ಗುಜರಾತ್ ಎಲೆಕ್ಷನ್ – ಸಿಲಿಂಡರ್ ಸಮೇತ ಬಂದು ಶಾಸಕರ ಮತದಾನ!

ಗುಜರಾತ್ ಎಲೆಕ್ಷನ್ – ಸಿಲಿಂಡರ್ ಸಮೇತ ಬಂದು ಶಾಸಕರ ಮತದಾನ!

ಗುಜರಾತ್: ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ತಮ್ಮ ನಿವಾಸದಿಂದ ಗ್ಯಾಸ್ ಸಿಲಿಂಡರ್ ಅನ್ನು ಸೈಕಲ್‌ ಹಿಂದೆ ಕಟ್ಟಿಕೊಂಡು ಬಂದು ವಿಭಿನ್ನ ರೀತಿಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಗುಜರಾತ್ ಚುನಾವಣೆ – 89 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ಗ್ಯಾಸ್ ಸಿಲಿಂಡರ್ ಅನ್ನು ಕಟ್ಟಿಕೊಂಡು ಸೈಕಲ್‌ನಲ್ಲಿ ಸವಾರಿ ಮಾಡುತ್ತಿದ್ದಾರೆ. ಅಲ್ಲದೇ ಸೈಕಲ್ ಮೇಲೆ ಇಂದಿನ ಗ್ಯಾಸ್ ಬೆಲೆ ಮತ್ತು 2014ರ ಗ್ಯಾಸ್ ಬೆಲೆಯನ್ನು  ಹೋಲಿಕೆ ಮಾಡಿದ ಫಲಕ ಅಂಟಿಸಲಾಗಿದೆ. ಈ ಮೂಲಕ ಗ್ಯಾಸ್ ಸಿಲಿಂಡರ್ ದರ ಏರಿಕೆ ವಿರುದ್ಧ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿ ಜನರ ಗಮನ ಸೆಳೆದಿದ್ದಾರೆ.

ಗುಜರಾತ್‌ನಲ್ಲಿ ಇಂದು (ಡಿಸೆಂಬರ್ 1) ರಂದು 89 ಸ್ಥಾನಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದೆ. ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ 788 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಅದರಲ್ಲಿ 69 ಮಹಿಳಾ ಮತದಾರರಿದ್ದಾರೆ.

suddiyaana