MIಗೆ ಮ್ಯಾಚ್ ದಾನ ಮಾಡಿದ GT.. ಕ್ಯಾಚ್ ಮಿಸ್.. ಗಿಲ್ ಫೇಲ್.. ಕಾಸ್ಟ್ಲಿ ರನ್ಸ್! – ಫೈನಲ್ ಟಿಕೆಟ್ ಮುಂಬೈಗೆ ಬುಕ್ ಆಯ್ತಾ?

MIಗೆ ಮ್ಯಾಚ್ ದಾನ ಮಾಡಿದ GT.. ಕ್ಯಾಚ್ ಮಿಸ್.. ಗಿಲ್ ಫೇಲ್.. ಕಾಸ್ಟ್ಲಿ ರನ್ಸ್! – ಫೈನಲ್ ಟಿಕೆಟ್ ಮುಂಬೈಗೆ ಬುಕ್ ಆಯ್ತಾ?

ಬಿಗ್ ಡೇ.. ಬಿಗ್ ಮ್ಯಾಚಸ್ ಅಂತಾ ಬಂದಾಗ ಮುಂಬೈ ಇಂಡಿಯನ್ಸ್ ಯಾವಾಗ್ಲೂ ಮೋಸ್ಟ್ ಡೇಂಜರಸ್. ಈ ಸೀಸನ್ನಲ್ಲಿ ಅವ್ರು ಪ್ಲೇಆಫ್‌ ಗೆ ಸೆಲೆಕ್ಟ್ ಆಗಿದ್ದೇ ಒಂದು ದೊಡ್ಡ ಅಚೀವ್ಮೆಂಟ್. ಈಗ ಎಲಿಮಿನೇಟರ್ನಲ್ಲಿ ಗುಜರಾತ್ ತಂಡವನ್ನ ಮಣಿಸಿ ಕ್ವಾಲಿಫೈಯರ್ -2ಗೆ ಎಂಟ್ರಿ ಕೊಟ್ಟಿದ್ದಾರೆ. ಬಟ್ ಗುಜರಾತ್ ತಂಡದ ಮಿಸ್ಟೇಕ್ಸ್ ಕೂಡ ಎಂಐ ಗೆಲುವಿಗೆ ಪ್ಲಸ್ ಆಗಿದ್ದೂ ನಿಜ. ಅದು ಹೇಗೆ ಅನ್ನೋದನ್ನ ಹೇಳ್ತೇನೆ. ನಾನು ಶಾಂತಾ. ನೀವು ಸುದ್ದಿಯಾನದ ಸಬ್ ಸ್ಕ್ರೈಬರ್ ಆಗೋದಿಕ್ಕೆ ಮರೀಬೇಡಿ.
ಪಂಜಾಬ್‌ ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 18ನೇ ಸೀಸಮ್ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಗೆದ್ದವ್ರು ಕ್ವಾಲಿಫೈಯರ್ -2ಗೆ ಹಾಗೇ ಸೋತವ್ರು ಮನೆಗೆ ಅನ್ನೋದು ಮೊದ್ಲೇ ಡಿಸೈಡ್ ಆಗಿದ್ದಿಂದ ಇಬ್ಬರ ಪಾಲಿಗೂ ಇದು ಡು ಆರ್ ಡೈ ಮ್ಯಾಚ್. ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಚೂಸ್ ಮಾಡ್ಕೊಂಡಿದ್ರು. ಪಾಂಡ್ಯರ ಈ ನಿರ್ಧಾರ ಸರಿ ಎನ್ನುವಂತೆ ಅಬ್ಬರಿಸಿದ್ದು ಎಂಐ ಬ್ಯಾಟರ್ಸ್. ಅದೂ ಕೂಡ ಮಾಜಿ ನಾಯಕ ರೋಹಿತ್ ಶರ್ಮಾ.

ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿಗೆ ಭಾರೀ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಆದೇಶ

ರನ್ ಮಳೆ ಸುರಿಸಿದ ರೋಹಿತ್ & ಜಾನಿ ಬೈರ್ ಸ್ಟೋವ್!

