ಡಿಕೆಶಿ ಸಿಎಂ ಆದ್ರೆ ನಿಲ್ಲುತ್ತಾ ಗ್ಯಾರಂಟಿ? ಫ್ರೀ ಕರೆಂಟ್ ಕಟ್, ಫ್ರೀ ಬಸ್‌ಗೆ ಬ್ರೇಕ್?
2000 ಹಣ ಕೂಡ ಬರಲ್ವಾ?

ಡಿಕೆಶಿ ಸಿಎಂ ಆದ್ರೆ ನಿಲ್ಲುತ್ತಾ ಗ್ಯಾರಂಟಿ? ಫ್ರೀ ಕರೆಂಟ್ ಕಟ್, ಫ್ರೀ ಬಸ್‌ಗೆ ಬ್ರೇಕ್?2000 ಹಣ ಕೂಡ ಬರಲ್ವಾ?

ರಾಜ್ಯದಲ್ಲಿ ಸಿಎಂ ಕುರ್ಚಿ ಕಚ್ಚಾಟ ಜೋರಾಗಿದೆ. ಸಿಎಂ ಬದಲಾವಣೆ ಆಗ್ತಾರೆ ಅನ್ನುವಾಗ ಒಬ್ಬೊಬ್ಬರಿಗೆ ಒಂದೊಂದು ಚಿಂತೆ ಶುರುವಾಗಿದೆ. ಸಿದ್ದರಾಮಯ್ಯಗೆ  ಸಿಎಂ ಕುರ್ಚಿ ಬಿಡಬೇಕು ಅನ್ನೋ ಚಿಂತೆಯಾದ್ರೆ, ಡಿಕೆಶಿಗೆ ಕುರ್ಚಿಯಲ್ಲಿ ಕುರುವುದು ಹೇಗೆ ಅನ್ನೋ ಚಿಂತೆ.. ಇನ್ನೂ ಶಾಸಕರಿಗೆ ಯಾರ್ ಸಿಎಂ ಆದ್ರೆ ನಮಗೆ ಲಾಭ ಆಗುತ್ತೆ ಅನ್ನೋ ಚಿಂತೆ.. ಮತ್ತೊಂದಷ್ಟು ಜನಕ್ಕೆ ಯಾರು ಮುಖ್ಯಮಂತ್ರಿಯಾದ್ರೆ ರಾಜ್ಯ ಅಭಿವೃದ್ಧಿಯಾಗುತ್ತೆ ಅನ್ನೋ ಚಿಂತೆ. ಗ್ಯಾರಂಟಿ ಯೋಜನೆ ಪಲಾನುಭವಿಗಳಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ 2-3 ತಿಂಗಳಿಗೆ ಒಮ್ಮೆಯಾದ್ರೂ ಗ್ಯಾರಂಟಿ ದುಡ್ಡು ಬರ್ತಿದೆ. ಡಿಕೆಶಿ ಸಿಎಂ ಆದ್ರೆ ಅದು ಬರುತ್ತಾ ಬರಲ್ವಾ ಅನ್ನೋ ಚಿಂತೆ.. ಹೌದು ಡಿಕೆಶಿ ಸಿಎಂ ಆದ್ರೆ ಗ್ಯಾರಂಟಿ ದುಡ್ಡು ಬರುತ್ತಾ ಬರಲ್ವಾ?  ಫ್ರೀ ಕರೆಂಟ್‌ ಕಟ್‌ ಆಗುತ್ತಾ, ಫ್ರೀ ಬಸ್‌ಗೆ ಬ್ರೇಕ್ ಬೀಳುತ್ತಾ ಅನ್ನೋ  ಚಿಂತೆ ಹೆಚ್ಚಾಗಿದೆ.

