ಮುಂಬೈ ಇಂಡಿಯನ್ಸ್ಗೆ ಭರ್ಜರಿ ಗೆಲುವು- ಗುಜರಾತ್ ಜೈಂಟ್ಸ್‌ಗೆ ಸೋಲು

ಮಹಿಳಾ ಪ್ರೀಮಿಯರ್ ಲೀಗ್‌ನ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟ್ ಬೀಸಿದ ಗುಜರಾತ್ ತಂಡ 20 ಓವರ್‌ಗಳಿಗೆ 120 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಮುಂಬೈ ತಂಡಕ್ಕೆ 121 ರನ್‌ಗಳ ಗುರಿ ನೀಡಿತು.
ಗುಜರಾತ್ ನೀಡಿದ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡ 16.01 ಓವರ್‌ಗೆ ಗುರಿ ತಲುಪಿ ಸುಲಭ ಜಯಸಾಧಿಸಿತು. ನ್ಯಾಟ್ ಸ್ಕೀವರ್ ಬ್ರಂಟ್ 11 ಫೋರ್ ಹೊಡೆಯುವ ಮೂಲಕ 39 ಎಸೆತಗಳಿಗೆ 57 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಸ್ಕೀವರ್ ಹಾಗೂ ಅಮೆಲಿಯಾ ಕೆರ್ ಜೊತೆಯಾಟವಾಡಿ 38 ಎಸೆತಗಳಿಗೆ 45 ರನ್ ಕಲೆಹಾಕಿದರು. ಹೆಯಲಿ ಮ್ಯಾಥ್ಯೂಸ್ 17 ರನ್ , ಅಮೆಲಿಯಾ ಕೆರ್ 19 ರನ್ ಗಳಿಸಿ ಔಟಾದರು. ಸಜೀವನ್ ಸಜನ 10 ರನ್ ಹಾಗೂ ಜಿ ಕಮಲಿನಿ 4 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದಕ್ಕೂ ಮುನ್ನ ಬ್ಯಾಟ್ ಬೀಸಿದ ಗುಜರಾತ್ ತಂಡಕ್ಕೆ ಆರಂಭದಲ್ಲೇ ಹಿನ್ನಡೆ ಉಂಟಾಯಿತು. 1.2 ಓವರ್‌ನಲ್ಲೇ ಬೆತ್ ಮೂನಿ 3 ಎಸೆತಗಳಿಗೆ 1 ರನ್‌ಗಳಿಸಿ ಔಟಾದರು. ಕಾಶ್ವೀ ಗೌತಮ್ 2 ಫೋರ್ ಹಾಗೂ 1 ಸಿಕ್ಸ್ ಸಿಡಿಸಿ 15 ಎಸೆತಗಳಿಗೆ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಶ್ಲೇ ಗಾರ್ಡನರ್ 10 ಎಸೆತಗಳಿಗೆ 10 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಕಾಶ್ವೀ ಗೌತಮ್ ಹಾಗೂ ಹರ್ಲಿನ್ ಡಿಯೋಲ್ ಜೊತೆಯಾಟವಾಡಿ 19 ಎಸೆತಗಳಿಗೆ 24 ರನ್‌ಗಳ ಕಲೆಹಾಕಿದರು. ಹರ್ಲಿನ್ ಡಿಯೋಲ್ 4 ಫೋರ್ ಸಿಡಿಸಿ 31 ಬಾಲ್‌ಗಳಿಗೆ 32 ರನ್ ಗಳಿಸಿ ಔಟಾದರು.