ಮುಂಬೈ ಪರ ರೋಹಿತ್ ಶರ್ಮಾ ಮತ್ತು ಜಾನಿ ಬೈರ್ಸ್ಟೋವ್ ಇನ್ನಿಂಗ್ಸ್ ಆರಂಭಿಸಿದ್ರು. ರಿಯಾನ್ ರಿಕಲ್ಟನ್ ಆಬ್ಸೆನ್ಸ್ನಲ್ಲಿ ಬಂದ ಬೈರ್ ಸ್ಟೋಬ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ರು. ಇವರಿಬ್ಬರ ನಡುವೆ ಮೊದಲ ವಿಕೆಟ್ಗೆ 84 ರನ್ಗಳ ಕೊಡುಗೆ ನೀಡಿದ್ರು. ಬೈರ್ಸ್ಟೋವ್ ಅಂತೂ 22 ಎಸೆತಗಳಲ್ಲೇ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ಗಳ ಸಹಾಯದಿಂದ 47 ರನ್ ಗಳಿಸಿ ಔಟಾದರು. ಇದರ ನಂತರ ರೋಹಿತ್, ಸೂರ್ಯಕುಮಾರ್ ಯಾದವ್ ಅವರ ಜೊತೆಗೂಡಿ 34 ಎಸೆತಗಳಲ್ಲಿ 59 ರನ್ ಚಚ್ಚಿದ್ರು. ಈ ಟೈಮಲ್ಲಿ ಸೂರ್ಯ 33 ರನ್ಗಳಿಗೆ ಪೆವಿಲಿಯನ್ಗೆ ಮರಳಿದರು. ಬಟ್ ಹಿಟ್ಮ್ಯಾನ್ ಮಾತ್ರ ಪವರ್ ಹಿಟ್ಟರ್ ಆಗಿದ್ದು. ತಿಲಕ್ ವರ್ಮಾ ಜೊತೆ ಸೇರಿ ರನ್ ಚಚ್ಚೋಕೆ ಶುರು ಮಾಡಿದ್ರು. ಅಂತಿಮವಾಗಿ ರೋಹಿತ್ 50 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳ ಸಹಾಯದಿಂದ 81 ರನ್ ಗಳಿಸಿ ರೋಹಿತ್ ಔಟ್ ಆದ್ರು. ತಿಲಕ್, ನಮನ್ ಧೀರ್ ಹಾಗೇ ಹಾರ್ದಿಕ್ ಪಾಂಡ್ಯ ಕೂಡ ಸ್ಫೋಟಕ ಇನ್ನಿಂಗ್ಸ್ ಆಡಿದ್ರಿಂದ 5 ವಿಕೆಟ್ ನಷ್ಟಕ್ಕೆ 228 ರನ್ಸ್ ಸ್ಕೋರ್ ಮಾಡಿದ್ರು.

ಸುದರ್ಶನ್ & ಸುಂದರ್ ಗೆ ಸಿಗ್ಲಿಲ್ಲ ನಿರೀಕ್ಷಿತ ಸಪೋರ್ಟ್!

ಬೃಹತ್ ಟಾರ್ಗೆಟ್ ಅಂದಾಗ ಎಲ್ಲಾ ಬ್ಯಾಟರ್ಸ್ ಕೂಡ ಜವಾಬ್ದಾರಿ ತಗೊಳ್ಬೇಕಿತ್ತು. ಬಟ್ ಅದು ಆಗ್ಲಿಲ್ಲ. ಅದ್ರಲ್ಲೂ ಬಿಗ್ ಗೇಮ್ನಲ್ಲೇ ಶುಭ್ಮನ್ ಗಿಲ್ ಸರೆಂಡರ್ ಆದ್ರು. ಒಂದೇ ಒಂದು ರನ್ ಗಳಿಸಿ ಔಟ್ ಆದ್ರು. ಸಾಯಿ ಸುದರ್ಶನ್ ಮತ್ತು ಕುಸಾಲ್ ಮೆಂಡಿಸ್ ಜೋಡಿ ಚೆನ್ನಾಗಿ ಆಡ್ತಿದೆ ಅನ್ನುವಷ್ಟ್ರಲ್ಲೇ ಕುಸಾಲ್ ಹಿಟ್ ವಿಕೆಟ್. ಬಟ್ ಆ ಬಳಿಕ ಸುದರ್ಶನ್ಗೆ ಜೊತೆಯಾದ ವಾಷಿಂಗ್ಟನ್ ಸುಂದರ್ ಅದ್ಭುತವಾಗಿ ಬ್ಯಾಟ್ ಬೀಸ್ತಿದ್ರು. ಸುದರ್ಶನ್, ವಾಷಿಂಗ್ಟನ್ ಸುಂದರ್ ಜೊತೆಗೂಡಿ 44 ಎಸೆತಗಳಲ್ಲಿ 84 ರನ್ಗಳ ಪಾಲುದಾರಿಕೆ ನಿರ್ಮಿಸಿದರು. ಬಟ್ ಸುಂದರ್ ವಿಕೆಟ್ ಕಿತ್ತು ಬುಮ್ರಾ ಬ್ರೇಕ್ ಥ್ರ್ಯೂ ತನ್ಕೊಟ್ರು. ಅಂಡರ್ ಪ್ರೆಶರ್ನಲ್ಲಿದ್ದ ಸುದರ್ಶನ್ ಕೂಡ 80 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಇಬ್ಬರ ವಿಕೆಟ್ ಬೀಳ್ತಿದ್ದಂತೆ ಗುಜರಾತ್ ಗೆಲುವಿನ ಕನಸೂ ನುಚ್ಚು ನೂರಾಯ್ತು. ಕೊನೆಗೆ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಲಷ್ಟೇ ಸಾಧ್ಯವಾಯ್ತು. ಅಷ್ಟಕ್ಕೂ ಈ ಮ್ಯಾಚ್ನಲ್ಲಿ ಮುಂಬೈ ಗೆಲ್ಲೋಕೆ ಗುಜರಾತ್ ಫೀಲ್ಡರ್ ಮಿಸ್ಟೇಕ್ಸ್ & ಎಂಐ ಗೇಮ್ ಪ್ಲ್ಯಾನ್ ವರ್ಕೌಟ್ ಆಯ್ತು. ಅದು ಹೇಗೆ ಅಂದ್ರೆ..

