ರಾಜಸ್ಥಾನ ರಾಯಲ್‌ಗೆ ಮೊದಲ ಸೋಲಿನ ಶಾಕ್! – ಗೆದ್ದು ಬೀಗಿದ ಗುಜರಾತ್​ ಟೈಟನ್ಸ್

ರಾಜಸ್ಥಾನ ರಾಯಲ್‌ಗೆ ಮೊದಲ ಸೋಲಿನ ಶಾಕ್! – ಗೆದ್ದು ಬೀಗಿದ ಗುಜರಾತ್​ ಟೈಟನ್ಸ್

17ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ ಮೊದಲ ಸೋಲು ಕಂಡಿದೆ. ಜೈಪುರ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ​ ಪಂದ್ಯದಲ್ಲಿ ರಾಜಸ್ತಾನ್​ ರಾಯಲ್ಸ್​ ವಿರುದ್ಧ ಗುಜರಾತ್​ ಟೈಟನ್ಸ್​ ಗೆದ್ದು ಬೀಗಿದೆ.

ರಾಜಸ್ತಾನ್​​ ರಾಯಲ್ಸ್​​ ನೀಡಿದ 197 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಗುಜರಾತ್​ ಟೈಟನ್ಸ್​ ಪರ ಕ್ಯಾಪ್ಟನ್​ ಶುಭ್ಮನ್​ ಗಿಲ್​ 44 ಬಾಲ್​ನಲ್ಲಿ 2 ಸಿಕ್ಸರ್​​​, 6 ಫೋರ್​ ಸಮೇತ 72 ರನ್​ ಸಿಡಿಸಿದ್ರು. ಸಾಯಿ ಸುದರ್ಶನ್​​ 35, ವಿಜಯ್​ ಶಂಕರ್​ 16, ಶಾರುಖ್​ ಖಾನ್​​ 14, ತೆವಾಟಿಯಾ 20, ರಶೀದ್​ ಖಾನ್​​ 20 ರನ್​ ಗಳಿಸಿ ಗೆಲ್ಲಿಸಿದ್ರು.

ಇದನ್ನೂ ಓದಿ: ಸಾರಾ ಮೇಲೆ ಗಿಲ್‌ಗೆ ಲವ್ ಇಲ್ವಾ? – ಶುಬ್ಮನ್ ಪ್ರೇಮ್ ಕಹಾನಿಗೆ ಟ್ವಿಸ್ಟ್!

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ರಾಜಸ್ತಾನ್​ ರಾಯಲ್ಸ್​ ಪರ ಯಶಸ್ವಿ ಜೈಸ್ವಾಲ್​ 24 ರನ್​ಗೆ ಔಟಾದ್ರು. ಕ್ರೀಸ್​ನಲ್ಲೇ ನಿಂತು ಇನ್ನಿಂಗ್ಸ್​ ಮುಗಿಯೋವರೆಗೂ ಬ್ಯಾಟ್​ ಬೀಸಿದ ಸ್ಯಾಮ್ಸನ್​ 38 ಬಾಲ್​ನಲ್ಲಿ 2 ಸಿಕ್ಸರ್​​, 7 ಫೋರ್​ ಸಮೇತ 68 ರನ್​ ಸಿಡಿಸಿದ್ರು.

ಬ್ಯಾಕ್​ ಟು ಬ್ಯಾ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಜಸ್ತಾನ್​ ರಾಯಲ್ಸ್​ ಕೈ ಹಿಡಿದ ರಿಯಾನ್​ ಸಂಜು ಸ್ಯಾಮ್ಸನ್​ಗೆ ಸಾಥ್​ ಕೊಟ್ಟರು. ತಾನು ಎದುರಿಸಿದ 48 ಎಸೆತಗಳಲ್ಲಿ ಬರೋಬ್ಬರಿ 5 ಸಿಕ್ಸರ್​​, 3 ಫೋರ್​ ಸಮೇತ 76 ರನ್​ ಸಿಡಿಸಿದ್ರು. ಇದರ ಪರಿಣಾಮ ರಾಜಸ್ತಾನ್​ ರಾಯಲ್ಸ್​​ 3 ವಿಕೆಟ್​ ನಷ್ಟಕ್ಕೆ 20 ಓವರ್​ನಲ್ಲಿ 196 ರನ್​ ಕಲೆ ಹಾಕಿತ್ತು.

Shwetha M