ಕೋಲ್ಕತ್ತಾ ವಿರುದ್ಧ ಗುಜರಾತ್‌ಗೆ  39 ರನ್‌ಗಳ ಭರ್ಜರಿ ಜಯ

ಕೋಲ್ಕತ್ತಾ ವಿರುದ್ಧ ಗುಜರಾತ್‌ಗೆ  39 ರನ್‌ಗಳ ಭರ್ಜರಿ ಜಯ

ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವೆ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ  ಗುಜರಾತ್ ಟೈಟನ್ಸ್ 39 ರನ್‌ಗಳ ಭರ್ಜರಿ ಜಯ ಗಳಿಸಿದೆ. ಓಪನರ್​ ಬ್ಯಾಟರ್​ಗಳಾದ ಸಾಯಿ ಸುದರ್ಶನ್ ಹಾಗೂ ಶುಭ್​ಮನ್​ ಗಿಲ್​ ಅವರ ಅಮೋಘ ಅರ್ಧಶತಕದ ನೆರವಿನಿಂದ ಗುಜರಾತ್ ಗೆಲುವನ್ನು ಮುಂದುವರೆಸಿದೆ.

ಇದನ್ನೂ ಓದಿ: ಸೋತ ಟೀಂ ಕಿಚಾಯಿಸಿದ್ರಾ ಕೊಹ್ಲಿ? – ಮೈದಾನದಲ್ಲಿ ಗೇಲಿ.. ಆಮೇಲೆ ಫುಲ್ ಜಾಲಿ!

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್, ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ಪೇರಿಸಿತು. ಟೈಟನ್ಸ್‌ ನೀಡಿದ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿ ಸೋಲಿಗೆ ಶರಣಾಯಿತು.

ಕೋಲ್ಕತ್ತಾ ಪರ ಅಜಿಂಕ್ಯ ರಹಾನೆ 36 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ ನೆರವಿಂದ 50 ರನ್‌, ಆಂಡ್ರೆ ರಸೆಲ್ 15 ಎಸೆತಗಳಲ್ಲಿ 1 ಸಿಕ್ಸರ್‌, 3 ಬೌಂಡರಿ ನೆರವಿಂದ 21 ರನ್‌, ಸುನಿಲ್ ನರೈನ್ 13 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್‌ ನೆರವಿಂದ 17 ರನ್‌ ಗಳಿಸಿದರು. ಅಂಗ್‌ಕ್ರಿಶ್ ರಘುವಂಶಿ 13 ಎಸೆತಗಳಲ್ಲಿ 27 ರನ್‌ ಕಲೆಹಾಕಿ ಔಟಾಗದೆ ಉಳಿದರು.

ಗುಜರಾತ್ ಪರ ಮೊಹಮ್ಮದ್ ಸಿರಾಜ್, ರಶೀದ್ ಖಾನ್, ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್‌, ವಾಷಿಂಗ್ಟನ್ ಸುಂದರ್, ಸಾಯಿ ಕಿಶೋರ್, ಇಶಾಂತ್ ಶರ್ಮಾ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ಗುಜರಾತ್ ಪರ ಶುಭಮನ್ ಗಿಲ್‌ 55 ಎಸೆತಗಳಲ್ಲಿ 3 ಸಿಕ್ಸರ್‌, 10 ಬೌಂಡರಿಗಳ ನೆರವಿನಿಂದ 90 ರನ್ ಗಳಿಸಿ ಮಿಂಚಿದರು. ಸಾಯಿ ಸುದರ್ಶನ್ 36 ಎಸೆತಗಳಲ್ಲಿ 52 ರನ್ ಕಲೆಹಾಕಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಟ್ಲರ್ 23 ಎಸೆತಗಳಲ್ಲಿ 41 ರನ್ ಕಲೆ ಹಾಕಿ ಔಟಾಗದೆ ಉಳಿದರು. ಕೊಲ್ಕತ್ತಾ ಪರ ಹರ್ಷಿತ್ ರಾಣಾ, ವೈಭವ್ ಅರೋರಾ ಹಾಗೂ ರಸೆಲ್‌ ತಲಾ ಒಂದು ವಿಕೆಟ್ ಉರುಳಿಸಿದರು.

Shwetha M

Leave a Reply

Your email address will not be published. Required fields are marked *