ಮುಂಬೈ ಗೆಲುವಿಗೆ ಕಾರಣಗಳು!

ಮಸ್ಟ್ ವಿನ್ ಮ್ಯಾಚ್ನಲ್ಲಿ ಗುಜರಾತ್ ಬೌಲರ್ಸ್ ಸಿಕ್ಕಾಪಟ್ಟೆ ಕಾಸ್ಟ್ಲಿ ಆದ್ರು. ಜೆರಾಲ್ಡ್ ಕೋಟ್ಜೀ, ಪ್ರಸಿದ್ಧ್ ಕೃಷ್ಣ ದಾರಾಳವಾಗಿ ರನ್ ಕೊಟ್ರು. ರಶೀದ್ ಖಾನ್ ರನ್ ಎಕಾನಮಿ ಕಡಿಮೆ ಇದ್ರೂ ಯಾವುದೇ ವಿಕೆಟ್ ಪಡೆಯಲಿಲ್ಲ. ಇನ್ನು ಈ ಮ್ಯಾಚಲ್ಲಿ ಕುಸಾಲ್ ಮೆಂಡಿಸ್ ಕೂಡ ಕೂಡ ಜಿಟಿಗೆ ವಿಲನ್ ಆದ್ರು. ವಿಕೆಟ್ ಕೀಪಿಂಗ್ ಮಾಡುವಾಗ ಮೆಂಡಿಸ್ ಎರಡು ಕ್ಯಾಚ್ಗಳನ್ನು ಕೈಚೆಲ್ಲಿದರು. ರೋಹಿತ್ & ಸೂರ್ಯಕುಮಾರ್ ಕ್ಯಾಚ್. ಅದ್ರಲ್ಲೂ ರೋಹಿತ್ ಶರ್ಮಾ ಕ್ಯಾಚ್ ಗುಜರಾತ್ ತಂಡಕ್ಕೆ ದುಬಾರಿಯಾಯ್ತು. ಹೋಗ್ಲಿ ಬ್ಯಾಟಿಂಗ್ನಲ್ಲಾದ್ರೂ ಆಡ್ತಾರೆ ಅಂದ್ರೆ ಹಿಟ್ ವಿಕೆಟ್ ಆದ್ರು. ಇನ್ನು ಈ ಮ್ಯಾಚಲ್ಲಿ ಗುಜರಾತ್ ಫೀಲ್ಡರ್ಸ್ 3 ಸಲ ಕ್ಯಾಚ್ ಮಿಸ್ ಆಗಿದ್ರು. ರೋಹಿತ್ರದ್ದು ಆರಂಭದಲ್ಲೇ ವಿಕೆಟ್ ಬೀಳ್ಬೇಕಿತ್ತು. ಬಟ್ 2 ಸಲ ಮಿಸ್ ಮಾಡಿದ್ರು. ಬ್ಯಾಟಿಂಗ್ ನಲ್ಲೂ ಕೂಡ ಜಿಟಿ ಮಿಸ್ಟೇಕ್ಸ್ ಎದ್ದು ಕಾಣ್ತಿದ್ವು. ಎಲಿಮಿನೇಟರ್ ಪಂದ್ಯದಲ್ಲೇ ಶುಭ್ಮನ್ ಗಿಲ್ ಫಸ್ಟ್ ಓವರ್ನಲ್ಲೇ 1 ರನ್ ಗಳಿಸಿ ಪೆವಿಲಿಯನ್ ಸೇರ್ಕೊಂಡ್ರು.

ಇದೆಲ್ಲಾ ಗುಜರಾತ್ ಸೋಲಿಗೆ ಕಾರಣ ಆಯ್ತು. ಅದೂ ಅಲ್ದೇ ಬಿಗ್ ಮ್ಯಾಚ್ಗಳಲ್ಲಿ ಮುಂಬೈ ಯಾವಾಗ್ಲೂ ಥ್ರೆಟ್ ಆಗೇ ಇರುತ್ತೆ. ಯಾಕಂದ್ರೆ ಅಲ್ಲಿ ಇಂಟರ್ನ್ಯಾಷನಲ್ ಮ್ಯಾಚ್ಗಳನ್ನ ಆಡೋ ದೊಡ್ಡ ಪಡೆಯೇ ಇರುತ್ತೆ. ಜೊತೆಗೆ ಜಸ್ಪ್ರೀತ್ ಬುಮ್ರಾನಂತ ವಿಶ್ವಶ್ರೇಷ್ಠ ಬೌಲರ್ ಇದ್ದಾಗ ಯಾವಾಗ ಬೇಕಿದ್ರೂ ಮೊಮೆಂಟಮ್ ಶಿಫ್ಟ್ ಮಾಡಿ ಬಿಡ್ತಾರೆ. ನಿನ್ನೆ ಮ್ಯಾಚಲ್ಲಿ ಆಗಿದ್ದೂ ಕೂಡ ಅದೇ.

Shwetha M

Leave a Reply

Your email address will not be published. Required fields are marked *