ಆರ್‌ಸಿಬಿಗೆ ಗುಜರಾತ್ ಟೈಟಾನ್ಸ್ ಸವಾಲ್ – ಬೆಂಗಳೂರಿನಲ್ಲಿ ಮಳೆ ಬಂದರೂ ಮ್ಯಾಚ್‌ಗೆ ತೊಂದರೆಯಾಗಲ್ಲ..!

ಆರ್‌ಸಿಬಿಗೆ ಗುಜರಾತ್ ಟೈಟಾನ್ಸ್ ಸವಾಲ್ – ಬೆಂಗಳೂರಿನಲ್ಲಿ ಮಳೆ ಬಂದರೂ ಮ್ಯಾಚ್‌ಗೆ ತೊಂದರೆಯಾಗಲ್ಲ..!

ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ ಕಣಕ್ಕಿಳಿಯಲಿದೆ. ಬೆಂಗಳೂರಲ್ಲೇ ಮ್ಯಾಚ್ ನಡೆಯೋದ್ರಿಂದ ಕಿಂಗ್ ಕೊಹ್ಲಿಯ ಬ್ಯಾಟ್‌ನಲ್ಲಿ ಗುಡುಗು ಸಿಡಿಲಿನ ಆರ್ಭಟ ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ. ಪ್ಲೇಆಫ್ ರೇಸ್​ನಲ್ಲಿ ಉಳಿದುಕೊಳ್ಳಬೇಕಿದ್ದರೆ ಆರ್​ಸಿಬಿ ತಂಡ ಇಂದಿನ ಪಂದ್ಯ ಗೆಲ್ಲಲೇಬೇಕು. ಅಂಕ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಆರ್‌ಸಿಬಿಗೆ ವಿಕೆ, ಡಿಕೆ ಗೆಲುವಿನ ಟಾನಿಕ್ ಕೊಡ್ತಾರೆ ಅಂತಾ ಕಾಯ್ತಿದ್ದಾರೆ ಫ್ಯಾನ್ಸ್. ಒಂದು ವೇಳೆ ಇಂದು ಜಿಟಿ ಎದುರು ಆರ್‌ಸಿಬಿ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾದರೆ ಪಾಯಿಂಟ್ಸ್ ಟೇಬಲ್​ನಲ್ಲಿ 7ನೇ ಅಥವಾ 8ನೇ ಸ್ಥಾನಕ್ಕೇರಲಿದೆ. ಅಂಕ ಪಟ್ಟಿಯಲ್ಲಿನ ಜಿಗಿತ ಕಂಡರೆ, ಪ್ಲೇಆಫ್ ರೇಸ್ ಕನಸು ನನಸಾಗೋದು ಚಾನ್ಸಸ್ ಇದೆ.

ಇದನ್ನೂ ಓದಿ: RCB Vs GT.. ವಿರಾಟ್ ಶಪಥವೇನು? – ಕೊಹ್ಲಿ ಚಿನ್ನಸ್ವಾಮಿ KINGDOM ಹೇಗಿದೆ?

ಆರ್‌ಸಿಬಿ ಎದುರು ಸೋತು ಸುಣ್ಣವಾಗಿದ್ದ ಗುಜರಾತ್ ಟೈಟಾನ್ಸ್ ಸೇಡು ತೀರಿಸಿಕೊಳ್ಳಲು ಕಾಯ್ತಿದೆ. ತನ್ನ ತವರಿನಲ್ಲಿ ಆರ್‌ಸಿಬಿಗೆ ಶರಣಾಗಿದ್ದ ಗುಜರಾತ್‌, ಈಗ ಆರ್‌ಸಿಬಿಗೆ ಅವರದೇ ತವರಲ್ಲಿ ಸೋಲುಣಿಸಲು ಸ್ಟ್ಯಾಟಜಿ ವರ್ಕೌಟ್ ಮಾಡ್ತಿದೆ. ಜಿಟಿ ಟೀಮ್‌ನಲ್ಲಿ ಬ್ಯಾಟಿಂಗ್ ಚೆನ್ನಾಗಿದ್ರೆ ಬೌಲಿಂಗ್ ಫೇಲ್ ಆಗ್ತಿದೆ. ಶುಭ್‌ಮನ್‌ ಗಿಲ್‌ ಫ್ಯಾನ್ಸ್ ದಿಲ್ ಗೆಲ್ಲಲು ಎಡವುತ್ತಿದ್ದಾರೆ. ಸಾಯಿ ಸುದರ್ಶನ್‌, ಸಾಯಿ ಕಿಶೋರ್‌, ರಶೀದ್‌ ಖಾನ್‌ ಮೇಲೆ ತಂಡ ಡಿಪೆಂಡ್ ಆಗಿದೆ.

