ಗುಜರಾತ್ ಚುನಾವಣೆಗೆ ದಿನಾಂಕ ನಿಗದಿ: ಡಿ. 1 ಹಾಗೂ 5ಕ್ಕೆ ಮತದಾನ

ಗುಜರಾತ್ ಚುನಾವಣೆಗೆ ದಿನಾಂಕ ನಿಗದಿ: ಡಿ. 1 ಹಾಗೂ 5ಕ್ಕೆ ಮತದಾನ

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಿಸಲಾಗಿದೆ. ಡಿ. 1 ಮತ್ತು 5ರಂದು ನಡೆಯಲಿದೆ ಹಾಗೂ 8ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಅವರು ಸುದ್ದಿಗೋಷ್ಠಿ ನಡೆಸಿ ಚುನಾವಣೆ ಕುರಿತು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ವೈರಲ್ ವಿಡಿಯೋ… ಮನುಷ್ಯರನ್ನೇ ನಾಚಿಸುತ್ತೆ ಈ ಗಿಳಿಯ ಚಾಟಿಂಗ್ ಸ್ಪೀಡ್…

ಕಳೆದ ಬಾರಿಯಂತೆ ಈ ಬಾರಿಯೂ ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾ ಆಯುಕ್ತ ರಾಜೀವ್‌ಕುಮಾರ್‌ಗೆ ಹೇಳಿದ್ದಾರೆ. ಮೊದಲ ಹಂತದ ಮತದಾನ 1 ಡಿಸೆಂಬರ್ 2023 ರಂದು ಮತ್ತು ಎರಡನೇ ಹಂತದ ಮತದಾನ 5 ಡಿಸೆಂಬರ್ 2023 ರಂದು ನಡೆಯಲಿದೆ. ಹಿಮಾಚಲ ವಿಧಾನಸಭಾ ಚುನಾವಣೆಯ ಫಲಿತಾಂಶದೊಂದಿಗೆ ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ ಎಂದು ಸಿದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗುಜರಾತ್ ನಲ್ಲಿ ಈ ಬಾರಿ 4.9 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಅಲ್ಲದೇ ಈ ಬಾರಿ 4.6 ಲಕ್ಷ ಹೊಸ ಮತದಾರರು ಮತದಾನ ಮಾಡಲಿದ್ದಾರೆ. 51782 ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ. 142 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ವಿಕಲಚೇತನರಿಗಾಗಿ 182 ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗುವುದು. ಮಹಿಳೆಯರಿಗಾಗಿ 1274 ಮತಗಟ್ಟೆಗಳಿವೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ಯುವ ಮತಗಟ್ಟೆ ತಂಡದಿಂದ ಈ ಬಾರಿ 33 ಮತಗಟ್ಟೆಗಳು ಕಾರ್ಯನಿರ್ವಹಿಸಲಿದ್ದು, ಯುವಕರು ಮತದಾನ ಮಾಡಲು ಪ್ರೇರೇಪಿಸಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ಈ ಬಾರಿ ಶಿಪ್ಪಿಂಗ್ ಕಂಟೈನರ್ ಕೂಡ ಮತದಾನ ಕೇಂದ್ರವನ್ನಾಗಿ ಮಾಡಲಾಗಿದೆ. ಮೊದಲ ಬಾರಿಗೆ, ಶಿಪ್ಪಿಂಗ್ ಕಂಟೈನರ್‌ಗಳು ಮತದಾನ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಒಬ್ಬರೇ ಮತದಾರರಿರುವ ಗಿರ್ ಅರಣ್ಯಕ್ಕೆ ಒಂದು ಮತಗಟ್ಟೆ ಇರುತ್ತದೆ. ಚುನಾವಣಾ ಆಯೋಗದ ಪ್ರತಿನಿಧಿಗಳು ಅಂಚೆ ಮತಕ್ಕಾಗಿ ಹೋಗುತ್ತಾರೆ. ಒಬ್ಬರೇ ಮತದಾರರಿರುವ ಗಿರ್ ಅರಣ್ಯಕ್ಕೆ ಒಂದು ಮತಗಟ್ಟೆ ಇರುತ್ತದೆ ಎಂದಿದ್ದಾರೆ.

suddiyaana