ಆರ್‌ಸಿಬಿಗೆ ವರಕೊಟ್ಟ ಹೇಜಲ್‌ಗಾಡ್ – ಗುಜರಾತ್ ಟೈಟಾನ್ಸ್ ನಾಯಕ ಗಿಲ್ OUT
ಗುಜರಾತ್ ಟೈಟಾನ್ಸ್ ಭರವಸೆಯ ಬ್ಯಾಟರ್ ಸುದರ್ಶನ್ OUT

ಆರ್‌ಸಿಬಿಗೆ ವರಕೊಟ್ಟ ಹೇಜಲ್‌ಗಾಡ್ – ಗುಜರಾತ್ ಟೈಟಾನ್ಸ್ ನಾಯಕ ಗಿಲ್ OUTಗುಜರಾತ್ ಟೈಟಾನ್ಸ್ ಭರವಸೆಯ ಬ್ಯಾಟರ್ ಸುದರ್ಶನ್ OUT

ಆರ್‌ಸಿಬಿ ಮತ್ತು ಜಿಟಿ ನಡುವೆ ಫೈನಲ್ ಕದನ ನಡೆಯುತ್ತಿದೆ. ಆರ್‌ಸಿಬಿ ಮಾರಕ ಬೌಲಿಂಗ್ ದಾಳಿಗೆ ಗುಜರಾತ್ ಟೈಟಾನ್ಸ್ ಆರಂಭಿಕರು ಔಟ್ ಆಗಿದ್ದಾರೆ.

ಇದನ್ನೂ ಓದಿ:IPL ಗೆದ್ರೂ ಸೆಲೆಬ್ರೇಷನ್ ಇಲ್ಲ- RCB ಪ್ಲ್ಯಾನ್ ಹೇಗಿದೆ? ಕೊಹ್ಲಿನ ಕರೆಸ್ತಾರಾ ಡಿಕೆಶಿ?

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಕಪ್ ಗೆಲ್ಲುವ ಭರವಸೆ ಮೂಡಿಸಿದೆ. ಈಗಾಗಲೇ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕರು ಔಟ್ ಆಗಿದ್ದಾರೆ. ಶುಭ್‌ಮನ್ ಗಿಲ್ ಕೇವಲ 10 ರನ್ ಗಳಿಸಿ ಔಟಾಗಿದ್ದಾರೆ. ಗುಜರಾತ್ ಕ್ಯಾಪ್ಟನ್ ಫೈನಲ್ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿಸಿ ನಿರಾಸೆ ಮೂಡಿಸಿದರು. ಆದರೆ, ಆರ್‌ಸಿಬಿ ಬೌಲರ್ ಹೇಜಲ್‌ವುಡ್ ಪ್ರಿನ್ಸ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನಿಂಗ್ಸ್‌ನ ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಜೋಶ್ ಹ್ಯಾಜಲ್‌ವುಡ್ ಗುಜರಾತ್‌ಗೆ ಹೊಡೆತ ನೀಡಿದರು. ಶುಭ್‌ಮನ್ ಗಿಲ್‌ ರಜತ್ ಪಾಟಿದಾರ್​ಗೆ ಕ್ಯಾಚ್ ನೀಡಿದರು. ಗಿಲ್ ಎಂಟು ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಔಟಾದರು.ಅತ್ತ ಗಿಲ್ ಔಟಾಗುತ್ತಿದ್ದಂತೆ ಇತ್ತ ಸುದರ್ಶನ್ ಕೂಡಾ ಔಟಾದರು. ಭುವನೇಶ್ವರ್ ಕುಮಾರ್ ನಾಲ್ಕನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸಾಯಿ ಸುದರ್ಶನ್ ಅವರನ್ನು ಔಟ್ ಮಾಡಿದರು. ಈಗ ಜೋಸ್ ಬಟ್ಲರ್ ನಿಶಾಂತ್ ಸಿಂಧುಗೆ ಬೆಂಬಲ ನೀಡಲು ಬಂದಿದ್ದಾರೆ.

ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈಗ ರಜತ್ ಪಾಟೀದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿರುವುದು ಒಳ್ಳೆಯ ಆಯ್ಕೆ ಎಂದು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.

Sulekha