ಕುಸಿಯಿತು ನಿರ್ಮಾಣಗೊಳ್ಳುತ್ತಿರುವ ಸೇತುವೆ – 1,700 ಕೋಟಿ ರೂ. ನೀರಿನಲ್ಲಿ ಹೋಮ
ಪಾಟ್ನಾ: ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಬಿಹಾರದ ಖಗರಿಯಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಗುವನಿ ಸುಲ್ತಾನ್‌ಗಂಜ್ ಗಂಗಾ ಸೇತುವೆ ಕುಸಿದಿದೆ. ಈ ಸೇತುವೆಯನ್ನು ಬರೋಬ್ಬರಿ 1,700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ವರದಿಯಾಗಿದೆ. ಸೇತುವೆ ಕುಸಿಯುತ್ತಿರುವ ವಿಡಿಯೋವನ್ನು ಅಲ್ಲಿನ ಸ್ಥಳೀಯರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ಮತ್ತೆ ಸಂಭವಿಸಿದ ಭೂಕಂಪ – 7 ತಿಂಗಳಲ್ಲಿ 3 ಬಾರಿ ಸಂಭವಿಸಿದ ಭೂಕಂಪ..!
ಸೇತುವೆಯನ್ನು ಖಗಾರಿಯಾ, ಆಗುವನಿ ಮತ್ತು ಸುಲ್ತಾನ್‌ಗಂಜ್ ನಡುವೆ ಗಂಗಾ ನದಿಯ ಮೇಲೆ ನಿರ್ಮಿಸಲಾಗುತ್ತಿತ್ತು. ಏಪ್ರಿಲ್‌ನಲ್ಲಿ ಸುರಿದಿದ್ದ ಬಿರುಗಾಳಿ ಸಹಿತ ಭಾರಿ ಮಳೆಯ ಪರಿಣಾಮ ಸೇತುವೆಗೆ ಹಾನಿಯಾಗಿತ್ತು. 2 ವರ್ಷಗಳ ಹಿಂದೆಯೂ ಸೇತುವೆಯ ಒಂದು ಭಾಗ ಕುಸಿದಿತ್ತು ಎಂದು ವರದಿಗಳು ತಿಳಿಸಿವೆ.
ಏಪ್ರಿಲ್‌ನಲ್ಲಿ ಸೇತುವೆಗೆ ಹಾನಿಯಾಗಿದ್ದಾಗ ಕಳಪೆ ಕಾಮಗಾರಿಯ ಆರೋಪಗಳು ಕೇಳಿಬಂದಿದ್ದವು. ಆದರೂ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ನಿರ್ಮಾಣಹಂತದಲ್ಲಿದ್ದಾಗಲೇ ಸೇತುವೆ ಕುಸಿದಿದೆ. ಈ ಹಿನ್ನೆಲೆ ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಸರ್ಕಾರವನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
#WATCH | Under construction Aguwani-Sultanganj bridge in Bihar’s Bhagalpur collapses. The moment when bridge collapsed was caught on video by locals. This is the second time the bridge has collapsed. Further details awaited.
(Source: Video shot by locals) pic.twitter.com/a44D2RVQQO
— ANI (@ANI) June 4, 2023