ಸಾಲ ಮಾಡದಿದ್ದರೂ ಕಾರು ಹರಾಜು! ಮಾಲೀಕರು ಮಾಡಿದ ತಪ್ಪಾದ್ರೂ ಏನು ಗೊತ್ತಾ?

ಸಾಲ ಮಾಡದಿದ್ದರೂ ಕಾರು ಹರಾಜು! ಮಾಲೀಕರು ಮಾಡಿದ ತಪ್ಪಾದ್ರೂ ಏನು ಗೊತ್ತಾ?

ಸಾಲ ಪಡೆದು ಮರು ಪಾವತಿ ಮಾಡದೇ ಇದ್ದಾಗ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ವಾಹನದ ಮೇಲಿನ ಸಾಲ ಮರುಪಾವತಿ ಮಾಡದೇ ಇದ್ದಾಗ ವಾಹನವನ್ನು ಜಪ್ತಿ ಮಾಡಿ ಹರಾಜು ಕೂಗುವುದನ್ನು ಕೇಳಿದ್ದೇವೆ. ಆದರೆ ಚಂಡೀಗಢದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಈ ಇವರಿಬ್ಬರು ಯಾವುದೇ ಸಾಲ ಮಾಡಿಲ್ಲದಿದ್ದರೂ ಅವರ ಕಾರು ಜಪ್ತಿ ಮಾಡಿ ಹರಾಜಿಗೆ ಇಡಲಾಗಿದೆ.

ಚಂಡೀಗಢದ ಐಷಾರಾಮಿ ಸೆಕ್ಟರ್ 17 ರಲ್ಲಿ ಶಿವಾಲಿಕ್ ವ್ಯೂ ಹೆಸರಿನಲ್ಲಿ ಪಂಚತಾರಾ ಹೋಟೆಲ್ ಇದೆ. 2018 ರಲ್ಲಿ, ಅಶ್ವಿನಿ ಕುಮಾರ್ ಚೋಪ್ರಾ ಮತ್ತು ರಾಮ್ನಿಕ್ ಬನ್ಸಾಲ್ ಎಂಬುವವರು ಈ ಹೋಟೆಲ್‌ಗೆ ಬಂದಿದ್ದರು. ಸುಮಾರು 6 ತಿಂಗಳ ಕಾಲ ಹೋಟೆಲ್‌ನಲ್ಲಿ ಇದ್ದ ಇವರು ಸಾಕಷ್ಟು ಮೋಜು ಮಸ್ತಿ ಮಾಡಿದ್ದಾರೆ. ಹೋಟೆಲ್‌ನ ಪ್ರತಿಯೊಂದು ಸೌಲಭ್ಯವನ್ನು ಪಡೆದುಕೊಂಡು  ಎಂಜಾಯ್ ಮಾಡಿದ್ದಾರೆ. ಆದರೆ ಅವರಿಬ್ಬರಿಗೂ ಹೋಟೆಲ್ ಬಿಲ್ ಬಗ್ಗೆ ಯಾವುದೇ ಐಡಿಯಾ ಇರಲಿಲ್ಲ. ಸಿಬ್ಬಂದಿ ಬಳಿಯೂ ಈ ಬಗ್ಗೆ ವಿಚಾರಿಸಿರಲಿಲ್ಲ. 6 ತಿಂಗಳ ಬಳಿಕ ಹೋಟೆಲ್‌ ಬಿಟ್ಟು ತೆರಳುವಾಗ ಹೋಟೆಲ್ ಬಿಲ್ ನೋಡಿ ಕಂಗಾಲಾಗಿದ್ದಾರೆ.

ಇದನ್ನೂ ಓದಿ: 40 ದಿನಗಳಿಂದಲೂ ‘ಹುಚ್ಚು ದೊರೆ’ ನಾಪತ್ತೆ – ಅನಾರೋಗ್ಯವೋ.. ಶಕ್ತಿಪ್ರದರ್ಶನದ ತಂತ್ರವೋ..!?

ಉದ್ಯಮಿಗಳಿಬ್ಬರು 6 ತಿಂಗಳ ನಂತರ ಹೋಟೆಲ್‌ನಿಂದ ತೆರಳಲು ಚೆಕ್‌ಔಟ್‌ಗೆ ಬಂದಿದ್ದಾರೆ. ಈ ವೇಳೆ ಹೋಟೆಲ್ ಬಿಲ್ಲಿಂಗ್‌ ವಿಭಾಗದವರು ಬರೋಬ್ಬರಿ 19 ಲಕ್ಷದ ಬಿಲ್ ನೀಡಿದ್ದರು. ಉದ್ಯಮಿಗಳಾಗಿದ್ದರೂ ಕೂಡ ಅವರಲ್ಲಿ ಬಿಲ್‌ ಕಟ್ಟಲು ಅಷ್ಟೆಲ್ಲಾ ಹಣವಿರಲಿಲ್ಲ. ಬಿಲ್‌ ನೋಡಿದ ತಕ್ಷಣ ಇಬ್ಬರೂ ಕಂಗಾಲಾಗಿದ್ದಾರೆ. ಈ ವೇಳೆ ಇಬ್ಬರೂ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಅವರನ್ನು ಭದ್ರತಾ ಸಿಬ್ಬಂದಿ ತಡೆದು ಬಿಲ್‌ ಕಟ್ಟುವಂತೆ ಸೂಚಿಸಿದ್ದಾರೆ.

