‘ಗ್ಯಾರಂಟಿ’ ಜಾರಿಗೆ ಶುಕ್ರವಾರದ ಮುಹೂರ್ತ – ಸಿದ್ದರಾಮಯ್ಯರಿಗೇ ಪರಮಾಧಿಕಾರ ಎಂದಿದ್ದೇಕೆ ಸಚಿವರು?  

‘ಗ್ಯಾರಂಟಿ’ ಜಾರಿಗೆ ಶುಕ್ರವಾರದ ಮುಹೂರ್ತ – ಸಿದ್ದರಾಮಯ್ಯರಿಗೇ ಪರಮಾಧಿಕಾರ ಎಂದಿದ್ದೇಕೆ ಸಚಿವರು?  

ಹೆಣ್ಮಕ್ಕಳಿಗೆ ಫ್ರೀ ಬಸ್ ಪಾಸ್ ಚಿಂತೆ. ಅತ್ತೆ, ಸೊಸೆಯಂದಿರದ್ದು 2 ಸಾವಿರ ರೂಪಾಯಿ ಯೋಚನೆ. 200 ಯುನಿಟ್ ಉಚಿತ ವಿದ್ಯುತ್, ಪದವೀಧರರಿಗೆ 3 ಸಾವಿರ ಹಣ, ಬಿಪಿಎಲ್ ಕುಟುಂಬಕ್ಕೆ ತಲಾ 10 ಕೆಜಿ ಅಕ್ಕಿ. ಹೀಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ್ಲಿಂದ ಎಲ್ಲಿ ಹೋದ್ರೂ ಈ 5 ಗ್ಯಾರಂಟಿಗಳದ್ದೇ ಗಲಾಟೆ. ಆದ್ರೆ ಈ ಯೋಜನೆಗಳ ಜಾರಿ ಯಾವಾಗ್ಲಿಂದ ಅನ್ನುವ ಗೊಂದಲಕ್ಕೆ ಮಾತ್ರ ಇನ್ನೂ ತೆರೆ ಬಿದ್ದಿಲ್ಲ. ಇವತ್ತು ಸಿಎಂ ನೇತೃತ್ವದಲ್ಲಿ ಸಚಿವರು ಸಭೆ ನಡೆಸಿದ್ದು, ಗುರುವಾರವೇ ಅಂತಿಮ ನಿರ್ಧಾರ ಹೊರಬೀಳುತ್ತೆ ಎನ್ನಲಾಗಿದೆ. ಆದರೆ ಸಭೆಯನ್ನ ಶುಕ್ರವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

ಇದನ್ನೂ ಓದಿ :  ‘ಹುಮ್ಮಸ್ಸಿನಲ್ಲಿ ನನಗೂ ಫ್ರೀ, ನಿನಗೂ ಫ್ರೀ ಎಂದಿದ್ದಾರೆ’ – ಶಾಸಕ ಶಿವಲಿಂಗೇಗೌಡ

ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸುವ ಕುರಿತು ಚರ್ಚೆ ನಡೆಸಿದ ಸಚಿವರು, ಯೋಜನೆಗಳ ಜಾರಿ ಪರಮಾಧಿಕಾರವನ್ನು ಸಿದ್ದರಾಮಯ್ಯನವರಿಗೆ ನೀಡಿದ್ದಾರೆ. ಇದೇ ವೇಳೆ, ಇಲಾಖಾವಾರು ಅನುದಾನ ಖಾಲಿ ಆಗುವ ಸಂಭವದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಕಾಲಾವಕಾಶ ಪಡೆದುಕೊಂಡು ಯೋಜನೆಗಳನ್ನು ಜಾರಿ ಮಾಡಿ. ಸಾಲದ ಮರುಪಾವತಿ ಅವಧಿ ವಿಸ್ತರಣೆ ಮಾಡಿಕೊಳ್ಳಬಹುದು ಎಂದು ಸಚಿವರು ಸಲಹೆ ನೀಡಿದ್ದಾರೆ. ಇದರ ನಡುವೆ ಗ್ಯಾರಂಟಿ ಯೋಜನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಗುರುವಾರ ನಿಗದಿಯಾಗಿದ್ದ ಮಹತ್ವದ ಸಂಪುಟ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಇನ್ನೂ ಒಮ್ಮತಕ್ಕೆ ಬರದ ಕಾರಣ ಸಿಎಂ ಸಂಪುಟ ಸಭೆಯನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ನಿರ್ಧಾರ ಪ್ರಕಟಿಸುವ ಮುನ್ನ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸುವ ನಿರೀಕ್ಷೆ ಇದೆ.

suddiyaana