ಎಣ್ಣೆ ಹಚ್ಚಿಲ್ಲವೆಂದು ಬ್ಲೇಡ್‌ನಿಂದ ಕೂದಲು ಕತ್ತರಿಸಿದ ಶಿಕ್ಷಕ – ಆಮೇಲೆ ಏನಾಯ್ತು ಗೊತ್ತಾ?

ಎಣ್ಣೆ ಹಚ್ಚಿಲ್ಲವೆಂದು ಬ್ಲೇಡ್‌ನಿಂದ ಕೂದಲು ಕತ್ತರಿಸಿದ ಶಿಕ್ಷಕ – ಆಮೇಲೆ ಏನಾಯ್ತು ಗೊತ್ತಾ?

ಶಾಲೆಗಳಲ್ಲಿ ಮಕ್ಕಳಿಗಾಗಿ ಕೆಲವೊಂದು ರೂಲ್ಸ್‌ ಮಾಡಿರ್ತಾರೆ. ಆ ನಿಯಮವನ್ನ ಮಕ್ಕಳು ಚಾಚು ತಪ್ಪದೇ ಪಾಲಿಸಬೇಕಾಗುತ್ತೆ. ಆದ್ರೀಗ ಇಲ್ಲೊಂದು ಕಡೆ ವಿದ್ಯಾರ್ಥಿನಿ ತಲೆಗೆ ಎಣ್ಣೆ ಹಚ್ಚಿಲ್ಲ ಎಂಬ ಕಾರಣಕ್ಕೆ ಕೂದಲು ಕತ್ತರಿಸಿರುವ ಅಮಾನವೀಯ ಘಟನೆ ನಡೆದಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್‌ – ಮಹಿಳೆಯರಿಗಾಗಿ  ಸಹಕಾರ ಸಂಘ!

ಅಷ್ಟಕ್ಕೂ ಆಗಿದ್ದೇನು?

ಈ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಜಾಮ್‌ನಗರದ ಸ್ವಾಮಿನಾರಾಯಣ ಗುರುಕುಲ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿನಿ ಕೂದಲಿಗೆ ಎಣ್ಣೆ ಹಚ್ಚಿಲ್ಲ ಎಂದು ಕೋಪಗೊಂಡಿದ್ದಾರೆ. ಬಳಿಕ  ಶಿಕ್ಷಕರು ವಿದ್ಯಾರ್ಥಿನಿಯ ಕೂದಲನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾರೆ. ಇದೀಗ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ನಂತರ, ಆಕೆಯ ಪೋಷಕರು ಜಿಲ್ಲಾ ಶಿಕ್ಷಣ ಅಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ಬೆನ್ನಲ್ಲೇ  ಶಿಕ್ಷಣ ಇಲಾಖೆ ಶಿಕ್ಷಕನನ್ನ ಶಾಲೆಯಿಂದ ವಜಾ ಮಾಡಲಾಗಿದೆ.

ವಿದ್ಯಾರ್ಥಿನಿಯ ತಾಯಿ ಅಂಜಲಿಬೆನ್ ಗಂಧಾ  ಶಿಕ್ಷೆಯ ರೀತಿಯನ್ನು ಟೀಕಿಸಿದ್ದಾರೆ.  ಶಾಲೆಯಲ್ಲಿ ಮಕ್ಕಳನ್ನು ಹೆಚ್ಚಾಗಿ ಸಣ್ಣ ವಿಷಯಗಳಿಗೆ ಶಿಕ್ಷಿಸಲಾಗುತ್ತದೆ. ಒಂದು ಮಗು ಪುಸ್ತಕವನ್ನು ಮರೆತರೂ ಸಹ, ಅದಕ್ಕೆ 100 ಸಿಟ್-ಅಪ್‌ಗಳಿಂದ ಶಿಕ್ಷೆ ವಿಧಿಸಲಾಗುತ್ತದೆ. ನಮ್ಮ ಮಕ್ಕಳು ಶಾಲೆ ಎಂದರೆ ಹೆದರುವಷ್ಟು ಭಯಪಡುತ್ತಾರೆ ಎಂದು ಆರೋಪಿಸಿದ್ದಾರೆ.

ಇನ್ನು ನವನಗರ ಸರ್ಕಾರಿ ಪ್ರೌಢಶಾಲೆಯಿಂದಲೂ ಇದೇ ರೀತಿಯ ದೂರು ದಾಖಲಾಗಿದ್ದು, ಅಲ್ಲಿ ಒಬ್ಬ ಶಿಕ್ಷಕರು ಇದೇ ರೀತಿಯ ಸಂದರ್ಭಗಳಲ್ಲಿ ವಿದ್ಯಾರ್ಥಿಯ ಕೂದಲನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸ್ವಾಮಿನಾರಾಯಣ ಗುರುಕುಲದ ಶಿಕ್ಷಣ ನಿರ್ದೇಶಕಿ ಶಶಿಬೆನ್ ದಾಸ್ ಶಿಕ್ಷಕರನ್ನು ವಜಾಗೊಳಿಸಿರುವುದನ್ನು ದೃಢಪಡಿಸಿದ್ದಾರೆ.

ನಮ್ಮ ಮಕ್ಕಳು ಉದ್ದವಾಗಿ ಕೂದಲು ಬೆಳೆಸಲು ನಾವು ಬಿಡುವುದಿಲ್ಲ. ಅವರು ಕೂದಲು ಕತ್ತರಿಸದಿದ್ದರೆ, ನಾವು ಅವರ ಪೋಷಕರಿಗೆ ಎಚ್ಚರಿಕೆ ನೀಡುತ್ತೇವೆ. ಆದಾಗ್ಯೂ, ಇದು ಹಾಗಲ್ಲ. ದೈಹಿಕ ಶಿಕ್ಷಣ ಶಿಕ್ಷಕರು ಮಗುವಿನ ಕೂದಲನ್ನು ಕತ್ತರಿಸಿದ್ದಾರೆ, ಅದಕ್ಕಾಗಿಯೇ ನಾವು ಅವರನ್ನು ವಜಾಗೊಳಿಸಿದ್ದೇವೆ. ಇತರ ಎಲ್ಲಾ ಶಿಕ್ಷಕರೊಂದಿಗೆ ಸಭೆ ನಡೆಸಲಾಯಿತು ಮತ್ತು ಎಲ್ಲರಿಗೂ ಇದರ ಬಗ್ಗೆ ತಿಳಿಸಲಾಯಿತು ಎಂದು ಶಾಲೆಯ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.

Shwetha M