ಇದನ್ನೂ ಓದಿ: ಮೆಕ್ಕೆಜೋಳ ಮತ್ತು ಹೆಸರು ಕಾಳು ಬೆಳೆಗಳಿಗೆ ಬೆಂಬಲ ಬೆಲೆ ನೀಡಿ- ಮೋದಿಗೆ ಪತ್ರ ಕೊಟ್ಟ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಜೋರಾದ ಫೈಟ್ ನಡೆಯುತ್ತಿದೆ. ಡಿಕೆ ಶಿವಕುಮಾರ್ ಸಿಎಂ ಆಗುವುದು ಬಹುತೇಕ ಫಿಕ್ಸ್ ಎನ್ನಲಾಗ್ತಿದೆ. ಆದ್ರೆ ಜನರಿಗೆ ಕಾಡುತ್ತಿರೋ ಕಟ್ಟ ಕಡೆಯ ಪ್ರಶ್ನೆ ಅಂದ್ರೆ ಡಿಕೆಶಿ ಸಿಎಂ ಆದ್ರೆ ಗ್ಯಾರಂಟಿ ಯೋಜನೆಗಳು ನಿಲ್ಲುತ್ತಾ ಅಥವಾ ಕಂಟಿನ್ಯೂ ಆಗುತ್ತಾ ಅನ್ನೋದು.. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದ್ದಕ್ಕೆ ಐದು ಗ್ಯಾರಂಟಿ ಯೋಜನೆಗಳೇ ಕಾರಣ. ಮಹಿಳೆಯರಿಗೆ ತಿಂಗಳಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮಿ, ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡುವ ಶಕ್ತಿ,  ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ , ಯವನಿಧಿ  ಮತ್ತು ಅನ್ನಭಾಗ್ಯ ಯೋಜನೆಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜನ ಕೂಡ ಇದ್ರ ಉಪಯೋಗ ಪಡೆಯುತ್ತಿದ್ದಾರೆ. ಕರ್ನಾಟಕದ ಈ ಗ್ಯಾರಂಟಿ ಯೋಜನೆಗಳನ್ನ ಬೇರೆ ರಾಜ್ಯಗಳಲ್ಲೂ ಕೂಡ ಪ್ರಯೋಗ ಮಾಡಿದ್ದಾರೆ. ಅದರಲ್ಲೂ ಈಗ ಸಿಎಂ ಆಗಿರೋ ಸಿದ್ದರಾಮಯ್ಯ ಈ ಗ್ಯಾರಂಟಿ ಯೋಜನೆಗಳಿಂದಲೇ ಹೆಚ್ಚು ಪ್ರಸಿದ್ಧಿ ಪಡೆದವರು. ಜನರಿಗೆ ಹತ್ತಿರ ಆಗಿದ್ದಾರೆ. ಆದ್ರೆ ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕೆಳಗಿಳಿದ್ರೆ ಈ ಗ್ಯಾರಂಟಿ ಯೋಜನೆ ಜನರಿಗೆ ತಲುಪುತ್ತಾ ? ಡಿಕೆಶಿ ಈ ಯೋಜನೆಯನ್ನ ಕಂಟಿನ್ಯೂ ಆಗುತ್ತಾ ಪ್ರಶ್ನೆ ಜನರನ್ನ  ಬಿಟ್ಟು ಬಿಡದೆ ಕಾಡುತ್ತಿದೆ.