ಇನ್ನು ಆರ್​ಸಿಬಿ ಪಂದ್ಯವನ್ನು ಯಾವ ರೀತಿ ಬೇಕಾದ್ರೂ ಟರ್ನ್ ಮಾಡಬಲ್ಲ ಮತ್ತೊಬ್ಬ ಆಟಗಾರನೆಂದರೆ ಮೊಹಮ್ಮದ್ ಸಿರಾಜ್​. ಆರ್​ಸಿಬಿ ಸಂಕಷ್ಟದಲ್ಲಿದ್ದಾಗಲೆಲ್ಲಾ ತಂಡದ ಕೈ ಹಿಡಿದಿವರಲ್ಲಿ ಕೊಹ್ಲಿ ಬಿಟ್ರೆ ಮತ್ತೊಬ್ಬ ಆಟಗಾರ ಸಿರಾಜ್. ಸಿಡಿಗುಂಡಿನಂತೆ ಎದುರಾಳಿಯ ಮೇಲೆ ಎರಗುತ್ತಿದ್ದ ಸಿರಾಜ್, ಆರ್​ಸಿಬಿ ಬೌಲಿಂಗ್ ನ ಪ್ರಮುಖ ಅಸ್ತ್ರವಾಗಿದ್ರು. ಪ್ರಸಕ್ತ ಸೀಸನ್​​ನಲ್ಲಿ ನೀಡ್ತಿರುವ ಪರ್ಫಾಮೆನ್ಸ್​ ಮಾತ್ರ ಪವರ್ ಲೆಸ್ ಆಗಿದೆ. ಪವರ್ ಪ್ಲೇ, ಡೆತ್​ ಓವರ್​ಗಳಲ್ಲಿ ದಾರಾಳವಾಗಿ ರನ್ ನೀಡ್ತಿದ್ದಾರೆ. ಜಿಟಿ ವಿರುದ್ಧವಾದರೂ ಸಿರಾಜ್ ವಿಕೆಟ್ ಬೇಟೆಯಾಡುತ್ತಾರಾ ಅಂತಾ ಕಾಯ್ತಿದ್ದಾರೆ ಫ್ಯಾನ್ಸ್.

ಮತ್ತೊಂದೆಡೆ ಬೆಂಗಳೂರಲ್ಲಿ ಮಳೆಯ ವಾತವಾರಣ ಇದ್ದು, ಮಳೆ ಬಂದರೂ ಮ್ಯಾಚ್ ಮಾತ್ರ ನಡೆದೇ ನಡೆಯುತ್ತದೆ. ಚಿನ್ನಸ್ವಾಮಿ ಮೈದಾನವು ಸಬ್ ಏರ್ ಸಿಸ್ಟಂ ಹೊಂದಿದ್ದು, ಇದು ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಸತತವಾಗಿ 1 ಗಂಟೆ ಮಳೆಯಾದರೆ ಮೈದಾನದ ಒಳಗಿರುವ ಸಬ್ ಏರ್ ಸಿಸ್ಟಂ ಮೂಲಕ 10 ರಿಂದ 15 ನಿಮಿಷದೊಳಗೆ ಗ್ರೌಂಡ್​ ಅನ್ನು ಸಿದ್ಧಗೊಳಿಸಬಹುದು. ಅಲ್ಲದೆ ಸಬ್​ ಏರ್​ ಸಿಸ್ಟಂ ಕೊಳವೆಗಳ ಮೂಲಕ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಶೀಘ್ರದಲ್ಲೇ ಒಣಗಿಸುವ ವ್ಯವಸ್ಥೆ ಕೂಡ ಇದೆ.

Sulekha

Leave a Reply

Your email address will not be published. Required fields are marked *