ಗುಜರಾತ್ ಚುನಾವಣೆ- ಪತ್ನಿ ರಿವಾಬಾ ಪರ ಜಡೇಜಾ ಬ್ಯಾಟಿಂಗ್

ಜಾಮ್ ನಗರ: ಗುಜರಾತ್ ನಲ್ಲಿ ಚುನಾವಣಾ ಕಾವು ಜೋರಾಗಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಲ್ಲಿ ಬ್ಯೂಸಿಯಾಗಿದ್ದಾರೆ. ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಜಾಮ್ ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಸೋಮವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ- 15 ದಿನದಲ್ಲಿ 40ಕ್ಕೂ ಹೆಚ್ಚು ರ‍್ಯಾಲಿ ನಡೆಸಲಿದ್ದಾರೆ ಮೋದಿ
ನಾಮಪತ್ರ ಸಲ್ಲಿಸುವ ಮುನ್ನ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ರವೀಂದ್ರ ಜಡೇಜಾ ತನ್ನ ಪತ್ನಿ ಕುರಿತು ಮಾತನಾಡಿ, “ಇದು ಇವಳು ಮೊದಲ ಬಾರಿಗೆ ಎದುರಿಸುತ್ತಿರುವ ಚುನಾವಣೆ. ಅವಳು ಬಹಳಷ್ಟು ಕಲಿಯುವುದಿದೆ. ಇದರಲ್ಲಿ ಪ್ರಗತಿ ಹೊಂದುತ್ತಾಳೆ ಎಂದು ಭಾವಿಸುತ್ತಿದ್ದೇನೆ. ರಿವಾಬಾ ಸಹಾಯ ಮಾಡುವ ಸ್ವಭಾವದವಳು ಮತ್ತು ಯಾವಾಗಲೂ ಜನರಿಗೆ ಸಹಾಯ ಮಾಡುತ್ತಾಳೆ. ಆದ್ದರಿಂದ ರಾಜಕೀಯಕ್ಕೆ ಬಂದಳು. ಜನರಿಗಾಗಿ ಕೆಲಸ ಮಾಡಲು ಅವಳು ಪ್ರಧಾನಿ ಮೋದಿಯವರ ಮಾರ್ಗವನ್ನು ಅನುಸರಿಸುತ್ತಾಳೆ” ಎಂದು ಪ್ರಚಾರದ ಸಂದರ್ಭ ಹೇಳಿದ್ದಾರೆ.
ಗುಜರಾತ್ ನಲ್ಲಿ ಚುನಾವಣಾ ಕಣ ರಂಗೇರಿದ್ದು, ಬಿಜೆಪಿ, ಕಾಂಗ್ರೆಸ್, ಆಪ್ ಸೇರಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.