ಅಂದಹಾಗೇ ಈಗಾಗಲೇ ಗೃಹಲಕ್ಷ್ಮಿ ಯೋಜನೆ ದುಡ್ಡು ಸರಿಯಾಗಿ ಬರ್ತಿಲ್ಲ ಅನ್ನೋ ಮಾತಿದೆ. ಆಯಾ ತಿಂಗಳ ದುಡ್ಡು ಆಯಾ ತಿಂಗಳಿಗೆ ಬರ್ತಿಲ್ಲ.. 2-3 ತಿಂಗಳಿಗೆ ಒಮ್ಮೆ ಮಾತ್ರ ಗ್ಯಾರಂಟಿ ದುಡ್ಡು ಬರ್ತಿದೆ. ಸಾಕಷ್ಟು ಕಡೆ  ವಿದ್ಯುತ್ ಬಿಲ್ ಕೂಡ ಹೆಚ್ಚು ಬರ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ. ಆದ್ರೂ ಕೂಡ ಗ್ಯಾರಂಟಿ ಯೋಜನೆಗಳಿಗೆ ಜನ ಅಡ್ಜಸ್ಟ್ ಆಗಿ ಹೋಗಿದ್ದಾರೆ. ಗೃಹಲಕ್ಷ್ಮೀ ಬಂದಿಲ್ಲ ಅಂದ್ರೆ ಯಾಕ್ ಬಂದಿಲ್ಲ ಯಾವಾಗ ಬರುತ್ತೆ ಅಂತ ಮಾತನಾಡೋಕೆ ಶುರು ಮಾಡ್ತಾರೆ. ಹಾಗೇ ಫ್ರೀ ಕರೆಂಟ್ ಬಿಲ್ ನೋಡಿ ನೋಡಿ, ಬಿಲ್ ಕಟ್ಟೋಕೆ ಬಂದ್ರೂ ಕೂಡ ಜನರಿಗೆ ಅದು ದೊಡ್ಡ ಹೊರೆ ಅನ್ಸುತ್ತೆ.. ಅಭಿವೃದ್ಧಿ ಆಗದಿದ್ರೂ ಗ್ಯಾರಂಟಿ ಬೇಕೇ ಬೇಕು ಅನ್ನೋರು ಸಾಕಷ್ಟು ಜನ ಇದ್ದಾರೆ. ಸಿದ್ದರಾಮಯ್ಯ ಗ್ಯಾರಂಟಿಯಿಂದ ನಮ್ಮ ಜೀವನ ನಡೆಯುತ್ತಿದೆ ಅಂತ ಸಾಕಷ್ಟು ಜನ ಹೇಳುತ್ತಿದ್ದಾರೆ. ಹೀಗೆಲ್ಲಾ ಇರುವಾಗ ಡಿಕೆಶಿವಕುಮಾರ್ ಸಿಎಂ ಆದ್ರೆ ಗ್ಯಾರಂಟಿ ನಿಲ್ಲಿಸುತ್ತಾರೇನೋ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಯಾಕಂದ್ರೆ ಡಿಕೆಶಿ ಹೊಸ ಹೊಸ ಯೋಜನೆ ಜಾರಿಗೆ ತರುವುದ್ದಕ್ಕೆ ಪ್ಲ್ಯಾನ್ ಹಾಕಿದ್ದಾರೆ. ಆದ್ರೆ ಸರ್ಕಾರದ ದುಡ್ಡು  ಗ್ಯಾರಂಟಿ ಯೋಜನೆಗಳಿಗೆ ಸಾಕಾಗುತ್ತಿಲ್ಲ. ಅದ್ದಕ್ಕೆ ಡಿಕೆಶಿ ಇದ್ರಲ್ಲಿ ಯಾವುದಾದ್ರೂ ಒಂದೋ ಎರಡೇ ಗ್ಯಾರಂಟಿ ಯೋಜನೆ ನಿಲ್ಲಿಸುವ ಸಾಧ್ಯತೆ ಇದೆ. ಯಾವುದ್ದಕ್ಕೆ ಹೆಚ್ಚು ಹಣ ಹೋಗ್ತಿದೆ ಆ ಯೋಜನೆಯನ್ನ ನಿಲ್ಲಿಸಿದ್ರೂ ನಿಲ್ಲಿಸಬಹುದು.  