ಗುಜರಾತ್ ಟೈಟನ್ಸ್ vs ಆರ್ಸಿಬಿ ಹೈವೋಲ್ಟೇಜ್ ಪಂದ್ಯ – ನಮ್ಮ ಮೆಟ್ರೋ ಅವಧಿ ವಿಸ್ತರಣೆ!
ಗುಜರಾತ್ ಟೈಟನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹಣಾಹಣಿಗೆ ಕೌಂಟ್ಡೌನ್ ಶುರುವಾಗಿದೆ. ತವರಿನಂಗಳದಲ್ಲಿ ಗೆದ್ದು ಬೀಗೋ ಲೆಕ್ಕಾಚಾರದಲ್ಲಿ ಆರ್ಸಿಬಿ ಇದ್ರೆ, ಸೋಲಿನ ಸೇಡು ತೀರಿಸಿಕೊಳ್ಳೋ ಲೆಕ್ಕಾಚಾರದಲ್ಲಿ ಗುಜರಾತ್ ತಂಡವಿದೆ. ಉಭಯ ತಂಡಗಳ ಕಾದಾಟ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹೆಚ್ಚಿಸಿದೆ. ಇದೀಗ ಪಂದ್ಯ ವೀಕ್ಷಿಸಲು ಸ್ಟೇಡಿಯಂ ಗೆ ತೆರಳುತ್ತಿರುವ ಅಭಿಮಾನಿಗಳಿಗೆ ಗುಡ್ನ್ಯೂಸ್ ಇದೆ. ಶನಿವಾರ ಬಿಎಂಆರ್ಸಿಎಲ್ ಮೆಟ್ರೋ ಅವಧಿಯನ್ನು ವಿಸ್ತರಣೆ ಮಾಡಿದೆ.
ಇದನ್ನೂ ಓದಿ: ದೇಶ ಬಿಟ್ಟು ಹೋಗಲು ಸಜ್ಜಾದ್ರಾ ಹೆಚ್.ಡಿ ರೇವಣ್ಣ? – ಲುಕ್ಔಟ್ ನೋಟಿಸ್ ಜಾರಿ ಮಾಡಿದ ಎಸ್ಐಟಿ!
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಗುಜರಾತ್ ಟೈಟನ್ಸ್ vs ರಾಯಲ್ ಚಾಲೆಂಜರ್ಸ್ ತಂಡದ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬಿಎಂಆರ್ಸಿಎಲ್ ಮೆಟ್ರೋ ಅವಧಿ ವಿಸ್ತರಣೆ ಮಾಡಿದೆ. ಐಪಿಎಲ್ ಪಂದ್ಯಗಳು ನಡೆಯುವ ದಿನ ರಾತ್ರಿ 11.30 ರವರೆಗೆ ಮೆಟ್ರೋ ಸೇವೆ ಲಭ್ಯವಾಗಿರಲಿದೆ ಎಂದು ಮೆಟ್ರೋ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಮೇ 12 ಮತ್ತು 18 ರಂದು ಪಂದ್ಯಾವಳಿಗಳು ನಡೆಯಲಿವೆ. ಆ ದಿನಗಳಂದು ಕೂಡ ಮೆಟ್ರೋ ವಿಸ್ತರಣೆ ಮಾಡಲಾಗಿದೆ. ನಾಲ್ಕು ಟರ್ಮಿನಲ್ ನಿಲ್ದಾಣದಿಂದ ಸೇವೆ ವಿಸ್ತರಿಸಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಮೆಟ್ರೋ ಸೇವೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಿಗದಿತ ದಿನಾಂಕದಲ್ಲಿ ನಡೆಯುವ ಪಂದ್ಯಗಳಿಗೆ ಬರುವ ರಿಟರ್ನ್ ಜರ್ನಿ ಪೇಪರ್ ಟಿಕೆಟ್ಗಳು ರೂ. 50, ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯ ಇರುತ್ತವೆ. ಈ ಟಿಕೆಟ್ಗಳು ಮಧ್ಯಾಹ್ನ 2 ಗಂಟೆಯಿಂದ ಮಾರಾಟಕ್ಕೆ ಲಭ್ಯವಿರುತ್ತದೆ. ರಾತ್ರಿ 8ರ ನಂತರ ದಿನದ ಸೇವೆ ಕೊನೆಗೊಳ್ಳುವವರಿಗೆ ಮಾತ್ರ ರಿಟರ್ನ್ ಟಿಕೆಟ್ ಬಳಸಬಹುದು. QR ಕೋಡ್ ಟಿಕೆಟ್ಗಳು, ಸ್ಮಾರ್ಟ್ ಕಾರ್ಡ್ಗಳು ಮತ್ತು NCMC ಕಾರ್ಡ್ಗಳನ್ನು ಸಹ ಎಂದಿನಂತೆ ಪ್ರಯಾಣಿಕರು ಬಳಸಬಳಸಬಹುದಾಗಿದೆ.
ವಾಟ್ಸ್ ಆಪ್/ನಮ್ಮ ಮೆಟ್ರೋ ಆ್ಯಪ್/ಪೇ ಟಿಎಂ ಮೂಲಕ ಜಗಳ ಮುಕ್ತ ವಾಪಸಾತಿ ಪ್ರಯಾಣಕ್ಕಾಗಿ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ QR ಟಿಕೆಟ್ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.