ಗಿಲ್ ನಾಯಕತ್ವದಲ್ಲಿ ಅಬ್ಬರಿಸುತ್ತಾ ಗುಜರಾತ್ ಟೈಟಾನ್ಸ್? – ಶಮಿ ಅನುಪಸ್ಥಿತಿ ತಂಡಕ್ಕೆ ಹೊಡೆತ ನೀಡುತ್ತಾ?

ಗಿಲ್ ನಾಯಕತ್ವದಲ್ಲಿ ಅಬ್ಬರಿಸುತ್ತಾ ಗುಜರಾತ್ ಟೈಟಾನ್ಸ್? – ಶಮಿ ಅನುಪಸ್ಥಿತಿ ತಂಡಕ್ಕೆ ಹೊಡೆತ ನೀಡುತ್ತಾ?

ಗುಜರಾತ್ ಟೈಟಾನ್ಸ್ ಗೂ ಕೂಡಾ ಈ ಸೀಸನ್‌ ಆರಂಭಕ್ಕೂ ಮೊದ್ಲೇ ಆಘಾತ ಎದುರಾಗಿದೆ. ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅನುಪಸ್ಥಿತಿ ಜಿಟಿಗೆ ಎದುರಾಗಿದೆ. ಹೀಗಾಗಿ ಶಮಿ ಬದಲಿಗೆ ವೇಗದ ಬೌಲರ್ ಸಂದೀಪ್ ವಾರಿಯರ್ ಅವರನ್ನು ಜಿಟಿ ಸೆಲೆಕ್ಟ್ ಮಾಡಿಕೊಂಡಿದೆ.

ಇದನ್ನೂ ಓದಿ: KKR ವಿರುದ್ಧ ಮೊದಲ ಪಂದ್ಯಕ್ಕೆ ಆರೆಂಜ್ ಆರ್ಮಿ ರೆಡಿ – SRH ಟೀಮ್‌ನ ಶಕ್ತಿಯಾರು?

ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಬದಲಿಗೆ ಸಂದೀಪ್ ವಾರಿಯರ್ ಜಿಟಿ ಟೀಮ್ ಗೆ ಸೇರ್ಪಡೆಗೊಂಡಿದ್ದಾರೆ. ಸಂದೀಪ್ 2019 ರಲ್ಲಿ ಐಪಿಎಲ್ ಗೆ ಎಂಟ್ರಿ ಪಡೆದಿದ್ದರು. ಆದ್ರೆ, ಆಡಿದ್ದು ಮಾತ್ರ ಕೇವಲ 5 ಪಂದ್ಯಗಳು ಮಾತ್ರ. ಸಂದೀಪ್ ಆಗ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಜಿಟಿ ಇವರಿಗೆ ಮಣೆ ಹಾಕಿದೆ. ಜಿಟಿ ಸಾರಥ್ಯವಹಿಸಿಕೊಂಡಿರೋದು ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್. ಬ್ಯಾಟಿಂಗ್ ಮೂಲಕ ಫ್ಯಾನ್ಸ್ ದಿಲ್ ಗೆದ್ದಿರುವ ಗಿಲ್ ಕ್ಯಾಪ್ಟನ್ ಆಗಿ ಟೀಮ್‌ನ ಹೇಗೆ ಲೀಡ್ ಮಾಡ್ತಾರೆ ಅನ್ನೋದು ಕೂಡಾ ಚಾಲೆಂಜಿಂಗ್ ಆಗಿದೆ. ಕನ್ನಡಿಗ ಬಿಆರ್ ಶರತ್ ಗುಜರಾತ್ ತಂಡಕ್ಕೆ ಸೇರಿಕೊಂಡಿದ್ದಾರೆ. ಪಾಂಡ್ಯಾ ಜಿಟಿಯಿಂದ ಹೋದ್ರೂ ಕೇನ್‌ ವಿಲಿಯಮ್ಸನ್ ಎಂಟ್ರಿಯೇ ಜಿಟಿಗೆ ಆನೆಬಲ ತುಂಬಿದೆ.. ಜೊತೆಗೆ ರಷೀದ್‌ ಖಾನ್ ಸಿಡಿದ್ರೆ ಎದುರಾಳಿ ಯಾರು ಎನ್ನುವುದನ್ನು ಜಿಟಿ ಲೆಕ್ಕಕ್ಕೆ ಇಟ್ಟುಕೊಳ್ಳುವ ಸಾಧ್ಯತೆ ಕಡಿಮೆ..

 

Sulekha