ಹಾಗಂತ ಅದು ಸುಲಭ ಕೂಡ ಅಲ್ಲ. ಅದ್ದನ್ನ ನಿಲ್ಲಿಸಿದ್ರೂ ಕೂಡ ಜನರ ದ್ವೇಷವನ್ನ  ಡಿಕೆಶಿ ಕಟ್ಟಿಕೊಳ್ಳಬೇಕಾಗುತ್ತೆ.  ಸಿದ್ದರಾಮಯ್ಯ ಕೊಡುತ್ತಿದ್ದ 2000 ಹಣವನ್ನ ಡಿಕೆಶಿ ನಿಲ್ಲಿಸಿದ್ರು ನಮ್ಮ ಹೊಟ್ಟೆ ಮೇಲೆ ಹೊಡೆದ್ರು ಅಂತ ಫಾಲಾನುಭವಿಗಳು ಹೇಳಬಹುದು.. ಇನ್ನೂ ಫ್ರೀ ವಿದ್ಯುತ್ ನಿಲ್ಲಿಸಿದ್ರೂ ಕೂಡ ರೊಚ್ಚಿಗೇಳಬಹುದು.. ಶಕ್ತಿ  ಯೋಜನೆ ನಿಲ್ಲಿಸಿದ್ರೂ ಕೂಡ ಮಹಿಳೆಯರು ಸಿಡಿದೇಳುವ ಸಾಧ್ಯತೆ ಇದೆ. ಆದ್ರೆ ಯುವನಿಧಿ ಅಷ್ಟು ಎಫೆಕ್ಟ್ ಆಗಲ್ಲ. ಯಾಕಂದ್ರೆ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಹಾಗಿದೆ. ಇನ್ನೂ ಅನ್ನಭಾಗ್ಯ ಯೋಜನೆ ನಿಲ್ಲಿಸೋ ಸಾಹಸಕ್ಕೆ ಡಿಕೆಶಿ ಹೋಗಲ್ಲ. ಅನ್ನಭಾಗ್ಯ ನಿಲ್ಲಿಸಿದ್ರೆ ಎಲ್ಲಾ ವರ್ಗದ ಜನ ಡಿಕೆಶಿ ಮೇಲೆ ಸಿಡಿದೇಳುವ ಚಾನ್ಸ್ ತುಂಬಾ ಇದೆ. ಒಂದು ವೇಳೆ 5 ಯೋಜನೆಗಳನ್ನ ಮುಂದುವರಿಸಿಕೊಂಡು ಹೋದ್ರೂ ಕೂಡ ಅಭಿವೃದ್ಧಿ ಮಾಡೋಕೆ ಆಗಲ್ಲ.. ಹೋಗಿಲ್ಲ ಅಂದ್ರೂ ಸಮಸ್ಯೆ.. ನನ್ನ ಪ್ರಕಾರ ಡಿಕೆಶಿ ಸಿಎಂ ಪಟ್ಟಕ್ಕೆ ಏರಿದ ಮೇಲೆ ಒಂದಷ್ಟು ಸಮಯ ಈ ಗ್ಯಾರಂಟಿ ಯೋಜನೆಗಳನ್ನ ಕಂಟಿನ್ಯೂ ಮಾಡಬಹುದು. ಆಮೇಲೆ ಅಧಿಕಾರದ ಕೊನೆಯ 6 ತಿಂಗಳಲ್ಲಿ ಗ್ಯಾರಂಟಿ ಯೋಜನೆಯನ್ನ ಸರಿಯಾಗಿ ನಡೆಸಿಕೊಂಡು ಹೋಗಬುದು. ತಿಂಗಳು ತಿಂಗಳು ಸರಿಯಾಗಿ ದುಡ್ಡು ಹಾಕಬಹುದು. ಯಾಕಂದ್ರೆ   2028ರ ಎಲೆಕ್ಷೆನ್‌ನಲ್ಲೂ ಕಾಂಗ್ರೆಸ್ ಇದೇ ಯೋಜನೆಗಳನ್ನ ಇಡ್ಕೊಂಡು ಅಖಾಡಕ್ಕೆ ಇಳಿಯಲಿದೆ. ಹೀಗಾಗಿ ಈ ಯೋಜನೆಗಳನ್ನ ಕಂಟಿನ್ಯೂ ಮಾಡೋ ಸಾಧ್ಯತೆ ಹೆಚ್ಚಾಗಿದೆ.

Kishor KV