿ.. ಡೆತ್‌ ಓವರ್‌ ಕಡೆಗೆ ಹೋದಾಗ ಸಂಜು ಸ್ಯಾಮ್ಸನ್‌ ಸ್ವಲ್ಪ ಮಟ್ಟಿಗೆ ವಿಚಲಿತರಾದಂತೆ ಕಂಡುಬಂದರು.. ಪದೇ ಪದೆ ಜೋಸ್‌ ಬಟ್ಲರ್‌ ಸಲಹೆ ಪಡೀತಾ ಹೋದ್ರು.. ಎಷ್ಟರಮಟ್ಟಿಗೆ ಬೌಲರ್‌ಗಳ ಜೊತೆಗೆ ಪ್ರತಿ ಎಸೆತದ ವೇಳೆಯೂ ಡಿಸ್ಕಷನ್‌ ಮಾಡ್ತಾ ಹೋದ್ರು ಅಂದ್ರೆ ನೋಡ ನೋಡುತ್ತಿದ್ದಂತೆ ಪಂದ್ಯ ಓವರ್‌ ಟೈಂ ಕಡೆಗೆ ಜಾರಿಹೋಯ್ತು.. ಇದ್ರಿಂದಾಗಿ ಕಡೆಯ ಓವರ್‌ ವೇಳೆಗೆ ಪೆನಾಲ್ಟಿಯಾಗಿ ನಾಲ್ಕೇ ನಾಲ್ಕು ಫೀಲ್ಡರ್ಸ್‌ ಮಾತ್ರ  ಔಟ್‌ ಫೀಲ್ಡ್‌ನಲ್ಲಿ ಫೀಲ್ಡಿಂಗ್‌ ಮಾಡುವಂತಾಯಿತು.. ಇದ್ರಿಂದಾಗಿ ಫೀಲ್ಡರ್ಸ್‌ ಪ್ಲೇಸ್‌ಮೆಂಟ್‌ ಕೂಡ ಕಷ್ಟವಾಗಿ ಬ್ಯಾಟ್ಸ್‌ಮನ್‌ ಗಳು ಈಸಿ ಸ್ಟ್ರೋಕ್‌ಗಳಿಗೆ ಅವಕಾಶ ಮಾಡಿಕೊಟ್ಟರು.. ಇದೊಂದು ರೀತಿಯಲ್ಲಿ ಪವರ್‌ ಪ್ಲೇ ಟೈಂನ ಆಟದಂತೆ ಕಡೆಯ ಎರಡು ಓವರ್‌ ಪರಿವರ್ತನೆಯಾಗಿತ್ತು.. ಇಲ್ಲೇ ಇದ್ದದ್ದೂ ಸಂಜು ಸ್ಯಾಮ್ಸನ್‌ ಅವರ ನಾಯಕತ್ವಕ್ಕೆ ಸವಾಲು.. ಡೆತ್‌ ಓವರ್‌ ಸ್ಪೆಷಲಿಸ್ಟ್‌ ಆವೇಶ್‌ ಖಾನ್‌ ಜೊತೆಗೆ ಯಾರ ಕೈಗೆ ಬಾಲ್‌ ನೀಡಬೇಕು ಎನ್ನುವ ಬಗ್ಗೆ ಯೋಚಿಸಬೇಕಿತ್ತು.. ಅದುವರೆಗೆ ಚೆನ್ನಾಗಿಯೇ ಬೌಲಿಂಗ್‌ ಮಾಡಿದ್ದ ಕುಲ್ದೀಪ್‌ ಸೆನ್‌ ಗೆ ಬಾಲ್‌ ನೀಡಬೇಕೋ ಅಥವಾ ಮೊದಲ ಓಪನಿಂಗ್‌ ಬೌಲರ್‌ ಟ್ರೆಂಟ್‌ ಬೌಲ್ಟ್‌ ಕೈಗೆ ಬಾಲ್‌ ಕೊಡಬೇಕಿತ್ತೋ ಎನ್ನುವ ಆಯ್ಕೆಯನ್ನು ಸ್ಮಾರ್ಟ್‌ ಆಗಿಯೇ ಸ್ಯಾಮ್ಸನ್‌ ಮಾಡಬಹುದಿತ್ತು.. ಟ್ರೆಂಟ್‌ ಬೌಲ್ಟ್‌ ಡೆತ್‌ ಓವರ್‌ಗಳಲ್ಲಿ ಚೆನ್ನಾಗಿ ಬೌಲಿಂಗ್‌ ರೆಕಾರ್ಡ್‌ ಹೊಂದಿಲ್ಲ ಎನ್ನುವುದು ನಿಜ.. ಆದರೆ ಕಡೆಯ ಓವರ್‌ಗಳಲ್ಲಿ ಲೈನ್‌ ಅಂಡ್‌ ಲೆಂಗ್ತ್‌ ತುಂಬಾನೇ ಇಂಪಾರ್ಟೆಂಟ್‌.. ಅಲ್ಲದೆ ಜಿಟಿ ವಿರುದ್ಧ ಬೌಲ್ಟ್‌ ಸಿಕ್ಕಾಪಟ್ಟೆ ಚೆನ್ನಾಗಿಯೇ ಬೌಲಿಂಗ್‌ ಮಾಡಿದ್ದರು.. ವಿಕೆಟ್‌ ಪಡೆಯದಿದ್ದರೂ ಎರಡು ಓವರ್‌ಗಳಲ್ಲಿ ಅವರು ಕೊಟ್ಟಿದ್ದು ಕೇವಲ 8 ರನ್‌ ಮಾತ್ರ ಕೊಟ್ಟಿದ್ದರು.. ಕುಲ್ದೀಪ್‌ ಸೆನ್‌ 3 ಓವರ್‌ಗಳಲ್ಲಿ 22 ರನ್‌ ಕೊಟ್ಟು 3 ವಿಕೆಟ್‌ ಕಿತ್ತಿದ್ದರು..  