ಗುಜರಾತ್ ವಿಧಾನಸಭೆ ಚುನಾವಣೆ- 15 ದಿನದಲ್ಲಿ 40ಕ್ಕೂ ಹೆಚ್ಚು ರ‍್ಯಾಲಿ ನಡೆಸಲಿದ್ದಾರೆ ಮೋದಿ

ಗುಜರಾತ್ ವಿಧಾನಸಭೆ ಚುನಾವಣೆ- 15 ದಿನದಲ್ಲಿ 40ಕ್ಕೂ ಹೆಚ್ಚು ರ‍್ಯಾಲಿ ನಡೆಸಲಿದ್ದಾರೆ ಮೋದಿ

ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆ  ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಇಳಿಯಲಿದ್ದು, ಸುಮಾರು 15 ದಿನಗಳಲ್ಲಿ 40ಕ್ಕೂ ಹೆಚ್ಚು ಬೃಹತ್ ರ‍್ಯಾಲಿಗಳನ್ನು ನಡೆಸಲಿದ್ದಾರೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ:  ಶಿವಲಿಂಗ ಪತ್ತೆಯಾದ ಸ್ಥಳದ ರಕ್ಷಣೆಗೆ ಸುಪ್ರೀಂ ಆದೇಶ

ಪಕ್ಷದ ಮೂಲಗಳ ಪ್ರಕಾರ, ನವೆಂಬರ್ 15 ರಿಂದ ಮೋದಿ ರ‍್ಯಾಲಿಗಳನ್ನು ಆರಂಭಿಸಲಿದ್ದು, 12-15 ದಿನಗಳಲ್ಲಿ ಮೋದಿ 40 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರು, ಟಿವಿ, ಸಿನಿಮಾ ನಟರು, ಸ್ಟಾರ್ ಪ್ರಚಾರಕರ ದಂಡು ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆ.

ಈಗಾಗಲೇ ಬಹುತೇಕ ಟಿಕೆಟ್ ಹಂಚಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಕಡೆಯ 22 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಭಾನುವಾರದೊಳಗೆ ಅಂತಿಮ ಪಟ್ಟಿಯೂ ಬಿಡುಗಡೆಯಾಗಬಹುದು ಎಂದು ಮೂಲಗಳು ಹೇಳಿವೆ. ದುರ್ಬಲ ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಗೆಲುವುಗಾಗಿ ಪ್ರಚಾರ ಕಾರ್ಯ ಹೆಚ್ಚಲಿದೆ.

ದುರ್ಬಲ ಕ್ಷೇತ್ರಗಳ ಮೇಲೆ ಗೃಹ ಸಚಿವ ಅಮಿತ್ ಶಾ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಂದ್ರಿಕರಿಸಿದ್ದಾರೆ. ಜಾತಿ ಮತ್ತು ಸಮುದಾಯ ಸಮೀಕರಣಗಳ ಲೆಕ್ಕಾಚಾರದಲ್ಲಿ ಚುನಾವಣೆ ನಡೆಸುತ್ತಿರುವ ಬಿಜೆಪಿ ನರೇಂದ್ರ ಮೋದಿ ಪ್ರತಿ ರ‍್ಯಾಲಿಯಲ್ಲಿ 4-5 ವಿಧಾನಸಭೆ ಕ್ಷೇತ್ರಗಳು ಒಳಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗಿದೆ.

suddiyaana