GT ಏಟಿಗೆ SRH ಶೇಪ್ ಔಟ್ – ಗುಜರಾತ್ ಪ್ಲೇ ಆಫ್ಸ್ ಪಕ್ಕನಾ?
ಬ್ಯಾಟಿಂಗ್ ಕಿಕ್ ಕಳ್ಕೊಂಡ ಹೈದ್ರಾಬಾದ್

ಗುಜರಾತ್ ಟೈಟಾನ್ಸ್.. ಟಾಪ್ ಆಫ್ ದಿ ಟೇಬಲ್.. ಫಸ್ಟ್ ಆಫ್ನಲ್ಲಿ ಹಾವು ಏಣಿಯಂತೆ ಇದ್ದ ಗುಜರಾತ್ ಈಗ ಅನ್ ಸ್ಟಾಪಬಲ್ ಟೀಂ ಆಗಿ ಮುನ್ನುಗ್ತಿದೆ. ಸತತ ಐದು ಪಂದ್ಯಗಳನ್ನ ಗೆದ್ದು ಈಗ ನಂಬರ್ 1 ಪಟ್ಟಕ್ಕೇರಿದ್ದಾರೆ. ಮತ್ತೊಂದೆಡೆ ಈ ಸೀಸನ್ನಲ್ಲಿ 300 ರನ್ಸ್ ನಮ್ಮ ಟಾರ್ಗೆಟ್ ಅಂದಿದ್ದ ಹೈದ್ರಾಬಾದ್ ಹೀನಾಯವಾಗಿ ಸೋತಿದೆ. ಒಂದ್ಕಡೆ ಗುಜರಾತ್ ಸೇಫ್ ಜೋನ್ನಲ್ಲಿದ್ರೆ ಹೈದ್ರಾಬಾದ್ ಪ್ರೆಶರ್ನಲ್ಲಿದೆ.
ಇದನ್ನೂ ಓದಿ : RCB Vs KKR ನಡುವೆ ಇಂದು ಹೈವೋಲ್ಟೇಜ್ ಮ್ಯಾಚ್ – ಪ್ಲೇ ಆಫ್ಸ್ ರೇಸ್ ಬ್ಯಾಟಲ್ ಗೆಲ್ಲೋದ್ಯಾರು?
ಬ್ಯಾಟಿಂಗ್ನಲ್ಲಿ ಬೊಂಬಾಟ್.. ಬೌಲಿಂಗ್ನಲ್ಲಿ ಸೂಪರ್.. ಗುಜರಾತ್ ಟೈಟಾನ್ಸ್ ಸದ್ಯ ಈ ಸೀಸನ್ನ ಮೋಸ್ಟ್ ಡೇಂಜರಸ್ ಟೀಂ ಆಗಿ ಕಾಣ್ತಿದೆ. ಮೊಹಮ್ಮದ್ ಸಿರಾಜ್ ಸಿಡಿಲು, ಕಗಿಸೋ ರಬಾಡಾ ಕಿಚ್ಚು ಎದುರಾಳಿ ಬ್ಯಾಟರ್ಗಳನ್ನ ಧೂಳೀಪಟ ಮಾಡ್ತಿದ್ದಾರೆ. ಅದ್ರಲ್ಲೂ ಬಲಿಷ್ಠ ಬ್ಯಾಟಿಂಗ್ ಲೈನಪ್ನೇ ಹೊಂದಿರೋ ಹೈದ್ರಾಬಾದ್ನ ಬೆನ್ನು ಮುರಿದು ಜಿಟಿ ನಂಬರ್ 1 ಪಟ್ಟಕ್ಕೇರಿದೆ. ಅಹಮದಾಬಾದ್ನಲ್ಲಿ ನಡೆದ ಜಿಟಿ ವರ್ಸಸ್ ಎಸ್ಆರ್ಹೆಚ್ ನಡುವಿನ ಮ್ಯಾಚಲ್ಲಿ ಟಾಸ್ ಸೋತ ಗುಜರಾತ್ ಫಸ್ಟ್ ಬ್ಯಾಟಿಂಗ್ ಮಾಡಿತು. ಗಿಲ್ ಮತ್ತು ಬಟ್ಲರ್ ಸಿಂಗಲ್ ಡಿಜಿಟ್ಗೆ ಔಟ್ ಆದ್ರೂ ಕುಡ ಸಾಯಿ ಸುದರ್ಶನ್ 61 ರನ್ಗಳ ಇನ್ನಿಂಗ್ಸ್ ಆಡಿದ್ರು. ಌಂಡ್ ವಾಷಿಂಗ್ಟನ್ ಸುಂದರ್ ಅರ್ಧಶತಕದ ನೆರವಿನಿಂದ 168 ರನ್ಗಳನ್ನ ಕಲೆ ಹಾಕಿತು. ಟಾರ್ಗೆಟ್ ಬೆನ್ನತ್ತಿದ ಹೈದ್ರಾಬಾದ್ ಎಲ್ಲಿಯೂ ಕೂಡ ಫೈಟ್ ಕೊಡಲೇಇಲ್ಲ. ಪ್ಯಾಟ್ ಕಮಿನ್ಸ್ 19 ರನ್ ಗಳಿಸಿದ್ದೇ ಹೈಯೆಸ್ಟ್ ಇಂಡಿವಿಶ್ಯುಯಲ್ ಸ್ಕೋರ್. ಈ ಮೂಲಕ 14.5 ಓವರ್ಗಳಲ್ಲೇ 86ಕ್ಕೆ ಹೈದ್ರಾಬಾದ್ ಆಲೌಟ್ ಆಯ್ತು. 82 ರನ್ಗಳ ಬಿಗ್ ಮಾರ್ಜಿನ್ನಿಂದ ಗುಜರಾತ್ ಗೆದ್ದು ಬೀಗಿತು. ಹಾಗೇ ಪಾಯಿಂಟ್ಸ್ ಪಟ್ಟಿಯಲ್ಲಿ ಟ್ವಿಸ್ಟ್ ಕೂಡ ಸಿಕ್ಕಿದೆ.
16 ಅಂಕಗಳೊಂದಿಗೆ ಸೇಫ್ ಝೋನ್ ನಲ್ಲಿದೆ ಗುಜರಾತ್!
ಗುಜರಾತ್ ಈಗ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1ಪಟ್ಟಕ್ಕೇರಿದೆ. ಪಂಜಾಬ್, ಬೆಂಗಳೂರು ಹಾಗೇ ಹೈದ್ರಾಬಾದ್ ಬಳಿಕ ನಂಬರ್ 1 ಸ್ಥಾನಕ್ಕೇರಿದೆ. ಪ್ಲೇ ಆಫ್ಸ್ ಲೆಕ್ಕಾಚಾರ ಅಂತಾ ಬಂದಾಗ 16 ನಂಬರ್ ಸೇಫ್ ಜೋನ್. ಇಷ್ಟು ವರ್ಷಗಳ ಆವೃತ್ತಿಗಳಲ್ಲಿ 16 ಅಂಕ ಪಡೆದ ಯಾವುದೇ ಟೀಂ ಪ್ಲೇ ಆಫ್ಸ್ ಮಿಸ್ ಮಾಡ್ಕೊಂಡಿಲ್ಲ. ಈ ಸಲ 7 ತಂಡಗಳ ನಡುವೆ ರೇಸ್ ಇರೋದ್ರಿಂದ ಹೇಳೋಕ್ಕಾಗಲ್ಲ. ಹೀಗಿದ್ರೂ ಗುಜರಾತ್ಗೆ ಇನ್ನೂ ಎರಡು ಮ್ಯಾಚ್ ಬಾಕಿ ಇದ್ದು ಅದ್ರಲ್ಲಿ ಒಂದು ಪಂದ್ಯ ಗೆದ್ರೂ ಕೂಡ ಸೀದಾ ಪ್ಲೇಆಫ್ಗೆ ಕ್ವಾಲಿಫೈ ಆಗ್ತಾರೆ. ಅತ್ತ ಹೈದ್ರಾಬಾದ್ ತಂಡಕ್ಕೆ ಇನ್ನೆರಡು ಮ್ಯಾಚ್ ಇದ್ದು ಮುಂದಿನ ಪಂದ್ಯಗಳಿಗೆ ಪ್ರೆಶರ್ ಅಂತೂ ಇದ್ದೇ ಇದೆ. ಬಟ್ ಬ್ಯಾಟಿಂಗ್ ಫೇಲ್ಯೂರ್ ಆಗಿರೋದನ್ನ ನೆಕ್ಸ್ಟ್ ಹೇಗೆ ಕಂ ಬ್ಯಾಕ್ ಮಾಡ್ತಾರೆ ಅನ್ನೋದು ಕೂಡ ಮುಖ್ಯ.

ನೋಡಿರಿ