ಆದ್ರೆ ಕುಲ್ದೀಪ್‌ ಸೆನ್‌ಗಿಂತ ಹೆಚ್ಚು ಎಕ್ಸ್‌ಪೀರಿಯನ್ಸ್‌ ಮತ್ತು ವೇರಿಯೇಷನ್‌ ಜೊತೆಗೆ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಕಠಿಣ ಮನಸ್ಥಿತಿ ಟ್ರೆಂಟ್‌ ಬೌಲ್ಟ್‌ಗಿತ್ತು.. 19 ನೇ ಓವರ್‌ ಟ್ರೆಂಟ್‌ ಬೌಲ್ಟ್‌ಗೆ ಕೊಟ್ಟಿದ್ದರೆ ಬೌಲಿಂಗ್‌ ಆಲ್‌ರೌಂಡರ್‌ಗಳಾದ ತೆವಾಟಿಯಾ ಮತ್ತು ರಶೀದ್‌ ಖಾನ್‌ರನ್ನು ಕಟ್ಟಿಹಾಕುವ ಎಲ್ಲಾ ಅವಕಾಶ ಆರ್​ಆರ್‌ಗಿತ್ತು.. ನೋಡಿ.. 9 ಎಸೆತಗಳಲ್ಲಿ 29 ರನ್‌ ಎನ್ನುವವರೆಗೂ ಪಂದ್ಯ ಆರ್‌ ಆರ್‌ ಕಡೆಗೇ ಇತ್ತು.. ಆದ್ರೆ ಆಗ 9ನೇ ಎಸೆತದಲ್ಲಿ ಬೌಂಡರಿಯ ಜೊತೆಗೆ ನೋ ಬಾಲ್‌ ಹಾಗೂ ಫ್ರೀ ಹಿಟ್‌ ಸಿಕ್ಕಿದ್ದರಿಂದ ಸ್ಕೋರ್ 8 ಎಸೆತದಲ್ಲಿ 22 ರನ್‌ಗೆ ಬಂದು ನಿಂತಿತ್ತು.. ಅಲ್ಲಿಂದ ನಂತರ ಮ್ಯಾಚ್‌ ಫಿನಿಷ್‌ ಮಾಡುವುದು ಜಿಟಿಗೂ ಸಲೀಸಾಯಿತು.. ಒಂದು ವೇಳೆ ಬೌಲ್ಟ್‌ಗೆ ಬೌಲಿಂಗ್‌ ಕೊಟ್ಟಿರುತ್ತಿದ್ದರೆ ಕಡೆಯ ಓವರ್‌ನಲ್ಲಿ ಜಿಟಿಗೆ ಕನಿಷ್ಟ 20ಕ್ಕಿಂತ ಹೆಚ್ಚು ರನ್‌ ಗಳಿಸಬೇಕಾದ ಒತ್ತಡ ಇರುತ್ತಿತ್ತು.. ಆದ್ರೆ ಕ್ಯಾಪ್ಟನ್‌ ಸಂಜು ಸ್ಯಾಮ್ಸನ್‌ ಮಾಡಿದ ಇಂತಹ ಎಡವಟ್ಟು ಪಂದ್ಯ ಗೆಲ್ಲುವ ಅವಕಾಶವನ್ನು ಆರ್‌ ಆರ್‌ ಕಳೆದುಕೊಂಡಿದೆ.. ಈ ಬಾರಿ ಬ್ಯಾಟಿಂಗ್‌ , ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಸ್ಥಿತಿಯಲ್ಲಿರುವ ಆರ್‌ ಆರ್‌ ತಂಡ ಒತ್ತಡದಲ್ಲಿ ಪಂದ್ಯವನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದರ ಮೇಲೆಯೇ ಅದರ ಐಪಿಎಲ್‌ ಭವಿಷ್ಯ ನಿಂತಿದೆ..

Sulekha