ಹ್ಯಾಟ್ರಿಕ್ ಗೆಲುವಿನ ಸಂಭ್ರಮದಲ್ಲಿ ಗುಜರಾತ್ – GT ಮ್ಯಾಜಿಕ್ಗೆ ಪಂಜಾಬ್ ಪಲ್ಟಿ

ಗುಜರಾತ್ ತಂಡ ತನ್ನ ತವರಿನಲ್ಲಿ ಗೆಲುವಿನ ಓಟ ಮುಂದುವರೆಸಿದೆ. ಅದರಲ್ಲೂ ಬಲಿಷ್ಠ ಪಂಜಾಬ್ ತಂಡಕ್ಕೆ ಸೋಲುಣಿಸಿದೆ. ಲಾಸ್ಟ್ ಓವರ್ನಲ್ಲಿ ಗೆದ್ದ ಗುಜರಾತ್ಗೆ ಇದು ಹ್ಯಾಟ್ರಿಕ್ ಜಯ. ಪಂಜಾಬ್ಗೆ ಈ ಆವೃತ್ತಿಯ ಎರಡನೇ ಸೋಲಾಗಿದೆ.
ಇದನ್ನೂ ಓದಿ:IPL ಜರ್ನಿಯಲ್ಲಿ RCBಯೇ ಬಾಸ್ – ಕೊಹ್ಲಿ, ಗೇಲ್, ಎಬಿಡಿ ದಾಖಲೆಗಳೆಷ್ಟು?
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಲಿಷ್ಠ ಪಂಜಾಬ್ ತಂಡವನ್ನು ಕೊನೆಯ ಓವರ್ನಲ್ಲಿ ಸೋಲಿಸುವ ಮೂಲಕ ಗುಜರಾತ್ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 163 ರನ್ ಕಲೆಹಾಕಿತು. ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿದಾಗ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟರ್ಸ್ ಕೈಕೊಟ್ಟರು. ಹಿಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ಮನ್ಗಳನ್ನು ಧ್ವಂಸ ಮಾಡಿದ್ದ ಗುಜರಾತ್ನ ವೇಗದ ಬೌಲಿಂಗ್ ವಿಭಾಗ ಈ ಬಾರಿ ಪಂಜಾಬ್ ಆಟಗಾರರನ್ನು ಕೂಡಾ ಬೆಂಡೆತ್ತಿದರು. ನಾಯಕ ಶ್ರೇಯಸ್ ಅಯ್ಯರ್ ಸೇರಿದಂತೆ ತಂಡದ ಅರ್ಧದಷ್ಟು ಆಟಗಾರರು ಕೇವಲ 47 ರನ್ಗಳಿಗೆ ಡಗೌಟ್ ಸೇರಿಕೊಂಡರು. ಅಲ್ಲಿಂದ ಸೂರ್ಯಾಂಶ್ ಶೆಡ್ಗೆ ಮತ್ತು ಮಾರ್ಕಸ್ ಸ್ಟೊಯಿನಿಸ್ ಪಂಜಾಬ್ನ ಇನ್ನಿಂಗ್ಸ್ ನಿಭಾಯಿಸಿದರು. 165 ರನ್ ಕಲೆಹಾಕಿದ ಪಂಜಾಬ್ ಸೂರ್ಯಂಶ್ ಒಂದೇ ಓವರ್ನಲ್ಲಿ ಮೂರು ಸಿಕ್ಸರ್ಗಳು ಮತ್ತು ಎರಡು ಬೌಂಡರಿಗಳನ್ನು ಬಾರಿಸಿ ಕೇವಲ 23 ಎಸೆತಗಳಲ್ಲಿ ತಮ್ಮ ಮೊದಲ ಐಪಿಎಲ್ ಅರ್ಧಶತಕವನ್ನು ಪೂರೈಸಿದರು. ಈ ಇಬ್ಬರೂ 44 ಎಸೆತಗಳಲ್ಲಿ 79 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಶೆಡ್ಗೆ 57 ರನ್ ಗಳಿಸಿದರೆ, ಸ್ಟೊಯಿನಿಸ್ 40 ರನ್ ಗಳಿಸಿದರು. ಮಾರ್ಕೊ ಯಾನ್ಸೆನ್ ಕೊನೆಯಲ್ಲಿ 21 ರನ್ ಗಳಿಸಿ ತಂಡವನ್ನು 165 ರನ್ಗಳಿಗೆ ತಲುಪಲು ಸಹಾಯ ಮಾಡಿದರು. ಗುಜರಾತ್ ಪರ ಹೋಲ್ಡರ್ ಕೇವಲ 24 ರನ್ಗಳಿಗೆ ನಾಲ್ಕು ವಿಕೆಟ್ಗಳನ್ನು ಪಡೆದರೆ, ಸಿರಾಜ್ ಮತ್ತು ರಬಾಡ ಕೂಡ ತಲಾ ಎರಡು ವಿಕೆಟ್ಗಳನ್ನು ಪಡೆದರು.
ಪಂಜಾಬ್ ಕೊಟ್ಟ 163 ರನ್ಗಳ ಗುರಿ ಬೆನ್ನಟ್ಟಿದ ಗುಜರಾತ್ ಎರಡನೇ ಓವರ್ನಲ್ಲಿ ನಾಯಕ ಶುಭಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡಿತು. ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡವನ್ನು ಬಲವಾದ ಸ್ಥಿತಿಯಲ್ಲಿರಿಸಿದರು. ನಿಯಮಿತ ಅಂತರದಲ್ಲಿ ತಂಡದ ವಿಕೆಟ್ಗಳು ಬೀಳುತ್ತಲೇ ಇದ್ದವು. ಆದರೆ ಸುದರ್ಶನ್ ಸಂಯಮದಿಂದ ಬ್ಯಾಟಿಂಗ್ ಮಾಡಿ ನಾಲ್ಕನೇ ಬಾರಿಗೆ 50 ರನ್ಗಳ ಗಡಿ ದಾಟುವ ಮೂಲಕ ತಂಡವನ್ನು 120 ರನ್ಗಳ ಗಡಿ ದಾಟಿಸಿದರು. ವಾಷಿಂಗ್ಟನ್ ಸುಂದರ್ ಗುಜರಾತ್ ಗೆಲುವಿನ ರೂವಾರಿಯಾದರು. ಅಂತಿಮ ಓವರ್ನಲ್ಲಿ ಗೆಲ್ಲಲು 11 ರನ್ಗಳ ಅಗತ್ಯವಿದ್ದಾಗ, ಅರ್ಷದ್ ಖಾನ್ ಬೌಂಡರಿ ಬಾರಿಸಿದರೆ, ಸುಂದರ್ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ನೋಡಿರಿ

