ತವರಿನಲ್ಲೇ ಗುಜರಾತ್‌ ಟೈಟಾನ್ಸ್‌ಗೆ ಹೀನಾಯ ಸೋಲು –  ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್‌ಗಳಿಂದ ಭರ್ಜರಿ ಜಯ

ತವರಿನಲ್ಲೇ ಗುಜರಾತ್‌ ಟೈಟಾನ್ಸ್‌ಗೆ ಹೀನಾಯ ಸೋಲು –  ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್‌ಗಳಿಂದ ಭರ್ಜರಿ ಜಯ

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 6 ವಿಕೆಟ್‌ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 9ನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ -0.074 ನೆಟ್‌ ರನ್‌ರೇಟ್‌ ಮತ್ತು 6 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಜಿಗಿದಿದೆ.

ಇದನ್ನೂ ಓದಿ: ಬಾಹುಬಲಿ ಬಟ್ಲರ್.. ಸೋತ ಕೆಕೆಆರ್! – ಐಪಿಎಲ್ ಗೆಲ್ಲೋದು ಇವ್ರೇನಾ?

ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ ಆವೃತ್ತಿಯ 32ನೇ ಪಂದ್ಯದಲ್ಲಿ  ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 17. 3 ಓವರ್ ಗಳಲ್ಲಿ 89 ರನ್ ಗಳಿಗೆ ಆಲೌಟ್ ಆಯಿತು. ಇದು ಈ ಬಾರಿಯ ಐಪಿಎಲ್ ನಲ್ಲಿ ದಾಖಲಾದ ಕನಿಷ್ಠ ರನ್ ಗಳಿಕೆಯಾಗಿದೆ. ಗುಜರಾತ್ ಪರ ರಶೀದ್ ಖಾನ್ 31, ಸಾಯಿ ಸುದರ್ಶನ್ 12 ರನ್ ಗಳಿಸಿದದ್ದು ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು ಎರಡಂಕಿ ದಾಟಲಿಲ್ಲ. ಡೆಲ್ಲಿ ಪರ ಮುಕೇಶ್ 14ಕ್ಕೆ 3 ಮತ್ತು ಇಶಾಂತ್ 8ಕ್ಕೆ 2 ವಿಕೆಟ್ ಪಡೆದರು.

ಗುಜರಾತ್ ಟೈಟನ್ಸ್ ನೀಡಿದ 89 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ 7, ಜಾಕ್ ಫ್ರಾಸರ್ ಮ್ಯಾಕ್ ಗುರ್ಕ್ 20, ಅಭಿಷೇಕ್ ಪೊರೆಲ್ 15, ಸಾಯಿ ಹೊಪ್ 19, ನಾಯಕ ರಿಷಭ್ ಪಂತ್ ಔಟಾಗದೇ 16, ಸುಮಿತ್ ಕುಮಾರ್ ಔಟಾಗದೇ 9 ರನ್ ಗಳಿಸಿದರು. ಇದರಿಂದಾಗಿ 4 ವಿಕೆಟ್ ನಷ್ಟಕ್ಕೆ 92 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ರಿಷಭ್ ಪಂತ್ ಫ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

Shwetha M