ಈ ವೇಳೆ ಇಬ್ಬರೂ ತಲಾ 6 ಲಕ್ಷದ 2 ಹಾಗೂ 7 ಲಕ್ಷದ ಒಂದು ಚೆಕ್‌ಅನ್ನು ಹೋಟೆಲ್‌ನವರಿಗೆ ನೀಡಿದ್ದಾರೆ. ಹೋಟೆಲ್‌ನವರು ಇಬ್ಬರನ್ನೂ ಬಂಧನದಲ್ಲಿಯೇ ಇರಿಸಿ, ಚೆಕ್‌ಅನ್ನು ಬ್ಯಾಂಕ್‌ಗೆ ಕಳುಹಿಸಿ ಪರೀಕ್ಷಿಸಿದ್ದಾರೆ. ಹೋಟೆಲ್ ಸಿಬ್ಬಂದಿ ನಿರೀಕ್ಷೆಯಂತೆ ಚೆಕ್‌ ಬೌನ್ಸ್ ಆಗಿತ್ತು. ಬಳಿಕ ಹೋಟೆಲ್‌ ಸಿಬ್ಬಂದಿ ಇವರಿಬ್ಬರ ಆಡಿ ಕ್ಯೂ 3 ಹಾಗೂ ಷವರ್ಲೆ ಕ್ರೂಜ್‌ ಕಾರುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 19 ಲಕ್ಷ ರೂಪಾಯಿಯನ್ನು ಕಟ್ಟಿದರೆ ಮಾತ್ರವೇ ಕಾರುಗಳನ್ನು ಕೊಡುವುದಾಗಿ ತಿಳಿಸಿದ್ದಾರೆ. ಈ ಎರಡು ಕಾರುಗಳ ಒಟ್ಟಾರೆ ಮಾರುಕಟ್ಟೆ ಬೆಲೆ  58 ಲಕ್ಷ ರೂಪಾಯಿ ಆಗಿದೆ. ಅಚ್ಚರಿಯೆಂದರೆ, ಅಂದು ಹಣ ತೆಗೆದುಕೊಂಡು ಬರ್ತೇವೆ ಎಂದು ಹೇಳಿ ಹೊರಟವರು, ಈವರೆಗೂ ಬರದೇ  5 ವರ್ಷದಿಂದ ನಾಪತ್ತೆಯಾಗಿದ್ದಾರಂತೆ.

ಈ ನಡುವೆ 2020ರಲ್ಲಿ ಸಿಟ್ಕೋ ಈ ಕುರಿತಾಗಿ ಚಂಡೀಗಢ ಚಿಲ್ಲಾ ಕೋರ್ಟ್‌ನಲ್ಲಿ ರಾಮ್ನೀಕ್‌ ಭನ್ಸಾಲ್‌ ವಿರುದ್ಧ ಕೇಸ್‌ ಕೂಡ ದಾಖಲಿಸಿತ್ತು. 2021ರ ಮಾರ್ಚ್‌ನಲ್ಲಿ ಸಮನ್ಸ್‌ ಕೂಡ ಜಾರಿಯಾಗಿತ್ತು. ಆದರೆ ಸಮನ್ಸ್‌ಗೂ ಉತ್ತರವಿರಲಿಲ್ಲ. ಇದರಿಂದಾಗಿ ಅಶ್ವಿನ್‌ ಕುಮಾರ್‌ ಚೋಪ್ರಾ ಹಾಗೂ ರಾಮ್ನಿಕ್‌ ಭನ್ಸಾಲ್‌ ಅವರ ಹೆಸರನಲ್ಲಿದ್ದ ಕಾರುಗಳನ್ನು ಹರಾಜು ಹಾಕಲು ಕೋರ್ಟ್‌ ಒಪ್ಪಿಗೆ ನೀಡಿತ್ತು.

ಕೋರ್ಟ್‌ನಿಂದ ಅನುಮತಿ ಪಡೆದ ಬಳಿಕ ಹೋಟೆಲ್ ಸಿಬ್ಬಂದಿ ಈ ಎರಡೂ ಕಾರುಗಳ ಹರಾಜಿಗೆ ದಿನ ನಿಗದಿ ಮಾಡಿದ್ದಾರೆ. ಫೆ. 14 ರಂದು ಕಾರುಗಳ ಹರಾಜು ನಡೆಯಲಿದೆ. 45 ಲಕ್ಷದ ಅಡಿ ಕ್ಯೂ 3 ಕಾರ್‌ನ ಮೂಲ ಬೆಲೆಯನ್ನು 10 ಲಕ್ಷ ರೂಪಾಯಿ ಹಾಗೂ 13 ಲಕ್ಷ ಷವರ್ಲೆ ಕ್ರೂಸ್‌ ಕಾರಿನ ಮೂಲ ಬೆಲೆಯನ್ನು 1.5 ಲಕ್ಷ ರೂಪಾಯಿಗೆ ನಿಗದಿ ಮಾಡಲಾಗಿದೆ. ಆಡಿ ಕ್ಯೂ 3 ಕಾರು 2012ರ ಮಾಡೆಲ್‌ ಆಗಿದ್ದರೆ, ಷವರ್ಲೆ ಕ್ರೂಸ್‌ ಕಾರು 2016ರ ಮಾಡೆಲ್‌ ಆಗಿದೆ.

suddiyaana