ಗುಜರಾತ್ ನಲ್ಲಿ 2ನೇ ಹಂತದ ಮತದಾನ – ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ

ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಯ 2ನೇ ಮತ್ತು ಕೊನೆಯ ಹಂತದ ಮತದಾನ ಇಂದು ನಡೆಯುತ್ತಿದೆ. 93 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಐತಿಹಾಸಿಕ ಗೆಲುವು ಸಾಧಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೇ, ಕಾಂಗ್ರೆಸ್ ಕೂಡಾ ಹೋರಾಟ ತೀವ್ರಗೊಳಿಸಿದೆ. ಇತ್ತ ಆಪ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಖಾತೆ ತೆರೆಯುವ ಲೆಕ್ಕಚಾರದಲ್ಲಿದೆ.
ಇದನ್ನೂ ಓದಿ: ‘ಕಾಂಗ್ರೆಸ್ ತನ್ನ ಪಕ್ಷದ ತುಂಬಾ ಗೂಂಡಾಗಳನ್ನೇ ತುಂಬಿಸಿಕೊಂಡಿದೆ’ – ಬಿಜೆಪಿ ಟ್ವೀಟ್ ತಿರುಗೇಟು
2ನೇ ಹಂತದಲ್ಲಿ ಮತದಾನ ನಡೆಯುವ 61 ಕ್ಷೇತ್ರಗಳಲ್ಲಿ, ರಾಜಕೀಯ ಪಕ್ಷಗಳ 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು ಎರಡು ಕೋಟಿ 51 ಲಕ್ಷದ 58 ಸಾವಿರದ 730 ಮತದಾರರು ಮತದಾನಕ್ಕೆ ಅರ್ಹವಾಗಿದ್ದಾರೆ. ಇದರಲ್ಲಿ ಒಂದು ಕೋಟಿ 29 ಲಕ್ಷದ 26 ಸಾವಿರದ 501 ಪುರುಷ ಹಾಗೂ ಒಂದು ಕೋಟಿ 22 ಲಕ್ಷದ 31 ಸಾವಿರದ 335 ಮಹಿಳಾ ಮತದಾರರಿದ್ದಾರೆ. ಮತದಾನಕ್ಕಾಗಿ 26,409 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಂದು ಲಕ್ಷದ 13 ಸಾವಿರದ 325 ಮತಗಟ್ಟೆ ಸಿಬ್ಬಂದಿ ಬೂತ್ ಗಳಲ್ಲಿ ಸಿದ್ಧತೆ ನಡೆಸಿದ್ದಾರೆ.
ಮೋದಿಯಿಂದ ಮತ ಚಲಾವಣೆ
2ನೇ ಹಂತದಲ್ಲಿ ಬನಸ್ಕಾಂತ, ಪಟಾನ್, ಮೆಹ್ಸಾನಾ, ಸಬರ್ಕಾಂತ, ಅರಾವಳಿ, ಗಾಂಧಿನಗರ, ಅಹಮದಾಬಾದ್, ಆನಂದ್, ಖೇಡಾ, ಮಹಿಸಾಗರ್, ಪಂಚ ಮಹಲ್, ದಾಹೋದ್, ವಡೋದರಾ ಮತ್ತು ಛೋಟಾ ಉದಯಪುರ ಸೇರಿ 14 ಜಿಲ್ಲೆಗಳಲ್ಲಿ 2ನೇ ಹಂತದ ಮತದಾನ ನಡೆಯಲಿದೆ. ಮಧ್ಯ ಮತ್ತು ಉತ್ತರ ಗುಜರಾತ್ನ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಪ್ರಮುಖರು ಇಂದು ಮತದಾನ ಮಾಡಿದ್ದಾರೆ.
ಈ ಮತದಾನದ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ನರೆಂದ್ರ ಮೋದಿ, ಅಹಮದಾಬಾದ್ನಲ್ಲಿ ನಾನು ಮತ ಚಲಾಯಿಸಿದ್ದೇನೆ. ಇಂದು ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.
Cast my vote in Ahmedabad. Urging all those voting today to turnout in record numbers and vote. pic.twitter.com/m0X16uCtjA
— Narendra Modi (@narendramodi) December 5, 2022